‘ಸಾವರಕರರನ್ನು ನೇತಾಜಿಯೊಂದಿಗೆ ಜೋಡಿಸಬಾರದು; ಕಾರಣ ನೇತಾಜಿ ಜಾತ್ಯಾತೀತ ನಾಯಕರಾಗಿದ್ದರು! – ನೇತಾಜಿ ಬೋಸ ಅವರ ಮರಿಮೊಮ್ಮಗ ಚಂದ್ರಕುಮಾರ ಬೋಸ

‘ಸ್ವಾತಂತ್ರ್ಯವೀರ ಸಾವರಕರ’ ಈ ಚಲನಚಿತ್ರದ ಜಾಹೀರಾತಿಗೆ ನೇತಾಜಿ ಬೋಸ ಅವರ ಮರಿಮೊಮ್ಮಗ ಚಂದ್ರಕುಮಾರ ಬೋಸ ಇವರ ಆಕ್ಷೇಪಣೆ !

ಕೋಲಕಾತಾ (ಬಂಗಾಳ) – ‘ಸ್ವಾತಂತ್ರ್ಯವೀರ ಸಾವರಕರ’ ಈ ಚಲನಚಿತ್ರದ ಟ್ರೈಲರ್ (ಜಾಹೀರಾತು) ಪ್ರದರ್ಶಿಸಲಾಗಿದೆ. ಇದರಲ್ಲಿ ಒಂದು ಘಟನೆಯಲ್ಲಿ, ನೇತಾಜಿ ಸುಭಾಷಚಂದ್ರ ಬೋಸ ಅವರಿಗೆ ಸ್ವಾತಂತ್ರ್ಯವೀರ ಸಾವರಕರ ಇವರು `ಜರ್ಮನಿ ಮತ್ತು ಜಪಾನ್‌ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಆಂಗ್ಲರ ಮೇಲೆ ದಾಳಿ ಮಾಡಿರಿ’, ಎಂದು ಹೇಳುತ್ತಿರುವುದು ಕಾಣಿಸುತ್ತಿದೆ. ಈ ಪ್ರಸಂಗದ ಬಗ್ಗೆ ನೇತಾಜಿ ಬೋಸ ಅವರ ಮರಿಮೊಮ್ಮಗ ಚಂದ್ರಕುಮಾರ ಬೋಸ್ ಟೀಕಿಸುತ್ತಾ, ನೇತಾಜಿ ಬೋಸ ಅವರನ್ನು ` ಜಾತ್ಯಾತೀತ’ ಎಂದು ಹೇಳುತ್ತಾ, ` ಸಾವರಕರರೊಂದಿಗೆ ಅವರನ್ನು ಸೇರಿಸಬಾರದು’, ಎಂದು ಹೇಳಿದ್ದಾರೆ. ಈ ಚಲನಚಿತ್ರ ಮಾರ್ಚ 22 ರಂದು ಬಿಡುಗಡೆಯಾಗಲಿದೆ.

1. ಚಂದ್ರಕುಮಾರ ಬೋಸ ಅವರು ‘ಎಕ್ಸ್’ ಮೂಲಕ ಚಲನಚಿತ್ರದ ನಿರ್ದೇಶಕ ಮತ್ತು ನಟ ರಣದೀಪ ಹೂಡಾ ಅವರಿಗೆ ಟ್ಯಾಗ್ (ಉದ್ದೇಶಿಸಿ) ಮಾಡಿರುವ ಪೋಸ್ಟ್‌ನಲ್ಲಿ, ರಣದೀಪ್ ಹೂಡಾ, ನಿಮ್ಮ ‘ಸ್ವಾತಂತ್ರ್ಯವೀರ ಸಾವರಕರ’ ಈ ಚಲನಚಿತ್ರವನ್ನು ನಾನು ಪ್ರಶಂಸಿಸುತ್ತೇನೆ; ಆದರೆ ಯೋಗ್ಯ ವ್ಯಕ್ತಿತ್ವವನ್ನು ತೋರಿಸುವುದು ಬಹಳ ಮಹತ್ವದ್ದಾಗಿದೆ. ದಯವಿಟ್ಟು ಸಾವರಕರ ಅವರೊಂದಿಗೆ ನೇತಾಜಿ ಸುಭಾಷ ಚಂದ್ರ ಬೋಸ ಅವರ ಹೆಸರನ್ನು ಜೋಡಿಸುವುದನ್ನು ತಪ್ಪಿಸಿರಿ. ನೇತಾಜಿ ಅವರು ಎಲ್ಲರನ್ನೂ ತಮ್ಮೊಂದಿಗೆ ಕರೆದೊಯ್ಯುವ ಜಾತ್ಯತೀತ ನಾಯಕರಾಗಿದ್ದರು ಮತ್ತು ದೇಶಭಕ್ತರ ರಕ್ಷಣೆಯನ್ನು ಮಾಡುವವರಾಗಿದ್ದರು.

