ಸೊಲಾಪೂರ ಮತ್ತು ಮಾಲೆಗಾಂವನಲ್ಲಿ ವಕ್ಫ್ ಬೋರ್ಡ್ ನಿಂದ ‘ಲ್ಯಾಂಡ್ ಜಿಹಾದ’ ! – ಶಾಸಕ ಗೋಪಿಚಂದ ಪಡಳಕರ

ಹಿಂದೂಗಳಿಗೆ ಮನೆ ಬಿಟ್ಟು ಹೋಗುವಂತೆ ಒತ್ತಡ ಹೇರಿರುವ ಆರೋಪ !

ಶ್ರೀ. ಯಜ್ಞೇಶ ಸಾವಂತ, ಮುಂಬಯಿ

ಮುಂಬಯಿ – ಸೋಲಾಪುರ ಮಹಾನಗರಪಾಲಿಕೆಯ ಸರಹದ್ದಿನಲ್ಲಿರುವ ಸಾಖರಪೇಠ ,ಸಿಟಿ ಸರ್ವೆ ಸಂಖ್ಯೆ 99/80, ಇಲ್ಲಿ ನೂರೈವತ್ತು ವರ್ಷಗಳಿಂದ ಅಧಿಕ ಸಂಖ್ಯೆಯ ಹಿಂದೂಗಳು ವಾಸಿಸುತ್ತಿದ್ದಾರೆ. ಈ ಸ್ಥಳದಲ್ಲಿ ವಾಸಿಸುತ್ತಿರುವ ಸ್ಥಳೀಯರಿಗೆ ವಕ್ಫ ಮಂಡಳಿಯಿಂದ ಮೇಲಿಂದ ಮೇಲೆ ನೊಟೀಸು ನೀಡಿ ಭೂಮಿಯನ್ನು ಕಬಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ವಿರೋಧಿಸಿ ಸ್ಥಳೀಯರು ಅನೇಕ ಪ್ರತಿಭಟನೆ ನಡೆಸಿದರು. ಇಲ್ಲಿ ವಾಸಿಸುವವರು ಮಹಾನಗರ ಪಾಲಿಕೆಗೆ ಅನೇಕ ವರ್ಷಗಳಿಂದ ತೆರಿಗೆ ಭರಿಸುತ್ತಿದ್ದಾರೆ. ಅವರ ಬಳಿ `ಪ್ರಾಪರ್ಟಿ ಕಾರ್ಡ’ ಇದೆ. ಆದರೆ ಇದುವರೆಗೂ 7/12 ಮೇಲೆ ಜನರ ಹೆಸರು ನೊಂದಣಿಯಾಗಿರುವುದಿಲ್ಲ. ‘ಒಂದು ವಿಶಿಷ್ಟ ಸಮಾಜ’ದ ಜನರು ಈ ಜನರಿಗೆ ಮೇಲಿಂದ ಮೇಲೆ ತೊಂದರೆ ನೀಡಿ, ಅವರನ್ನು ಮನೆಯನ್ನು ಬಿಟ್ಟು ಹೋಗುವಂತೆ ಒತ್ತಡ ಹೇರುತ್ತಿದ್ದಾರೆ. ಅವರಿಗೆ ಮನೆಯನ್ನು ಬಿಟ್ಟು ಹೋಗುವಂತೆ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ವಿಧಾನಪರಿಷತನಲ್ಲಿ ಭಾಜಪ ಶಾಸಕ ಗೋಪಿಚಂದ್ ಪಡಳಕರ ಇವರು ಮಾತನಾಡಿ ಸರಕಾರ ಇತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಪಡಳಕರ ತಮ್ಮ ಮಾತನ್ನು ಮುಂದುವರಿಸಿ, ಸೋಲಾಪೂರದ ಸಾಖರಪೇಠ ಸರಹದ್ದಿನಲ್ಲಿ ` ಹಾಶಿ ಮಕೀರ ಮಶೀದ ಟ್ರಸ್ಟ’ ಸ್ಥಾಪಿಸಲಾಗಿದೆ. ಜಾಕಿರ ಜಹಾಂಗೀರ ಮಣಿಯಾರ ಮತ್ತು ಅಹಮದ ಕಲಾಂಸಾಬ ಸೈಯದ ಅದರ ವಿಶ್ವಸ್ತರಾಗಿದ್ದಾರೆ. ಅವರು ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ಒಂದು ವೇಳೆ ಅವರು ಸರಕಾರಿ ನೌಕರಿಯಲ್ಲಿದ್ದರೆ, ಅವರಿಗೆ ಆ ವಿಶ್ವಸ್ತಮಂಡಳಿಯಲ್ಲಿ ಇರುವ ಅಧಿಕಾರವಿಲ್ಲ. ಈ ವಿಶ್ವಸ್ತ ಮಂಡಳಿಯ ಮಾಹಿತಿಯನ್ನು ತೆಗೆದುಕೊಂಡಾಗ, ಅದರ ನೊಂದಣಿ ಧರ್ಮದಾಯಿ ಇಲಾಖೆಯಲ್ಲಿಯೂ ಇಲ್ಲವೆಂದು ಗಮನಕ್ಕೆ ಬಂದಿತು. ಇದರಿಂದ ಇದು ಗಂಭೀರ ವಿಷಯವಾಗಿದೆ. ಆಡಳಿತವು ಈ ವಿಷಯದಲ್ಲಿ ಕ್ರಮ ಕೈಕೊಳ್ಳಬೇಕು ಮತ್ತು ಈ ರಹಿವಾಸಿಗಳಿಗೆ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಸರಕಾರದಲ್ಲಿ ನಾನು ಕೋರುತ್ತೇನೆ. ಇದೇ ರೀತಿ ಇಲ್ಲಿರುವ ಇನ್ನೊಂದು ಸ್ಥಳದ ವಿಷಯದಲ್ಲಿಯೂ ಆಗಿದೆ. ಅದರೆಡೆಗೂ ಸರಕಾರ ಗಮನ ಹರಿಸಬೇಕು.

ಮಾಲೆಗಾಂವ ದಲ್ಲಿ ಭೂಮಿ ಜಿಹಾದ

ಇನ್ನು ಶಾಸಕ ಪಡಲ್ಕರ್ ಮಾತನಾಡಿ, ಮಾಲೆಗಾಂವ್ ನಲ್ಲೂ ಲ್ಯಾಂಡ್ ಜಿಹಾದ್ ದಂಧೆ ನಡೆಯುತ್ತಿದೆ. ದಸನೆ, ಮೌಜೆ ಧಾಣೆ, ಚಿಖಲ್ ಅಹೋಳ ಮತ್ತು ವಡಗಾಂವ ಗ್ರಾಮಗಳಲ್ಲಿ ತಪ್ಪು ದಾಖಲೆ ಮಾಡಿ ಜಮೀನು, ದಾಖಲೆ ಪತ್ರಗಳನ್ನು ಅಯೋಗ್ಯರೀತಿಯಲ್ಲಿ ದಾಖಲಾತಿ ಮಾಡಿರುವ ನಿದರ್ಶನಗಳಿವೆ. ಆ ಬಗ್ಗೆ ಸರಕಾರಕ್ಕೆ ದಾಖಲೆಗಳನ್ನು ನೀಡಬಲ್ಲೆ. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನ ಆಡಳಿತಾವಧಿಯಲ್ಲಿ ನಡೆದ ‘ವಕ್ಫ ಕಾಯಿದೆ 1995’ ಇದಕ್ಕೆ ಕಾರಣವಾಗಿದೆ. ನೆನಪಿಡಿ, ಹಿಂದೂಗಳ ಮತ್ತು ದೇಶದ ಮೂಲಕ್ಕೆ ಏಟು ಹಾಕಿರುವ ಕಪ್ಪು ಕಾನೂನನ್ನು ರದ್ದುಗೊಳಿಸಿದಾಗ ಮಾತ್ರ ಮತಾಂಧ ಮುಸಲ್ಮಾನರಿಂದ ನಡೆಸಲಾಗುತ್ತಿರುವ ಪ್ರಯತ್ನಗಳಿಗೆ (?) ಹಿನ್ನಡೆಯಾಗುವುದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ.