ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರು ನ್ಯಾಯಾಂಗದ ಕಿವಿ ಹಿಂಡಿದರು!
ಕರ್ಣಾವತಿ (ಗುಜರಾತ) – ನ್ಯಾಯದ ಪರಿಕಲ್ಪನೆಯು ನ್ಯಾಯಾಲಯದ ಬಾಗಿಲು ತಟ್ಟುವುದರಾಚೆಗೆ ಹೋಗುವ ಆವಶ್ಯಕತೆಯಿದೆ. ಇದಕ್ಕಾಗಿ ನ್ಯಾಯದಾನದಲ್ಲಿಯೇ ಬದಲಾವಣೆಯಾಗಬೇಕಾಗಿದೆಯೆಂದು ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರು ಗುಜರಾತಿನಲ್ಲಿ `ಜ್ಯುಡಿಶಿಯಲ್ ಆಫೀಸರ್ಸ ಕಾಂಕ್ಲೇವ್’ ಈ ಕಾರ್ಯಕ್ರಮದಲ್ಲಿ ಹೇಳಿದರು. ರೈತರು ಜೀವಂತವಾಗಿರುವವರೆಗೆ ಅವನಿಗೆ ನ್ಯಾಯ ಸಿಗುವುದಿಲ್ಲ. ಈ ಪರಿಸ್ಥಿತಿ ಬದಲಾಗಬೇಕಾಗಿದ್ದರೆ, ನ್ಯಾಯದಾನವನ್ನು ಮಾಡುವಾಗ ನಾಗರಿಕರ ಜೀವ ಹೋಗುವ ದಾರಿಯನ್ನು ಕಾಯಬೇಡಿರಿ. ಎಂದು ಮುಖ್ಯ ನ್ಯಾಯಾಧೀಶರು ನ್ಯಾಯವ್ಯವಸ್ಥೆಗೆ ಕಿವಿ ಹಿಂಡಿದರು.
ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಮಂಡಿಸಿರುವ ಅಂಶಗಳು
1. ಪ್ರತಿವಾದಕ್ಕಾಗಿ ಯಾವುದೇ ನ್ಯಾಯವಾದಿಗಳ ಮನಸ್ಸನ್ನು ಒಲಿಸುವುದು ಕಠಿಣ
ಸಂಕೀರ್ಣವಾದ ಪ್ರಕರಣಗಳ ತೀರ್ಪು ನೀಡುವುದು ಸುಲಭವಾಗಿರುತ್ತದೆ. ಆದರೆ ಪ್ರತಿವಾದಕ್ಕಾಗಿ ಯಾವುದೇ ನ್ಯಾಯವಾದಿಯ ಮನಸ್ಸನ್ನು ಒಲಿಸುವುದು ಬಹಳ ಕಠಿಣವಾಗಿದೆ. ಈ ಕಾರಣದಿಂದಾಗಿ ವಿಚಾರಣೆಯ ಆಲಿಸುವಿಕೆಯನ್ನು ಮುಂದೂಡುವುದು ಪ್ರತಿನಿತ್ಯದ ಕಾರ್ಯವಾಗಿದೆ. ಉದಾ: ನೀವು ವೈದ್ಯರ ಬಳಿಗೆ ಹೋಗಿದ್ದೀರಿ ಮತ್ತು ವೈದ್ಯರು ನಿಮಗೆ, ನಾನು ಇಂದು ನಿಮಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದರೆ, ನೀವು ಅದನ್ನು ಸ್ವೀಕರಿಸುತ್ತೀರಾ?
2. ನ್ಯಾಯಾಂಗದ ಮೇಲೆ ನಾಗರಿಕರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ನ್ಯಾಯಾಂಗ ಮಾಡಬೇಕು.
