ಬೆಂಗಳೂರು ಕೆಫೆಯಲ್ಲಿನ ಬಾಂಬ್ ಸ್ಫೋಟದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಕೈವಾಡ !

  • ಎನ್.ಐ.ಎ. ಇಂದ ೭ ರಾಜ್ಯಗಳಲ್ಲಿನ ೧೭ ಸ್ಥಳಗಳಲ್ಲಿ ದಾಳಿ 

  • ಚೆನ್ನೈದಲ್ಲಿ ೫ ಜನರು ವಶಕ್ಕೆ

ಬೆಂಗಳೂರು – ಇಲ್ಲಿಯ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ೧ ರಂದು ನಡೆದಿರುವ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ಸಮೀಕ್ಷಾ ದಳ (ಎನ್.ಐ.ಎ.)ವು ೭ ರಾಜ್ಯಗಳ ೧೭ ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಪ್ರಕರಣದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಕೈವಾಡ ಇರುವ ಮಾಹಿತಿ ಬೆಳಕಿಗೆ ಬಂದಿದೆ.

೧. ಎನ್.ಐ.ಎ. ಬೆಂಗಳೂರಿನ ಆರ್.ಟಿ. ನಗರದಲ್ಲಿನ ಇಸ್ಲಾಮಿಕ್ ಸ್ಟೇಟ್ ಗೆ ಸಂಬಂಧಿತ ಟಿ. ನಝೀರ್ ನ ಮನೆಯ ಮೇಲೆ ದಾಳಿ ನಡೆಸಿದರು. ಬಾಂಬ್ ಸ್ಫೋಟಕ್ಕಾಗಿ ನಝೀರ್ ಇವನೇ ಪ್ರಚೋದನೆ ನೀಡಿದರೆಂದು ಆರೋಪವಿದೆ.

೨. ಎನ್.ಐ.ಎ. ಯು ಈ ಹಿಂದೆ ಗ್ರೆನೇಡ್ (ಕೈ ಬಾಂಬ್) ಪ್ರಕರಣದಲ್ಲಿ ಆರ್‌.ಟಿ. ನಗರ ಮತ್ತು ಸುಲ್ತಾನಪಾಳ್ಯ ಇಲ್ಲಿ ದಾಳಿ ನಡೆಸಿದ್ದರು. ಅಲ್ಲಿಂದ ಸಜಿವ ಗುಂಡುಗಳು ಮತ್ತು ಗ್ರಾನೈಡ್ ವಶಪಡಿಸಿಕೊಂಡಿದ್ದರು.

೩. ಜುನೈದ್ ಎಂಬ ವ್ಯಕ್ತಿ ಈ ಬಾಂಬ್ ಸ್ಫೋಟದ ಮುಖ್ಯರುವಾರಿ ಎಂದು ತಿಳಿದು ಬಂದಿದೆ. ಹಣದ ಅವ್ಯವಸ್ಥೆಯ ಪ್ರಕರಣದಲ್ಲಿ ಜೈಲಿನಲ್ಲಿ ಇದ್ದಾನೆ. ಎನ್.ಐ.ಎ.ಯು ಜೈಲಿಗೆ ಹೋಗಿ ಅವನ ವಿಚಾರಣೆ ನಡೆಸಿದ್ದಾರೆ.

೪. ಚೆನ್ನೈಯಲ್ಲಿನ ರಾಮನಾಥಪುರಂ ಇಲ್ಲಿಯ ಶಮಶುದ್ದೀನ್ ಎಂಬ ಹೆಸರಿನ ವ್ಯಕ್ತಿಯ ಮನೆಯ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಚೆನ್ನೈಯಲ್ಲಿನ ಸಿದ್ದರಪೇಠ ಮತ್ತು ಬಿದ್ಯಾರ ಇಲ್ಲಿಂದ ೫ ಜನರನ್ನು ವಶಕ್ಕೆ ಪಡೆದಿದ್ದಾರೆ.