ರೈತರ ಪ್ರತಿಭಟನೆಗೆ ಸಂಬಂಧಿಸಿದ ‘ಎಕ್ಸ್’ ಖಾತೆಗಳನ್ನು ನಿಷೇಧಿಸಲು ಕೇಂದ್ರ ಸರಕಾರದ ಆದೇಶ

  • ‘ಎಕ್ಸ್’ನಿಂದ ನಿರಾಕರಣೆ

  • ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೋಷಿಸುತ್ತೇವೆ ! – ಎಕ್ಸ್

ನವ ದೆಹಲಿ – ಪಂಜಾಬ ಮತ್ತು ಹರಿಯಾಣದಲ್ಲಿನ ತಥಾಕಥಿತ ರೈತರಿಂದ ಪ್ರತಿಭಟನೆ ನಡೆಯುತ್ತಿದ್ದು ಅವರು ರಾಜಧಾನಿ ದೆಹಲಿಗೆ ಬಂದು ಪ್ರತಿಭಟಿಸುವ ಸಿದ್ಧತೆಯಲ್ಲಿದ್ದಾರೆ. ಇಂತಹದರಲ್ಲಿ ಈ ಪ್ರತಿಭಟನೆಯ ಮಾಹಿತಿ ನೀಡುವ ‘ಎಕ್ಸ್’ ನಲ್ಲಿನ ಖಾತೆಗಳನ್ನು ನಿಷೇಧಿಸುವ ಕೇಂದ್ರ ಸರಕಾರವು ‘ಎಕ್ಸ್’ ಕಂಪನಿಗೆ ಆದೇಶ ನೀಡಿದೆ. ಸರಕಾರಿ ಆದೇಶ ಇರುವುದರಿಂದ ‘ಎಕ್ಸ್’ ನಿಂದ ಸಂಬಂಧಿತ ಖಾತೆಗಳು ಮತ್ತು ಪೋಸ್ಟ್ ಗಳು ಅನಿವಾರ್ಯವಾಗಿ ತೆರವುಗೊಳಿಸಿದ್ದಾರೆ, ಎಂದು ‘ಎಕ್ಸ’ ಖುಲಾಸೆ ಮಾಡಿದೆ. ‘ಎಕ್ಸ್’ ನ ಅಧಿಕಾರಿಗಳು, ನಾವು ಅಭಿವ್ಯಕ್ತಿ ಸ್ವಾತಂತ್ರ್ಯ ಪೋಷಿಸುತ್ತೇವೆ. ಈ ಪೋಸ್ಟಗಳು ಕಾನೂನಿನ ಪ್ರಕಾರ ಶಿಕ್ಷೆಗೆ ಪಾತ್ರವಾಗಿವೆ. ಆದ್ದರಿಂದ ಅವುಗಳ ಮೇಲೆ ಈ ಕ್ರಮ ಕೈಗೊಂಡಿದ್ದೇವೆ. ಸರಕಾರದ ಆದೇಶದ ಪಾಲನೆ ಮಾಡುವಾಗ ನಾವು ಕೇವಲ ಭಾರತಕ್ಕಾಗಿ ಈ ಪೋಸ್ಟ್ ತೋರಿಸುವುದನ್ನು ನಿಷೇಧಿಸಿದ್ದೇವೆ ಎಂದು ಹೇಳಿದೆ.

ಪಾರದರ್ಶಕತೆಗಾಗಿ ಈ ಆದೇಶ ಬಹಿರಂಗಪಡಿಸಬೇಕು ! – ಎಕ್ಸ್

ಮಾಹಿತಿ ತಂತ್ರಜ್ಞಾನ ಸಚಿವಾಲಯ ‘ಎಕ್ಸ್’ ನ ಈ ಮನವಿಯ ಅಭ್ಯಾಸ ನಡೆಸಿ ಆದಷ್ಟು ಬೇಗನೆ ಉತ್ತರ ನೀಡುವರು. ‘ಎಕ್ಸ್’, ಭಾರತ ಸರಕಾರದ ಆದೇಶದ ವಿರೋಧದಲ್ಲಿ ನಾವು ಒಂದು ಅರ್ಜಿಯನ್ನು ದಾಖಲಿಸಿದ್ದೇವೆ. ಕಾನೂನಿನ ಬಂಧನ ಇರುವುದರಿಂದ ನಾವು ಸರಕಾರಿ ಆದೇಶ ಬಹಿರಂಗಪಡಿಸಲು ಸಾಧ್ಯವಿಲ್ಲ; ಆದರೆ ನಮ್ಮ ಅಭಿಪ್ರಾಯ ಏನೆಂದರೆ, ಪಾರದರ್ಶಕತೆಗಾಗಿ ಈ ಆದೇಶ ಬಹಿರಂಗಪಡಿಸಬೇಕು. ಈ ಆದೇಶ ಏನಾದರೂ ಬಹಿರಂಗವಾಗದಿದ್ದರೆ ಅದರಲ್ಲಿ ದಾಯಿತ್ವದ ಕೊರತೆ ಇರುವ ಅನುಮಾನ ಬರಬಹುದು.