ಛತ್ತೀಸ್ಗಡದಲ್ಲಿ ಕಾಂಗ್ರೆಸ್‌ನ ಮಹಿಳಾ ಶಾಸಕಿ ಪಾದ್ರಿಯ ಚರಣಗಳ ಮೇಲೆ ತಲೆಬಾಗಿರುವ ವಿಡಿಯೋ ವೈರಲ್ 

  • ಪಾದ್ರಿಯಿಂದಲೇ ಶಾಸಕಿ ಆಗಿರುವ ದಾವೆ

  • ಭಾಜಪದಿಂದ ಟೀಕೆ 

ಬಿಲೈಗಡ (ಛತ್ತೀಸ್ಗಢ) – ಇಲ್ಲಿಯ ಕಾಂಗ್ರೆಸ್ಸಿನ ಶಾಸಕಿ ಕವಿತಾ ಪ್ರಾಣ ಲಾಹೇರೆ ಇವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾದ್ರಿ ಬಜಿಂದರ್ ಸಿಂಹ ಇವರ ಸಭೆಯಲ್ಲಿ ಚಿಕಿತ್ಸೆಗಾಗಿ ಶಾಸಕಿ ಹೋಗಿರುವ ವಿಡಿಯೋ ಆಗಿದೆ. ಇದರಲ್ಲಿ ಶಾಸಕಿ ಕವಿತಾ ಪ್ರಾಣ ಲಾಹೇರೆ ಪಾದ್ರಿ ಸಿಂಹ ಇವರನ್ನು ಹೊಗಳುತ್ತಿರುವುದು ಕಾಣುತ್ತದೆ, ಅವರು, ‘ಪಾದ್ರಿ ಬಜೇಂದರ್ ಸಿಂಹ ಇವರಿಂದ ನಾನು ಶಾಸಕಿ ಆಗಿದ್ದೇನೆ’, ಎಂದು ಹೇಳುತ್ತಿದ್ದಾರೆ. ಈ ವಿಡಿಯೋದಿಂದ ಭಾಜಪವು ಶಾಸಕಿ ಲಾಹೇರೆ ಇವರನ್ನು ಟೀಕಿಸಿದ್ದಾರೆ.

೧. ಈ ವಿಡಿಯೋದಲ್ಲಿ ಶಾಸಕಿ ಕವಿತಾ ಲಾಹೇರೆ ಇವರು ಬಜೇಂದರ್ ಸಿಂಹ ಇವರ ಎದುರು ಸಾಷ್ಟಾಂಗ ನಮಸ್ಕಾರ ಹಾಕುವುದು ಕಾಣುತ್ತಿದೆ. ಇದರ ನಂತರ ಬಜಿಂದರ್ ಸಿಂಗ್ ಇವರು, ಹೆದರುವ ಅವಶ್ಯಕತೆ ಇಲ್ಲ, ಭಗವಂತ ನಿಮ್ಮ ಕೆಲಸ ಮಾಡುವನು, ಎಂದು ‘ನಾನು ಭವಿಷ್ಯ ನುಡಿದಿದ್ದೆ ಮತ್ತು ಹೇಳಿದ್ದೆ.’ ಅದರ ನಂತರ ಶಾಸಕಿ ಕವಿತಾ ಲಾಹೇರೆ ಇವರು ‘ಜೈ ಕ್ರಿಸ್ತ, ಜೈ ಪ್ರಭು ಯೇಸು ಕ್ರಿಸ್ತ’ ಎಂದು ಹೇಳಿದ್ದಾರೆ.

೨. ಈ ವೀಡಿಯೊ ಭಾಜಪದ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮಿತ್ ಚಿಮನಾನಿ ಇವರು ಶೇರ್ ಮಾಡುವಾಗ, ಛತ್ತೀಸ್ಗಡದ ಸಂಸ್ಕೃತಿಯ ಪ್ರಚಾರ ಮಾಡುತ್ತಿರುವುದು ದಾವೆ ಮಾಡಿ ಕಾಂಗ್ರೆಸ್ ೫ ವರ್ಷದಿಂದ ಯಾವ ರೀತಿ ಪ್ರಚಾರ ಮಾಡಿದೆ, ಇದು ಸ್ಪಷ್ಟವಾಗಿದೆ.