ಮೇಲಿಂದ ಮೇಲೆ ವಿಚಾರಣೆಯನ್ನು ಮುಂದೂಡುವುದು ಮತ್ತು ಪ್ರಕರಣಗಳನ್ನು(ಜಗ್ಗುವುದು) ವಿಳಂಬ ಮಾಡುವುದು ನ್ಯಾಯಾಲಯಗಳ ಸಂಸ್ಕೃತಿಗಿದೆಯೆನ್ನುವುದು ಸಾಮಾನ್ಯ ಜನರ ಭಾವನೆಯಾಗಿದೆ. ಆದರೆ ನ್ಯಾಯಾಂಗದ ಮೇಲಿನ ನಾಗರಿಕರ ವಿಶ್ವಾಸ ಗಟ್ಟಿಯಾಗಿರುವಂತಹ ಕೆಲಸವನ್ನು ನ್ಯಾಯಪಾಲಿಕೆಯು ಮಾಡಬೇಕು. ಇದಕ್ಕಾಗಿ ನ್ಯಾಯಾಲಯಗಳಿಗೆ ಮೂಲಭೂತ ಅಡಿಪಾಯದ ಸೌಲಭ್ಯವನ್ನು ಒದಗಿಸಬೇಕು. ನ್ಯಾಯಾಲಯದಲ್ಲಿ ಗದ್ದಲವಾಗದಂತೆ, ಪ್ರಕರಣವನ್ನು ದಾಖಲಿಸಲು ವಿಳಂಬವಾಗದಂತೆ ಎಚ್ಚರಿಕೆಯನ್ನು ವಹಿಸಬೇಕು.
3. ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ನಿರಾಕರಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಕಾರಣವನ್ನು ಕಂಡು ಹಿಡಿಯಬೇಕಾಗಿದೆ. ಜಿಲ್ಲಾ ನ್ಯಾಯಾಲಯವು ಆತ್ಮಾವಲೋಕನ ಮಾಡಿಕೊಂಡು ಇದನ್ನು ಬಹಿರಂಗಪಡಿಸಬೇಕಾಗಿದೆ.
4. ನ್ಯಾಯಾಂಗದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿದೆ!
ಮಹಿಳಾ ನ್ಯಾಯಾಧೀಶರು ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ನಿರತರಾಗಿದ್ದಾರೆ. ಇದರಿಂದ ಅವರು ಬೆಳಗ್ಗೆ 9 ಗಂಟೆ ಮೊದಲು ಮತ್ತು ಸಂಜೆ 6 ಗಂಟೆಯ ನಂತರ ಸ್ವಚ್ಛತಾಗೃಹಕ್ಕೆ ಹೋಗುತ್ತಾರೆ ಎಂದು ನನಗೆ ಹೇಳಲಾಗುತ್ತಿದೆ. ದೇಶದಲ್ಲಿ ಕೇವಲ ಶೇ. 6 ರಷ್ಟು ಜಿಲ್ಲಾ ನ್ಯಾಯಾಲಯದಲ್ಲಿ ಸ್ಯಾನಿಟರಿ ನ್ಯಾಪಿಕನ ಯಂತ್ರಗಳಿವೆ. ಮಹಿಳಾ ನ್ಯಾಯಾಧೀಶರು ಮತ್ತು ಸಿಬ್ಬಂದಿಗಳು ನ್ಯಾಯಾಲಯದಲ್ಲಿ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುವುದಿಲ್ಲ. ವಿಶೇಷವೆಂದರೆ ನ್ಯಾಯಾಂಗದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿದೆ.
Need to evaluate why District Judges are not following “bail is rule” principle: CJI DY Chandrachud
Read story here: https://t.co/VITVSFHkUn pic.twitter.com/XrhyZjWto9
— Bar & Bench (@barandbench) March 2, 2024
ಸಂಪಾದಕೀಯ ನಿಲುವುಇದಕ್ಕಾಗಿ ಮುಖ್ಯ ನ್ಯಾಯಾಧೀಶರೇ ಮುಂದಾಳತ್ವ ವಹಿಸಬೇಕಾಗಿದೆ ಮತ್ತು ಅವರ ಅಧಿಕಾರದ ವ್ಯಾಪ್ತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆಯೆಂದು ಜನತೆಗೆ ಅನಿಸುತ್ತದೆ. |