Delhi High Court’s Decision: ಕಾನೂನು ರೀತಿ ಪ್ರಕರಣದಲ್ಲಿ ಮಧ್ಯಸ್ಥಿಕೆಗಾಗಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯ ಆಧಾರ ಪಡೆಯಬಹುದು !

 

  • ದೆಹಲಿ ಉಚ್ಚ ನ್ಯಾಯಾಲಯದ ನಿರೀಕ್ಷಣೆ !

  • ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ದಾಖಲಾಗಿರುವ ಅಪರಾಧಗಳಲ್ಲಿ ಮಾತ್ರ ಮಧ್ಯಸ್ಥಿಕೆ ನಡೆಸುವುದು ಅಯೋಗ್ಯವೆಂಬ ಅಭಿಪ್ರಾಯ !

ನವ ದೆಹಲಿ – ಯಾವುದೇ ಕಾನೂನಿನ ಪ್ರಕಾರ ಪ್ರಕರಣ ಪರಿಹರಿಸುವುದಕ್ಕಾಗಿ ಮದ್ಯಸ್ತಿಕೆ ಮಾಡಲು ಸಾಧ್ಯ. ಅದಕ್ಕಾಗಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯಂತಹ ಧಾರ್ಮಿಕ ಗ್ರಂಥಗಳ ಆಧಾರ ಪಡೆಯಬಹುದು. ಈ ಗ್ರಂಥಗಳಲ್ಲಿನ ಅದ್ಯಾಯ ಸರಿಯಾಗಿ ತಿಳಿದುಕೊಳ್ಳಬೇಕು. ಅದನ್ನು ಕೇವಲ ಒಂದು ಧಾರ್ಮಿಕ ಗ್ರಂಥ ಎಂದು ನೋಡಬಾರದು. ಇದರಿಂದ ಕಾನೂನು ರೀತಿಯಲ್ಲಿ ಪ್ರಕರಣಗಳನ್ನು ಕೂಡ ಪರಿಹರಿಸಬಹುದು, ಎಂದು ದೆಹಲಿ ಉಚ್ಚ ನ್ಯಾಯಾಲಯವು ನಿರೀಕ್ಷಣೆ ಮಾಡಿದೆ.

ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಇವರು, ಮಧ್ಯಸ್ಥಿಕೆ ಕೇವಲ ಬ್ರಿಟಿಷ್ ಅಥವಾ ಇತರ ಪಶ್ಚಿಮಾತ್ಯ ನ್ಯಾಯಶಾಸ್ತ್ರದ ಆಧಾರದಲ್ಲಿ ಅಲ್ಲದೆ, ಪ್ರಾಚೀನ ಭಾರತೀಯ ನ್ಯಾಯ ಸಮ್ಮತ ಮತ್ತು ಮಧ್ಯಸ್ಥಿ ನ್ಯಾಯಶಾಸ್ತ್ರದ ಆಧಾರ ಪಡೆಯಬಹುದು. ಇದರಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳಂತಹ ಧಾರ್ಮಿಕ ಗ್ರಂಥಗಳ ಸಮಾವೇಶ ಮಾಡಬಹುದು. ವಾದ ಪರಿಹರಿಸಲು ಮಧ್ಯಸ್ತಿಕೆಯ ಉಪಯೋಗ ಹೇಗೆ ಮಾಡಬಹುದು ? ಇದನ್ನು ತಿಳಿದುಕೊಳ್ಳು ಕುರಾನ್, ಬೈಬಲ್ ಇದರಲ್ಲಿನ ಸಾಲುಗಳ ಸಂದರ್ಭ ನೀಡಿದ್ದರು ಎಂದು ಹೇಳಿದರು.

ನ್ಯಾಯಮೂರ್ತಿ ಮಾತು ಮುಂದುವರೆಸುತ್ತಾ, ಹೀಗಿದ್ದರೆ ಲೈಂಗಿಕ ಅಪರಾಧದಿಂದ ಬಾಲಕರ ರಕ್ಷಣೆಯ ಕಾನೂನು ಎಂದರೆ ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ಮೊಕದ್ದಮೆಯ ಮಧ್ಯಸ್ಥಿಕೆ ಮಾಡಲಾಗದು. ಈ ಅಪರಾಧದ ಸಂದರ್ಭದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ.

ಏನು ಈ ಪ್ರಕರಣ ?

೨೦೧೫ ರಲ್ಲಿ ಓರ್ವ ವ್ಯಕ್ತಿಯ ಪತ್ನಿಯ ಸಂಬಂಧಿಕನು ಚಿಕ್ಕ ಹುಡುಗಿಯ ಲೈಂಗಿಕ ಕಿರುಕುಳ ನೀಡಿದ್ದನು. ದೂರುದಾರ ವ್ಯಕ್ತಿಯು, ಎಂದರೆ ಪತಿಯು ಮೊದಲು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದನು. ಆದರೆ ನ್ಯಾಯಾಲಯವು ಮಧ್ಯಸ್ಥಿಕೆಯಿಂದ ಈ ಪ್ರಕರಣವನ್ನು ಪರಿಹರಿಸಿಕೊಳ್ಳಲು ಹೇಳಿತ್ತು. ಅದರ ಮೇಲೆ ದೂರುದಾರನು ಉಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೇಳಿದ್ದನು.