ಮಂಡ್ಯದಲ್ಲಿ ೨ ವರ್ಷದ ಹಿಂದೆ ಪ್ರತಿಭಟನೆಯಲ್ಲಿ ತಪ್ಪಿ ‘ಪಾಕಿಸ್ತಾನ ಜಿಂದಾಬಾದ್’ ಹೇಳಿದ್ದ ಭಾಜಪ ಕಾರ್ಯಕರ್ತನ ಮೇಲೆ ಈಗ ಕ್ರಮ !

ಮಂಡ್ಯ – ರಾಜ್ಯದ ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ನೀಡಿದ್ದ ಮೂವರನ್ನು ಇಲ್ಲಿಯವರೆಗೆ ಬಂಧಿಸಿದ್ದಾರೆ; ಆದರೆ ಅದೇ ಸಮಯದಲ್ಲಿ ಎರಡು ವರ್ಷದ ಹಿಂದೆ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆ ನೀಡಿರುವುದರಿಂದ ಪೊಲೀಸರು ಭಾಜಪದ ಓರ್ವ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಇದರಿಂದ ಭಾಜಪವು ಕಾಂಗ್ರೆಸ್ ಸರಕಾರವನ್ನು ಟೀಕಿಸಿದೆ.

ಏನಿದು ಪ್ರಕರಣ ?

ಪಾಕಿಸ್ತಾನದ ವಿದೇಶಾಂಗ ಸಚಿವರು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಬಗ್ಗೆ ಅವಮಾನವಾಗುವಂತೆ ಹೇಳಿಕೆ ನೀಡಿದ್ದರು. ಅದನ್ನು ಖಂಡಿಸಲು ಡಿಸೆಂಬರ್ ೨೨, ೨೦೨೨ ರಂದು ಮಂಡ್ಯದಲ್ಲಿನ ಸಂಜಯ ಸರ್ಕಲ್ ವೃತ್ತದಲ್ಲಿ ಭಾಜಪ ಪ್ರತಿಭಟನೆ ನಡೆಸಿತ್ತು. ಆ ಸಮಯದಲ್ಲಿ ಭಾಜಪದ ಕಾರ್ಯಕರ್ತ ‘ಪಾಕಿಸ್ತಾನ ಮುರ್ದಾಬಾದ್, ಹಿಂದೂಸ್ತಾನ ಜಿಂದಾಬಾದ’ ಎಂದು ಘೋಷಣೆ ನೀಡುತ್ತಿದ್ದರು. ಘೋಷಣೆ ನೀಡುವ ರಭಸದಲ್ಲಿ ರವಿ ಎಂಬ ಕಾರ್ಯಕರ್ತನು ಗೊಂದಲದಲ್ಲಿ ‘ಪಾಕಿಸ್ತಾನ್ ಜಿಂದಾಬಾದ’ ಎಂದು ಹೇಳಿದ್ದನು. ಇದನ್ನು ಕೇಳಿ ಇತರ ಕಾರ್ಯಕರ್ತರು ರವಿಯ ಬಾಯಿ ಮುಚ್ಚಿಸಿದ್ದರು. ಈಗ ಕಾಂಗ್ರೆಸ್ ಸರಕಾರ ಈ ಪ್ರಕರಣದಲ್ಲಿ ಭಾಜಪದ ಕಾರ್ಯಕರ್ತನ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ.