ಮಥುರಾದ ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿರುವ ಶಾಹಿ ಈದ್ಗಾ ಮಸೀದಿಯಲ್ಲಿರುವ ಬಾವಿಯ ಪೂಜೆ ಮಾಡುವುದನ್ನು ತಡೆದು ತೋರಿಸಿರಿ !

  • ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟನಿಂದ ಕರೆ !

  • ಏಪ್ರಿಲ್ 1 ಮತ್ತು 2 ರಂದು ಪೂಜೆ ನಡೆಯಲಿದೆ !

ಅಶುತೋಷ್ ಪಾಂಡೆ

ಮಥುರಾ (ಉತ್ತರ ಪ್ರದೇಶ) – ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ ಅಧ್ಯಕ್ಷ ಅಶುತೋಷ್ ಪಾಂಡೆಯ ಇವರು ಸಾಮಾಜಿಕ ಜಾಲತಾಣಗಳ ಮೂಲಕ ಒಂದು ವಿಡಿಯೋವನ್ನು ಪ್ರಸಾರ ಮಾಡಿ, ಜಿಲ್ಲಾಡಳಿತ ಮತ್ತು ಈದ್ಗಾ ಮಸೀದಿ ಸಮಿತಿಗೆ ಎಚ್ಚರಿಕೆ ನೀಡಿದ್ದಾರೆ. ಏಪ್ರಿಲ್ 1 ಮತ್ತು 2 ಸಪ್ತಮಿ ಮತ್ತು ಅಷ್ಟಮಿ ದಿನದಂದು ಮಸೀದಿಯ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕೃಷ್ಣ ಬಾವಿಯ ಪೂಜೆಗಾಗಿ ಹಿಂದೂಗಳು ಬರುತ್ತಾರೆ ಎಂದು ಹೇಳಿದ್ದಾರೆ. ಯಾರಿಗಾದರೂ ಧೈರ್ಯವಿದ್ದರೆ, ಅವರು ತಡೆದು, ತೋರಿಸಲಿ. ನಾವು ಇಲ್ಲಿ ಪೂಜೆ ಮಾಡಿಯೇ ಮಾಡುತ್ತೇವೆ. ಪೂಜೆ ಮಾಡುವುದು ನಮ್ಮ ಹಕ್ಕು. ಮಾರ್ಚ 5 ರಂದು ನಾವು ಜಿಲ್ಲಾಧಿಕಾರಿಗಳಲ್ಲಿ ಅನುಮತಿಯನ್ನು ಕೋರಿದ್ದೇವೆ;

ಆದರೆ ಇದುವರೆಗೂ ನಮಗೆ ಇದರ ಬಗ್ಗೆ ಏನೂ ಮಾಹಿತಿ ನೀಡಿರುವುದಿಲ್ಲ. ಆದರೆ ನಾವು ನಿಲ್ಲುವುದಿಲ್ಲ. ಸಧ್ಯಕ್ಕೆ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನ ಮತ್ತು ಶಾಹಿ ಈದ್ಗಾ ಮಸೀದಿಯ ಭದ್ರತೆಗಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ದಳ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ. ಎರಡೂ ಕಡೆಗಳಲ್ಲಿ ಬರುವ ಹೋಗುವ ಪ್ರತಿಯೊಬ್ಬ ವ್ಯಕ್ತಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಎರಡೂ ಕಡೆಗಳಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಟ್ರಸ್ಟ ಪಾಂಡೆ ಅವರ ವಿಡಿಯೋವನ್ನು ಪ್ರಸಾರ ಮಾಡಿದ ನಂತರ ಜಿಲ್ಲಾಡಳಿತ ಭದ್ರತೆಯನ್ನು ಹೆಚ್ಚಿಸಿದೆ.