ಗುಜರಾತ: ಅಕ್ರಮ ದರ್ಗಾ ಮತ್ತು ಮದರಸಾಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ !

ಕರ್ಣಾವತಿ (ಗುಜರಾತ) – ಗುಜರಾತಿನಲ್ಲಿ ಕಳೆದ ಕೆಲವು ದಿನಗಳಲ್ಲಿ ಅಕ್ರಮವಾಗಿ ಕಟ್ಟಲಾದ ದರ್ಗಾ ಮತ್ತು ಮದರಸಾಗಳ ಮೇಲೆ ಕ್ರಮ ಕೈಗೊಂಡ ಸರ್ಕಾರ ಅವುಗಳನ್ನು ನೆಲೆಸಮ ಮಾಡಿದೆ.

ಮಾರ್ಚ್ ೧೨ರರಂದು ಕಛ್ ದಲ್ಲಿನ ಅಂಜಾರ್ ಸರಕಾರಿ ಜಾಗದಲ್ಲಿ ಕಟ್ಟಿರುವ ಹಾಜಿಪೀರ್ ದರ್ಗಾ, ನಾಗೇಶಪೀರ ದರ್ಗಾ ಮತ್ತು ವಲ್ಲಿಪೀರ ದರ್ಗಾ, ಈ ೩ ದರ್ಗಾಗಳನ್ನು ಬುಲ್ಡೋಜರ್ ಮೂಲಕ ನೆಲೆಸನ ಮಾಡಲಾಗಿದೆ. ಈ ವೇಳೆ ಸರಕಾರದಿಂದ ಕಠಿಣ ಪೊಲೀಸ ಬಂದೋಬಸ್ತ್ ಮಾಡಲಾಗಿತ್ತು. ಕಾರ್ಯಾಚರಣೆಯ ಮೊದಲು ಅಕ್ರಮ ಕಟ್ಟಡಗಳ ಮಾಲೀಕರಿಗೆ ಸರ್ಕಾರ ನೋಟಿಸ್ ಜಾರಿಗೊಳಿಸಿತ್ತು, ಆ ಬಳಿಕ ಈ ಕಾರ್ಯಾಚರಣೆ ನಡೆದಿದೆ.

ಕೆಲವು ದಿನಗಳ ಹಿಂದೆ ಜುನಾಗಡ್ ನ ಮಾಜೆವಾಡಿ ಗೇಟ್ ಹತ್ತಿರ ಇರುವ ದರ್ಗಾ ಅನ್ನು ನೆಲಸಮ ಮಾಡಲಾಗಿತ್ತು. ಕಛ್ ನ ಖವರಾ ಪ್ರದೇಶದಲ್ಲಿನ ೩ ಅಕ್ರಮ ಮದರಸಾಗಳು ನೆಲಸಮ ಮಾಡಲಾಗಿದ್ದು, ಮಾರ್ಚ್ ೧೧ ರಂದು ಕಛ್ ದಲ್ಲಿನ ಅಬ್ದಾಸಾ ಇಲ್ಲಿನ ೨ ಅಕ್ರಮ ದರ್ಗಾಗಳ ಮೇಲೆ ಕೂಡ ಬುಲ್ಡೋಜರ್ ಹರಿಬಿಡಲಾಗಿತ್ತು.

ಸಂಪಾದಕೀಯ ನಿಲುವು

ಇಂತಹ ಅಕ್ರಮ ಕಟ್ಟಡ ಕಾಮಗಾರಿ ನಡೆಯುವಾಗ ಸರಕಾರ ನಿದ್ರಿಸುತ್ತಿತ್ತೇ?