೨೨ ವರ್ಷದಿಂದ ನಾಪತ್ತೆ ಆಗಿರುವ ಸಿಮಿ ಭಯೋತ್ಪಾದಕನ ಬಂಧನ

ಗುರುತು ಮರೆಮಾಚಿ ಶಿಕ್ಷಕನೆಂದು ಕೆಲಸ

ನವದೆಹಲಿ – ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ (ಸಿಮಿ) ಈ ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆಯ ಪರಾರಿ ಭಯೋತ್ಪಾದಕ ಹನೀಫ್ ಶೇಖನನ್ನು ದೆಹಲಿ ಪೊಲೀಸರು ಬುಸಾವಳದಿಂದ ಬಂಧಿಸಿದ್ದಾರೆ. ಅವನು ಕಳೆದ ೨೨ ವರ್ಷದಿಂದ ಪರಾರಿಯಾಗಿದ್ದ. ಹನೀಫ್ ಅನೇಕ ಮುಸಲ್ಮಾನ ಯುವಕರಿಗೆ ಭಯೋತ್ಪಾದಕ ಚಟುವಟಿಕೆಯ ಪ್ರಶಿಕ್ಷಣ ನೀಡುತ್ತಿದ್ದನು. ಅವನು ಸಿಮಿಯ ಮಾಸಿಕದ ಸಂಪಾದಕನು ಕೂಡ ಆಗಿದ್ದನು. ಹನೀಫ್ ಶೇಖ ಇವನು ೨೦೦೨ ರಿಂದ ಪರಾರಿ ಆಗಿದ್ದ. ಅವನು ಭುಸಾವಳದಲ್ಲಿ ತನ್ನ ಗುರುತು ಮರೆಮಾಚಿ ವಾಸಿಸುತ್ತಿದ್ದನು. ಅಲ್ಲಿ ಒಂದು ಉರ್ದು ಶಾಲೆಯಲ್ಲಿ ಶಿಕ್ಷಕನಾಗಿದ್ದನು.

೧. ಪೋಲಿಸ ಉಪಯುಕ್ತ ಆಲೋಕ ಕುಮಾರ ಇವರು, ದೇಶಾದ್ಯಂತದಲ್ಲಿನ ಸಿಮಿಯ ಅನೇಕ ಘಟನೆಗಳಲ್ಲಿ ಹನಿಫನ ಪಾತ್ರವಿತ್ತು. ಹನೀಫ್ ಹೆಸರು ಅವನು ಪ್ರಕಾಶನಗೊಳಿಸಿರುವ ಸಿಮಿಯ ಮಾಸಿಕದಲ್ಲಿ ಪ್ರಸಿದ್ಧವಾಗಿತ್ತು. ಪೊಲೀಸರ ಬಳಿ ಇದು ಒಂದೇ ಒಂದು ಸುಳಿವು ಇತ್ತು. ಆದ್ದರಿಂದ ಅವನನ್ನು ಹುಡುಕುವುದು ಕಠಿಣವಾಗಿತ್ತು.

೨. ಹನೀಫ್ ‘ವಾಹದತ-ಏ-ಇಸ್ಲಾಂ’ ಈ ಗುಂಪಿನ ಸದಸ್ಯರಲ್ಲಿ ಒಬ್ಬನಾಗಿದ್ದನು ಮತ್ತು ಅವನು ಮಹಾರಾಷ್ಟ್ರ ಮತ್ತು ಅಕ್ಕಪಕ್ಕದ ರಾಜ್ಯದಿಂದ ಸಂಘಟನೆಗಾಗಿ ನಿಧಿ ಸಂಗ್ರಹಿಸುತ್ತಿದ್ದನು. ದಾನ ಧರ್ಮದ ಹೆಸರಿನಲ್ಲಿ ಅವನು ಹಣ ಸಂಗ್ರಹಿಸುತ್ತಿದ್ದನು.