Dibrugarh Jail Superintendent Arrested : ಅಸ್ಸಾಂನ ದಿಬ್ರುಗಡ ಮಧ್ಯಂತರ ಕಾರಾಗೃಹದ ಅಧೀಕ್ಷಕ ನಿಪೆನ ದಾಸ ಬಂಧನ

ಖಲಿಸ್ತಾನಿ ಬೆಂಬಲಿಗ ಅಮೃತಪಾಲ ಅವರ ಕೋಣೆಯಲ್ಲಿ ಮೊಬೈಲ್ ಮತ್ತು ಇನ್ನಿತರ ಉಪಕರಣಗಳು ಸಿಕ್ಕಿದ್ದರಿಂದ ಕ್ರಮ

ದಿಬ್ರುಗಢ (ಆಸ್ಸಾಂ) – ‘ವಾರಿಸ ಪಂಜಾಬ ದೇ’ ಈ ಖಲಿಸ್ತಾನ ಬೆಂಬಲಿತ ಸಂಘಟನೆಯ ಮುಖ್ಯಸ್ಥ ಅಮೃತಪಾಲ ಸಿಂಹ ಮತ್ತು ಅವನೊಂದಿಗೆ ಹಲವಾರು ಭಯೋತ್ಪಾದಕರು ಮತ್ತು ಜಿಹಾದಿಗಳನ್ನು ಅಸ್ಸಾಂನ ದಿಬ್ರುಗಢ ಮಧ್ಯಂತರ ಕಾರಾಗೃಹದಲ್ಲಿ ಬಂಧನದಲ್ಲಿ ಇರಿಸಲಾಗಿದೆ. ಇಂತಹ ಅಪಾಯಕಾರಿ ಜನರು ಕಾರಾಗೃಹದಲ್ಲಿದ್ದರೂ, ಅವರ ಕೋಣೆಯಿಂದ ಅನೇಕ ಸ್ಮಾರ್ಟ ಫೋನ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಕಾರಾಗೃಹದ ಅಧೀಕ್ಷಕ ನಿಪೆನ ದಾಸನನ್ನು ಬಂಧಿಸಲಾಗಿದೆ.

ಫೆಬ್ರವರಿ 17, 2024 ರಂದು ಅಮೃತಪಾಲನ ಕೋಣೆಯ ತಪಾಸಣೆ ನಡೆಸಲಾಗಿತ್ತು. ಅವನಿಂದ ಮೊಬೈಲ ಮತ್ತು ಸ್ಪೈ ಕ್ಯಾಮೆರಾ ಪೆನ್, ಕೀಪ್ಯಾಡ ಫೋನ, ಪೆನಡ್ರೈವ, ಬ್ಲೂಟೂಥ ಹೆಡ್‌ಫೋನ್‌ಗಳಂತಹ ಅನೇಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯ ನಂತರ ಕಾರಾಗೃಹ ಅಧೀಕ್ಷಕ ನಿಪೆನ ದಾಸ ಅವರನ್ನು ಬಂಧಿಸಲಾಯಿತು. ಈಗ ಈ ಕೋಣೆಯಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳ ಮೇಲೆ ತ್ವರಿತಗತಿ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಿ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಪ್ರಯತ್ನಿಸಬೇಕು !