ರಷ್ಯಾ-ಉಕ್ರೇನ್ ಯುದ್ಧಕ್ಕಾಗಿ ಮಾನವ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣ 

7 ನಗರಗಳಲ್ಲಿ ಸಿಬಿಐ ದಾಳಿ

ನವದೆಹಲಿ – ರಷ್ಯಾ-ಉಕ್ರೇನ್ ಯುದ್ಧಕ್ಕಾಗಿ ಮಾನವ ಕಳ್ಳಸಾಗಣೆ ಮಾಡಲಾಗುತ್ತಿರುವ ಬಗ್ಗೆ ಕೇಂದ್ರ ತನಿಖಾ ಇಲಾಖೆ (ಸಿಬಿಐ) ದೇಶದ ದೆಹಲಿ, ಚಂಡೀಗಢ, ಮುಂಬೈ ಮುಂತಾದ 7 ನಗರಗಳಲ್ಲಿ ದಾಳಿ ನಡೆಸಿದೆ. ಇದರಲ್ಲಿ 50 ಲಕ್ಷ ನಗದು, ಅನುಮಾನಾಸ್ಪದ ದಾಖಲೆಗಳು ಮತ್ತು ತಾಂತ್ರಿಕ ದಾಖಲೆಗಳು ದೊರಕಿದೆಯೆಂದು ಮಾಹಿತಿ ಸಿಕ್ಕಿದೆ. ಈ ದಾಳಿಯಿಂದ ಇಲ್ಲಿಯವರೆಗೆ 35 ಜನರ ಮಾನವ ಕಳ್ಳಸಾಗಣೆಯಾಗಿರುವ ಪ್ರಕರಣ ತನಿಖಾ ತಂಡದ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಿಬಿಐನಿಂದ ಕೆಲವು ಜನರಿಗೆ ವಶಕ್ಕೆ ಪಡೆದಿರುವ ಮಾಹಿತಿಯಿದೆ. ರಶಿಯಾದಲ್ಲಿ ನೌಕರಿ ನೀಡುವ ಆಮಿಷ ತೋರಿಸುವ ಜಾಹೀರಾತು ದಿನಪತ್ರಿಕೆಯಿಂದ ಪ್ರಸಾರ ಮಾಡಿ ಯುವಕರಿಗೆ ರಶಿಯಾದಲ್ಲಿ ಯುದ್ಧಕ್ಕಾಗಿ ಕಳುಹಿಸುತ್ತಿರುವುದು ಈ ಹಿಂದೆಯೇ ಬಹಿರಂಗವಾಗಿತ್ತು.