One Nation One Election : ರಾಷ್ಟ್ರಪತಿಯ ಬಳಿ ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವದ ವರದಿ ಸಲ್ಲಿಕೆ !

೨೦೨೯ ರಲ್ಲಿ ಲೋಕಸಭಾ ಮತ್ತು ಎಲ್ಲಾ ವಿಧಾನಸಭೆಯ ಚುನಾವಣೆಗಳು ಒಟ್ಟಾಗಿ ನಡೆಸುವ ಸೂಚನೆ !

ನವ ದೆಹಲಿ – ಕೆಲವು ವರ್ಷಗಳ ಹಿಂದೆ ಪ್ರಧಾನಮಂತ್ರಿ ಮೋದಿ ಇವರು ಒಂದು ದೇಶದಲ್ಲಿ ಒಂದು ಚುನಾವಣೆ ನಡೆಯಬೇಕು ಅಂದರೆ ಸಂಸತ್ತು ಮತ್ತು ಎಲ್ಲಾ ರಾಜ್ಯಗಳ ಚುನಾವಣೆಗಳು ಒಂದೇ ಸಮಯದಲ್ಲಿ ನಡೆಯಬೇಕೆಂದು ಪ್ರಸ್ತಾವ ಮಂಡಿಸಿದ್ದರು. ಇದರ ಬಗ್ಗೆ ಅಧ್ಯಯನದ ವರದಿ ಮಾರ್ಚ್ ೧೪ ರಂದು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಇವರು ರಾಷ್ಟ್ರಪತಿ ದ್ರೌಪದಿ ಮೂರ್ಮು ಇವರಿಗೆ ಹಸ್ತಾಂತರಿಸಿದರು. ಈ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾಹ ಇವರು ಕೂಡ ಉಪಸ್ಥಿತರಿದ್ದರು. ಈ ವರದಿ ೧೮ ಸಾವಿರದ ೬೨೬ ಪುಟಗಳಷ್ಟಿದೆ.

೧. ಸಪ್ಟೆಂಬರ್ ೨೦೨೩ ರಲ್ಲಿ ಸ್ಥಾಪಿಸಲಾದ ನಂತರ ಈ ಸಮಿತಿಯು ಕೇವಲ ೧೯೧ ದಿನಗಳಲ್ಲಿ ಇದರ ಬಗ್ಗೆ ವಿಚಾರ ಮಂಥನ ನಡೆಸಿ ಈ ವರದಿಯನ್ನು ಒಪ್ಪಿಸಿದೆ. ಈ ಸಮಿತಿಯು ೨೦೨೯ ರಲ್ಲಿ ಒಂದೇ ಸಮಯದಲ್ಲಿ ಚುನಾವಣೆ ನಡೆಸಲು ಸೂಚಿಸಿದೆ. ಪ್ರಾರ್ಥಮಿಕ ಹಂತದಲ್ಲಿ ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳ ಚುನಾವಣೆ ನಡೆಸಲು ಸೂಚಿಸಿದೆ. ಎರಡನೇ ಹಂತದಲ್ಲಿ ಈ ಚುನಾವಣೆಯು ೧೦೦ ದಿನದ ಒಳಗೆ ಸ್ಥಳಿಯ ಸ್ವರಾಜ್ಯ ಸಂಸ್ಥೆಯ ಚುನಾವಣೆ ನಡೆಸಬೇಕು ಎಂದು ಕೂಡ ಸೂಚಿಸಿದೆ.

೨. ಲೋಕಸಭಾ ಚುನಾವಣೆಯ ಘೋಷಣೆಯ ಮೊದಲು ಈ ವರದಿ ಬಂದಿರುವುದರಿಂದ ಅದಕ್ಕೆ ಮಹತ್ವ ದೊರೆತಿದೆ ಆದರೂ ಈ ಸಮಯದ ಚುನಾವಣೆ ಒಟ್ಟಾಗಿ ನಡೆಯಲು ಸಾಧ್ಯವಿಲ್ಲ ಎಂದು ಚುನಾವಣೆ ಆಯೋಗವು ಈ ಮೊದಲೇ ಸ್ಪಷ್ಟಪಡಿಸಿತ್ತು.

೩. ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವದ ಅಧ್ಯಯನ ನಡೆಸುವುದಕ್ಕಾಗಿ ಒಂದು ಉನ್ನತ ಮಟ್ಟದ ಸಮಿತಿ ಸ್ಥಾಪಿಸಿದ್ದಾರೆ. ಕೊವಿಂದ ಇವರ ನೇತೃತ್ವದಲ್ಲಿ ಸ್ಥಾಪಿಸಿರುವ ಈ ಸಮಿತಿಯಲ್ಲಿ ಅಮಿತ ಶಹಾ, ರಾಜ್ಯಸಭೆಯಲ್ಲಿನ ಮಾಜಿ ವಿರೋಧಿ ಪಕ್ಷದ ನಾಯಕ ಗುಲಾಮ ನಬಿ ಆಜಾದ್, 15ನೆಯ ವಿತ್ತ ಆಯೋಗದ ಅಧ್ಯಕ್ಷ ಎನ್.ಕೆ. ಸಿಂಹ ಮತ್ತು ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಷ ಸಿ. ಕಶ್ಯಪ ಸಹಿತ ಇತರರೂ ಸಹಭಾಗಿದ್ದರು. ಈ ವರದಿಗಾಗಿ ಈ ಸಮಿತಿಯು ಬೇರೆ ಬೇರೆ ಪಕ್ಷ, ತಜ್ಞರು, ಮಾಜಿ ಚುನಾವಣಾ ಆಯುಕ್ತರು ಮುಂತಾದವರ ಜೊತೆಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ.