ಲುಧಿಯಾನಾ(ಪಂಜಾಬ)ದಲ್ಲಿ ಅಜ್ಞಾತರಿಂದ ಶಿವ ಮಂದಿರದಲ್ಲಿನ 14 ಮೂರ್ತಿಗಳು ಧ್ವಂಸ ! 

ಲುಧಿಯಾನಾ (ಪಂಜಾಬ) – ಇಲ್ಲಿನ ಜುಗಿಯಾನಾ ಪ್ರದೇಶದ ಸಾಹನೆವಾಲ ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಶಿವ ಮಂದಿರವನ್ನು ಅಜ್ಞಾತರು ಧ್ವಂಸಗೊಳಿಸಿದ್ದಾರೆ. ದೇವಸ್ಥಾನದಲ್ಲಿದ್ದ ಶಿವಲಿಂಗ ಸೇರಿದಂತೆ ಒಟ್ಟು 14 ಮೂರ್ತಿಗಳನ್ನು ಧ್ವಂಸಗೊಳಿಸಲಾಗಿದೆ. ಫೆಬ್ರವರಿ 26 ರ ಮಧ್ಯರಾತ್ರಿಯ ನಂತರ ಈ ಘಟನೆ ನಡೆದಿದೆ. ಮರುದಿನ ಬೆಳಗ್ಗೆ ಅರ್ಚಕರು ಪೂಜೆಗೆಂದು ದೇವಸ್ಥಾನಕ್ಕೆ ಬಂದಾಗ ದೇವಸ್ಥಾನವನ್ನು ಧ್ವಂಸ ಮಾಡಿರುವುದು ಕಂಡಿತು. ಪೊಲೀಸರು ಅಪರಾಧ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಆಡಳಿತವು ಹಿಂದೂಗಳಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದೆ. ಹಿಂದೂ ಸಂಘಟನೆಗಳು ಆಡಳಿತಕ್ಕೆ ಕ್ರಮಕೈಗೊಳ್ಳಲು 72 ಗಂಟೆಗಳ ಕಾಲಾವಕಾಶ ನೀಡಿದೆ.

1. ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿರಲಿಲ್ಲ. ಹೀಗಾಗಿ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

2. ಘಟನೆಗೆ ಸಂಬಂಧಿಸಿದಂತೆ ಶಿವಸೇನೆಯ ಸ್ಥಳೀಯ ನಾಯಕರಾದ ಭಾನು ಪ್ರತಾಪ ರವರು ಮಾತನಾಡಿ, ಕೆಲವು ದಿನಗಳ ಹಿಂದೆ ಹಸುವಿನ ಛಿದ್ರಗೊಳಿಸಿದ ಮುಂಡಗಳು ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ, ಎಂದು ಹೇಳಿದರು.

3. ಹಿಂದೂ ಮುಖಂಡ ಅಮಿತ ಕೌಂಡಲ ರವರು ಮಾತನಾಡಿ, `ಪಂಜಾಬಿನಲ್ಲಿ ದೇವಸ್ಥಾನಗಳ ಮೇಲಿನ ದಾಳಿಗಳು ಸಾಮಾನ್ಯವಾಗಿದೆ. ಮಹಾಶಿವರಾತ್ರಿ ಮುನ್ನ ಇಂತಹ ಘಟನೆ ನಡೆದಿರುವುದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ’ ಎಂದು ಹೇಳಿದರು.

4. ಹಿಂದೂ ಮುಖಂಡ ರಿಷಭ್ ಕನೌಜಿಯವರು ಆಡಳಿತವು ಕುಂಭಕರ್ಣನಂತೆ ಮಲಗಿದೆಯೆಂದು ಆರೋಪಿಸಿದರು.

5. ಐದು ತಿಂಗಳ ಹಿಂದೆ, ಟ್ರಕ್ ಡಿಕ್ಕಿ ಹೊಡೆದು ಈ ದೇವಸ್ಥಾನಕ್ಕೆ ಬಹಳ ಹಾನಿಯಾಗಿತ್ತು. ದೇವಸ್ಥಾನ ಸಮಿತಿಯ ಸದಸ್ಯರು ದೇವಸ್ಥಾನದ ದುರಸ್ತಿ ಮಾಡಿಸಿದ್ದರು.

(ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟು ಮಾಡುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)

ಸಂಪಾದಕೀಯ ನಿಲುವು

ಭಾರತದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಹಿಂದೂಗಳು ಮತ್ತು ಅವರ ಧಾರ್ಮಿಕ ಸ್ಥಳಗಳು ಎಲ್ಲೆಡೆ ಅಸುರಕ್ಷಿತವಾಗಿವೆ. ಈ ಪರಿಸ್ಥಿತಿ ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ, ಎಂಬುದನ್ನು ಹಿಂದೂಗಳು ಗಮನಿಸಬೇಕು !