೩. ಇದರ ಜೊತೆಗೆ ಭಾಜಪವು ಇನ್ನೊಂದು ವಿಡಿಯೋ ಪೋಸ್ಟ್ ಮಾಡುತ್ತಾ, ಈ ಬಿಲೈಗಡದ ಶಾಸಕಿ ಕವಿತಾ ಪ್ರಾಣ ಲಾಹೇರೆ ಇದ್ದರು. ‘ಪಾಪಾ (ಪಾದ್ರಿ ಬಜಿಂದರ ಇವರನ್ನು ‘ತಂದೆ’ ಎಂದು ಉದ್ದೇಶಿಸಿ) ನನಗಾಗಿ ಎಲ್ಲವೂ ಮಾಡಿದ್ದಾರೆ, ಎಂದು ಹೇಳಿ ಒಂದು ಜನಾಂಗದಿಂದ ಆಕೆಯ ಬ್ರೈನ್ ವಾಷ್ ಮಾಡಿದ್ದಾರೆ. ಒಂದು ಕುಟುಂಬಕ್ಕೆ ಸಂತೋಷಪಡಿಸುವುದಕ್ಕಾಗಿ ಕಾಂಗ್ರೆಸ್ ಛತ್ತಿಸ್ಗಢ ಮತ್ತು ಹಿಂದೂ ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಿದೆ. ಆದ್ದರಿಂದ ಜನರು ಕಾಂಗ್ರೆಸ್ಸನ್ನು ತಿರಸ್ಕರಿಸುತ್ತಿದ್ದಾರೆ. ಶಾಸಕರ ಈ ಅವಸ್ಥೆ ಇದ್ದರೆ ಸಾಮಾನ್ಯ ಜನರ ಅವಸ್ಥೆ ಏನಾಗುವುದು ?

ಜನಪ್ರೀತಿನಿಧಿಗಳು ದೇವಸ್ಥಾನ, ಮಸೀದಿ ಅಥವಾ ಇತರ ಧಾರ್ಮಿಕ ಸ್ಥಳಗಳಿಗೆ ಹೋದರೆ ಭಾಜಪದ ಆಕ್ಷೇಪ ಏಕೆ ? – ಕಾಂಗ್ರೆಸ್ 

ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷ ದೀಪಕ್ ಬೈಜ್ ಇವರು ಭಾಜಪದ ಟೀಕೆಗೆ ಪ್ರತ್ಯುತ್ತರ ನೀಡುವಾಗ, ಯಾರಾದರು ಜನಪ್ರತಿನಿಧಿಗಳು ದೇವಸ್ಥಾನ, ಮಸೀದಿ ಅಥವಾ ಯಾವುದೇ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರೆ ಭಾಜಪ ಏಕೆ ಆಕ್ಷೇಪಿಸುತ್ತದೆ ? ಜನರಿಗೆ ಕೇವಲ ಅಯೋಧ್ಯೆಗೆ ಹೋಗಿ, ಕೇವಲ ಪ್ರಭು ಶ್ರೀ ರಾಮನ ನಾಮ ಜಪಿಸಿ, ಇತರ ಯಾವ ನಾಮವು ಹೇಳಬೇಡಿ ಎಂದು ಭಾಜಪದ ಇಚ್ಛೆಯಾಗಿದೆ. ಭಾಜಪಕ್ಕೆ ಈ ಎಲ್ಲಾ ಅಂಶಗಳು ಚುನಾವಣೆಯ ಸಮಯದಲ್ಲಿ ನೆನಪಾಗುತ್ತವೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನವರು ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರಕ್ಕೆ ಹೋಗುವದನ್ನು ತಪ್ಪಿಸಿದರು; ಆದರೆ ಪಾದ್ರಿಯ ಚರಣಗಳಲ್ಲಿ ತಲೆ ಬಾಗಲು ಅವರಿಗೆ ಸಮಯವಿದೆ, ಇದು ಹಿಂದೂಗಳು ತಿಳಿದುಕೊಳ್ಳಬೇಕು !