ಪತ್ರದ ಮೂಲಕ ನಕ್ಸಲೀಯರಿಂದ ಮನವಿ !
ಗಡಚಿರೋಲಿ – ದೆಹಲಿ ಗಡಿಯಲ್ಲಿ ವಿವಿಧ ಬೇಡಿಕೆಗಳಿಗಾಗಿ ಧರಣಿ ನಡೆಸುತ್ತಿರುವ ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿರುವ ಸರಕಾರಕ್ಕೆ ತಕ್ಕ ಪಾಠ ಕಲಿಸುವಂತೆ ನಕ್ಸಲೀಯರು ಕರಪತ್ರ ಪ್ರಸಾರ ಮಾಡಿದ್ದಾರೆ. ಇದರೊಂದಿಗೆ ರೈತ ಚಳವಳಿಗೆ ಬೆಂಬಲ ನೀಡಿದ್ದಾರೆ. ನಕ್ಸಲೀಯರ ‘ದಂಡಕಾರಣ್ಯ ವಿಶೇಷ ವಲಯ ಸಮಿತಿ’ಯ ವಕ್ತಾರ ವಿಕಲ್ಪ ಈ ಕರಪತ್ರವನ್ನು ಹೊರಡಿಸಿದ್ದಾನೆ.
ಈ ಕರಪತ್ರದಲ್ಲಿ,
1. ಕನಿಷ್ಠ ಮೂಲ ಬೆಲೆ ಕಾಯಿದೆ, ಸ್ವಾಮಿನಾಥನ್ ಆಯೋಗದ ಕ್ರಮ, ಸಾಲ ಮನ್ನಾ, 2013ರ ಭೂಸ್ವಾಧೀನ ಕಾಯಿದೆ ರದ್ದತಿ ಮುಂತಾದ ಒಟ್ಟು 13 ಬೇಡಿಕೆಗಳೊಂದಿಗೆ ದೆಹಲಿ, ಪಂಜಾಬ್ ಮತ್ತು ಹರಿಯಾಣದ ಗಡಿಯಲ್ಲಿ ರೈತರು ರಾಜಧಾನಿ ದೆಹಲಿಗೆ ಬಂದಿದ್ದಾರೆ.
2. ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಆಂದೋಲನ ಹತ್ತಿಕ್ಕಲು ಗುಂಡಿನ ದಾಳಿ ನಡೆಸಲಾಗುತ್ತಿದೆ. ಅವರನ್ನು ಭಯೋತ್ಪಾದಕರು ಮತ್ತು ದೇಶದ್ರೋಹಿಗಳು ಎಂದು ಕರೆಯಲಾಗುತ್ತಿದೆ. ಬುಡಕಟ್ಟು ಪ್ರದೇಶಗಳಲ್ಲಿಯೂ ಇದೇ ರೀತಿಯ ದಬ್ಬಾಳಿಕೆ ನಡೆಯುತ್ತಿದೆ. ಅವರ ನೀರು ಮತ್ತು ಭೂಮಿಯನ್ನು ಅತಿಕ್ರಮಿಸಲಾಗುತ್ತಿದೆ. ಫೆಬ್ರವರಿ 16ರ ‘ಭಾರತ್ ಬಂದ್’ಗೆ ನಕ್ಸಲೀಯರು ಬೆಂಬಲ ನೀಡಿದ್ದಾರೆ. ಕರಪತ್ರದಲ್ಲಿಯೂ ಇದು ಉಲ್ಲೇಖಿಸಲಾಗಿದೆ.
ಸಂಪಾದಕೀಯ ನಿಲುವುನಕ್ಸಲೀಯರು ಮತ್ತು ಖಲಿಸ್ತಾನಿಗಳ ಶಕ್ತಿಗಳು ಹೇಗೆ ಕೈಜೋಡಿಸುತ್ತಿವೆ ಎಂಬುದನ್ನು ತಿಳಿಯಲು ಈ ಉದಾಹರಣೆ ಸಾಕು. ಇಂತಹ ದೇಶದ್ರೋಹಿ ಶಕ್ತಿಗಳ ಸಂಪೂರ್ಣ ನಿರ್ಮೂಲನೆಗೆ ಸರಕಾರದ ಮಟ್ಟದಲ್ಲಿ ಕಟ್ಟುನಿಟ್ಟಿನ ಪ್ರಯತ್ನಗಳು ಆಗಬೇಕು ! |