2. ಕಳೆದ ವರ್ಷ ಈ ಚಲನಚಿತ್ರದ ಟೀಸರ್ (ಸಣ್ಣ ಜಾಹೀರಾತು) ಪ್ರದರ್ಶಿಸಲಾಗಿತ್ತು. ಆಗಲೂ ಅದರ ಮೇಲೆ ವಿವಾದ ನಿರ್ಮಾಣವಾಗಿತ್ತು. ಟೀಸರ್ ನಲ್ಲಿ `ಸ್ವಾತಂತ್ರ್ಯವೀರ ಸಾವರಕರ ಇವರು ‘ಭಗತ ಸಿಂಹ, ಖುದಿರಾಮ ಬೋಸ ಮತ್ತು ನೇತಾಜಿ ಸುಭಾಷ ಚಂದ್ರ ಬೋಸ ಅವರಂತಹ ಕ್ರಾಂತಿಕಾರಿಗಳಿಗೆ ಸ್ಫೂರ್ತಿಯಾಗಿದ್ದರು’ ಎಂದು ಹೇಳಿದ್ದರು. ಆಗಲೂ ಈ ಕುರಿತು ಟೀಕೆಯನ್ನು ವ್ಯಕ್ತಪಡಿಸಲಾಗಿತ್ತು. ಆ ಸಮಯದಲ್ಲಿಯೂ ಚಂದ್ರ ಕುಮಾರ ಬೋಸ ಇವರು ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದರು. ಅವರು ಸಾವರಕರರ ಮೇಲೆ ತಯಾರಿಸಿರುವ ಚಲನಚಿತ್ರದಲ್ಲಿ ನೇತಾಜಿ, ಭಗತಸಿಂಹ ಮತ್ತು ಖುದೀರಾಮ ಬೋಸ ಇವರನ್ನು ತೋರಿಸುವ ಆವಶ್ಯಕತೆಯಿಲ್ಲ. (ಯಾವುದು ಇತಿಹಾಸ ಇದೆಯೋ, ಅದನ್ನೇ ತೋರಿಸಬಾರದು ಎಂದಾದರೆ ಚಲನಚಿತ್ರದ ಅರ್ಥವೇನು? ಈ ರೀತಿ ಆಕ್ಷೇಪಿಸುವವರು ನೇತಾಜಿ ಬೋಸರ ಅಪಮಾನವನ್ನೇ ಮಾಡುತ್ತಿದ್ದಾರೆ, ಎಂದು ಯಾರಿಗಾದರೂ ಅನಿಸಬಹುದು- ಸಂಪಾದಕರು) ಚಲನಚಿತ್ರದ ಮುಖ್ಯ ಉದ್ದೇಶ ವಿವಾದಗ್ರಸ್ತವಾಗಿದೆಯೇ? ಇಲ್ಲವೇ ಎನ್ನುವುದು ಚಲನಚಿತ್ರ ಪ್ರದರ್ಶಿತವಾದ ಬಳಿಕವೇ ತಿಳಿಯುವುದು.

ಸಂಪಾದಕೀಯ ನಿಲುವು

‘ಸ್ವಾತಂತ್ರ್ಯವೀರ ಸಾವರಕರ’ ಚಲನಚಿತ್ರ ಜಾಹೀರಾತು (ಟ್ರೇಲರ್) ನೋಡಿದಾಗ, ಅದರಲ್ಲಿ ಇತಿಹಾಸವನ್ನು ತೋರಿಸಲಾಗಿದೆ. ನೇತಾಜಿ ಬೋಸ ಅವರು ರತ್ನಾಗಿರಿಗೆ ಹೋಗಿ ಸಾವರಕರರನ್ನು ಭೇಟಿಯಾಗಿದ್ದರು ಎಂಬುದು ಜಗಜ್ಜಾಹೀರಾಗಿದೆ. ಅದನ್ನೇ ಈ ಜಾಹೀರಾತಿನಲ್ಲಿ ತೋರಿಸಲಾಗಿದೆ. ಅದನ್ನು ತಥಾಕಥಿತ ಮತ್ತು ಕಪಟಿ ಜಾತ್ಯಾತೀತತೆಯ ಹೆಸರಿನಲ್ಲಿ ಆಕ್ಷೇಪಿಸುವುದು ಎಂದರೆ ಇತಿಹಾಸವನ್ನು ನಿರಾಕರಿಸುವುದೇ ಆಗಿದೆ.! 

ಈ ಮೂಲಕ ಚಂದ್ರ ಕುಮಾರ ಬೋಸ ಇವರಿಗೆ, ಸ್ವಾತಂತ್ರ್ಯವೀರ ಸಾವರಕರ ಜಾತ್ಯಾತೀತತೆಯ ವಿರುದ್ಧವಿದ್ದರು ಎಂದು ಹೇಳುವುದಿದೆಯೇ? ಯಾವ ಮೋಹನದಾಸ ಗಾಂಧಿ ಮತ್ತು ನೆಹರೂ ಇವರು ನೇತಾಜಿ ಬೋಸರನ್ನು ಕಾಂಗ್ರೆಸ್ಸಿನಲ್ಲಿ (ಮಾನಸಿಕವಾಗಿ ಕುಗ್ಗಿಸಿದ್ದರು?), ಜಾತ್ಯಾತೀತತೆಯ ಹೆಸರಿನಲ್ಲಿ ಹಿಂದೂ ದ್ವೇಷ ಮತ್ತು ಮುಸ್ಲಿಂಪ್ರೀತಿಯ ರಾಜಕೀಯವನ್ನು ಮಾಡಿದರೋ, ಅವರ ವಿಷಯದಲ್ಲಿ ಏಕೆ ಮಾತನಾಡುವುದಿಲ್ಲ?