ಉಜ್ಜೈನ್ (ಮಧ್ಯಪ್ರದೇಶ) – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದು ವಾರದ ಹಿಂದೆ ಇಲ್ಲಿಯ ಜಂತರ್ ಮಂತರದಲ್ಲಿ ಹೊಸದಾಗಿ ಕೂಡಿಸಿರುವ ‘ವಿಕ್ರಮಾದಿತ್ಯ ವೈದಿಕ ಗಡಿಯಾರ’ದ ಉದ್ಘಾಟನೆ ಮಾಡಿದ್ದರು. ಮಾರ್ಚ್ ೮ ರಿಂದ ಅದರ ಆ್ಯಪ್ ಸಾರ್ವಜನಿಕರಿಗಾಗಿ ನೀಡಲಾಗುವುದು; ಆದರೆ ಅದರ ಮೊದಲೇ ಸೈಬರ ದಾಳಿ ನಡೆದಿದೆ. ಇದರಿಂದ ಈ ಗಡಿಯಾರದ ಪ್ರಕ್ರಿಯೆ ನಿಧಾನವಾಗಿದೆ. ಸಮಯ ಹೇಳುವಾಗ ತಪ್ಪಾಗುತ್ತಿರುವುದು ಕಂಡು ಬರುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.
೧. ಈ ವೈದಿಕ ಗಡಿಯಾರ ಸಿದ್ಧಗೊಳಿಸುವಲ್ಲಿ ಮಹತ್ವದ ಕೊಡುಗೆ ನೀಡಿದ ಆರೋಹ ಶ್ರೀವಾಸ್ತವ ಇವರು, ವೈದಿಕ ಗಡಿಯಾರದ ಮೇಲೆ ಸೈಬರ್ ದಾಳಿ ಆಗಿರುವುದರಿಂದ ಸರ್ವರ್ ಬಹಳ ನಿಧಾನವಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಇದನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ನಾವು ಈಗ ಸರ್ವರ್ ಸಂಪೂರ್ಣ ಸುರಕ್ಷಿತಗೊಳಿಸುವ ಕಾರ್ಯ ಮಾಡುತ್ತಿದ್ದೇವೆ.
೨. ಇದು ಜಗತ್ತಿನಲ್ಲಿನ ಮೊದಲ ಡಿಜಿಟಲ್ ವೈದಿಕ ಗಡಿಯಾರವಾಗಿದ್ದು, ಇದು ಭಾರತೀಯ ಪಂಚಾಂಗ ಮತ್ತು ಮುಹೂರ್ತದ ಮಾಹಿತಿಯನ್ನು ಭಾರತೀಯ ಸಮಯದ ಪ್ರಕಾರ ನೀಡುತ್ತಿತ್ತು. ಈ ಗಡಿಯಾರ ಮೊಬೈಲ್ ನಲ್ಲಿ ಅಥವಾ ಟಿವಿಯಲ್ಲಿ ಕೂಡ ನೋಡಲು ಸಾಧ್ಯವಾಗುತ್ತಿತ್ತು. ಇದರ ಆ್ಯಪ್ ಹಿಂದಿ, ಇಂಗ್ಲೀಷ್ ಮತ್ತು ಇತರ ಭಾರತೀಯ ಹಾಗೂ ವಿದೇಶಿ ಭಾಷೆಯಲ್ಲಿ ತಯಾರಿಸಿದ್ದಾರೆ. ಇಂಟರ್ನೆಟ್ ಜೋಡಣೆಯಿಂದ ಇದು ಜಗತ್ತಿನಲ್ಲಿ ಎಲ್ಲಿ ಬೇಕಿದ್ದರೂ ಉಪಯೋಗಿಸಬಹುದು.