ಇಸ್ರೋ ಮಂಗಳಗ್ರಹಕ್ಕೆ ‘ಲ್ಯಾಂಡರ್‘ಮೂಲಕ ‘ಹೆಲಿಕಾಪ್ಟರ್‘ ಕಳುಹಿಸುವ ಸಿದ್ಧತೆಯಲ್ಲಿ !

ನವ ದೆಹಲಿ – ಭಾರತದ ಮುಂದಿನ ಕಾರ್ಯಾಚರಣೆಯು ಮಂಗಳಗ್ರಹಕ್ಕೆ ಹೆಲಿಕಾಪ್ಟರ್‌ಗಳನ್ನು ಸಹ ಒಳಗೊಂಡಿರಬಹುದು. ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಪ್ರಸ್ತುತ ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಕಾರ್ಯ ಮಾಡುತ್ತಿದೆ. ಮಂಗಳಗ್ರಹದ ಮೇಲೆ ‘ಲ್ಯಾಂಡರ್‘ ಮೂಲಕ ‘ಹೆಲಿಕಾಪ್ಟರ್‘ ಕಳುಹಿಸುವ ಇಸ್ರೋದ ಯೋಜನೆ ಇದೆ. ಮಂಗಳದ ಮೇಲ್ಮೈಗೆ ಇಳಿದನಂತರ ಲ್ಯಾಂಡರ್ ‘ರೋವರ್‘ ಮತ್ತು ‘ರೊಟೋಕಾಪ್ಟರ್’ (ಹೆಲಿಕಾಪ್ಟರ್) ಇಳಿಸುತ್ತದೆ ಎಂದು ಹೇಳಲಾಗುತ್ತಿದೆ.

೧. ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಂಗಳಗ್ರಹಕ್ಕೆ ಕಳುಹಿಸಲಿರುವ ಹೆಲಿಕಾಪ್ಟರ್, ಅಮೇರಿಕಾದ ಬಾಹ್ಯಾಕಾಸ ಸಂಸ್ಥೆ ‘ನಾಸಾ‘ದ ‘ಕ್ವಾಡ್‌ಕಾಪ್ಟರ್‘ ನಂತೆಯೇ ಇರಲಿದೆ. ಈ “ಕ್ವಾಡ್‌ಕಾಪ್ಟರ್‘ ಮಂಗಳಗ್ರಹದಲ್ಲಿ ೧೮ ಕಿ.ಮಿ. ಪ್ರಯಾಣಿಸಿದೆ. ಇದಕ್ಕಾಗಿ ೩ ವರ್ಷದಲ್ಲಿ ೭೨ ಉಡಾವಣೆ ಮಾಡಲಾಗಿದೆ.

೨. ಇಸ್ರೋದ ಹೆಲಿಕಾಪ್ಟರ್ ಮಂಗಳದ ವಾತಾವರಣದ ಬಗ್ಗೆ ಮಾಹಿತಿ ಸಂಗ್ರಹಿಸಲು ಮಂಗಳದ ಮೇಲೆ ೧೦೦ ಮೀಟರ್ ತನಕ ಎತ್ತರಕ್ಕೆ ಹಾರುವ ನಿರೀಕ್ಷೆ ಇದೆ. ಭವಿಷ್ಯದ ಪರಿಸ್ಥಿತಿ ಮತ್ತು ಸಂಭವಿಸಬಹುದಾದ ಕಷ್ಟನಷ್ಟಗಳ ಅಂದಾಜು ತೆಗೆದುಕೊಳ್ಳಲು ಹಾಗೆಯೇ ಮುಂಬರುವ ಪರಿಶೋಧನಾ ಕಾರ್ಯಾಚರಣೆಗಳ ಕಾರ್ಯತಂತ್ರದ ನಿಯೋಜನೆಗೆ ಈ ಮಾಹಿತಿಯು ಅವಶ್ಯಕವಾಗಿದೆ.