|
ತಿರುವನಂತಪುರಂ (ಕೇರಳ) – ಬೀದಿ ನಾಯಿಗಳಿಗಿಂತ ಮನುಷ್ಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು, ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಅದರಲ್ಲಿಯೂ ಬೀದಿನಾಯಿಗಳಿಂದ ಅಪಾಯ ನಿರ್ಮಾಣವಾಗುತ್ತಿರುವುದರಿಂದ ನಿಜವಾದ ಶ್ವಾನಪ್ರೇಮಿಗಳಿಗೆ ನಾಯಿಗಳನ್ನು ಸಾಕಲು ಪರವಾನಿಗೆಯನ್ನು ನೀಡಬೇಕು ಎಂದು ಕೇರಳ ಉಚ್ಚ ನ್ಯಾಯಾಲಯವು ಹೇಳಿದೆ. ಹಾಗೆಯೇ ಈ ಪ್ರಾಣಿಗಳ ಸಂರಕ್ಷಣೆ ಮಾಡಲು ಬೀದಿ ನಾಯಿಗಳನ್ನು ಸಾಕಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ಪರವಾನಿಗೆ ನೀಡಲು ನಿಯಮಗಳನ್ನು ರೂಪಿಸುವಂತೆ ಉಚ್ಚನ್ಯಾಯಾಲಯ ರಾಜ್ಯ ಸರಕಾರಕ್ಕೆ ಸೂಚಿಸಿದೆ. ದೇಶಾದ್ಯಂತ ಬೀದಿನಾಯಿಗಳ ದಾಳಿಗಳಾಗುತ್ತಿರುವ ವರದಿಗಳು ಬರುತ್ತಿರುವುದರಿಂದ, ಚಿಕ್ಕ ಮಕ್ಕಳು, ಯುವಕರು ಮತ್ತು ವೃದ್ಧರನ್ನು ಬೀದಿನಾಯಿಗಳಿಂದ ಅಪಾಯ ಎದುರಾಗುತ್ತಿದೆಯೆಂದು ನ್ಯಾಯಾಲಯ ಒಪ್ಪಿಕೊಂಡಿದೆ.
ಉಚ್ಚ ನ್ಯಾಯಾಲಯವು ಮಂಡಿಸಿರುವ ಅಂಶಗಳು
1. ಬೀದಿ ನಾಯಿಗಳ ದಾಳಿಯ ಭೀತಿಯಿಂದ ಶಾಲಾ ಮಕ್ಕಳು ಒಬ್ಬರೇ ಶಾಲೆಗೆ ಹೋಗಲು ಭಯ ಪಡುವಂತಾಗಿದೆ. ಬೀದಿ ನಾಯಿಗಳ ಸಂರಕ್ಷಣೆ ಮಾಡಬೇಕು; ಆದರೆ ಮನುಷ್ಯನ ಜೀವ ಕಳೆದುಕೊಳ್ಳಬಾರದು.
2. ಬೀದಿ ನಾಯಿಗಳು ಸಮಾಜಕ್ಕೆ ಅಪಾಯ ನಿರ್ಮಾಣ ಮಾಡುತ್ತಿವೆ; ಆದರೆ ಬೀದಿ ನ್ಯಾಯಿಗಳ ಮೇಲೆ ಕ್ರಮ ಕೈಕೊಂಡರೆ ಶ್ವಾನಪ್ರೇಮಿಗಳು ಅವುಗಳ ಪರವಾಗಿ ಹೋರಾಟ ನಡೆಸಬಹುದು. ಬೀದಿ ನ್ಯಾಯಿಗಳ ಮೇಲೆ ಮನುಷ್ಯನ ರಾಕ್ಷಸಿ ದಾಳಿಯಾಗಲು ಬಿಡಬಾರದು ಎಂಬುದರಲ್ಲಿ ಸಂದೇಹವಿಲ್ಲ.