ಮುಂಬಯಿ – ‘ಪಿಎಂ ಸೂರ್ಯಘರ್ ಯೋಜನೆ’ ಮೂಲಕ ಕೇಂದ್ರ ಸರ್ಕಾರವು 1 ಕೋಟಿ ಮನೆಗಳ ಮೇಲೆ ‘ಸೋಲಾರ್ ರೂಫ್‌ಟಾಪ್’ (ಮೇಲ್ಛಾವಣಿಯ ಮೇಲೆ ಸೋಲಾರ ಸ್ಥಾಪಿಸುವುದು) ಸ್ಥಾಪಿಸುವ ಗುರಿಯನ್ನು ಹೊಂದಿದೆ. ನಾಗರಿಕರ ಪ್ರತಿತಿಂಗಳಿಗೆ ವಿದ್ಯುತ್ ಆವಶ್ಯಕತೆ ಸರಾಸರಿ 100 ರಿಂದ 130 ಯೂನಿಟ್‌ಗಳಷ್ಟಿರುತ್ತದೆ ಮತ್ತು ಇದಕ್ಕಾಗಿ ನಾಗರಿಕರಿಗೆ ಸರಾಸರಿ 1,000 ರಿಂದ 1ಸಾವಿರದ 200 ರೂ.ವರೆಗೆ ವಿದ್ಯುತ್ ಬಿಲ್ಲು ಭರಿಸಬೇಕಾಗಿದ್ದರೆ, ನಿಮ್ಮ 2 ವರ್ಷಗಳ ಮೊತ್ತವನ್ನು ಒಮ್ಮೆಲೇ ಭರಿಸಿ ನೀವು ಮುಂದಿನ ಕನಿಷ್ಠ 25 ವರ್ಷಗಳ ವರೆಗೆ ಉಚಿತ ವಿದ್ಯುತ್ ಪಡೆಯಬಹುದು ಎಂದು ಸರಕಾರದಿಂದ ಹೇಳಲಾಗುತ್ತಿದೆ.
‘ಪ್ರಧಾನಮಂತ್ರಿ ಸೂರ್ಯಘರ ಯೋಜನೆ’ಗೆ ಸಂಬಂಧಿಸಿದ ಮಾಹಿತಿ !
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ ಒದಗಿಸಲು ‘ಪಿಎಂ ಸೂರ್ಯಘರ: ಉಚಿತ ವಿದ್ಯುತ್ ಯೋಜನೆ’ಯನ್ನು ಇತ್ತೀಚೆಗೆ ಘೋಷಣೆ ಮಾಡಿದರು. ಇದಕ್ಕಾಗಿ ಕೇಂದ್ರವು 75 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಿದೆ. ಈ ಯೋಜನೆಗೆ ಕನಿಷ್ಠ 130 ರಿಂದ 1 ಸಾವಿರ ಚದರ ಅಡಿ ವಿಸ್ತೀರ್ಣದ ಛಾವಣಿಯ ಅಗತ್ಯವಿದೆ. ಫ್ಲ್ಯಾಟನಲ್ಲಿ ವಾಸಿಸುವವರಿಗೆ ಅಥವಾ ಬಾಡಿಗೆದಾರರಿಗೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ‘https://pmsuryaghar. gov.in’ ಈ ಸಂಕೇತ ಸ್ಥಳದಲ್ಲಿ ಅರ್ಜಿ ಸಲ್ಲಿಸಿ, ನಿಮ್ಮ ಛಾವಣಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಮತ್ತು ನಿಮ್ಮ ಆವಶ್ಯಕತೆಗೆ ಅಗತ್ಯವಿರುವ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಸೌರ ಫಲಕಗಳನ್ನು ಅಳವಡಿಸಿಕೊಳ್ಳಬಹುದು. ಇದಕ್ಕೆ ಸರಕಾರದಿಂದ ಸಹಾಯಧನವೂ(ಅನುದಾನ?) ಸಿಗಲಿದೆ.