ಮಿಝೋರಾಮಿನ ಜನರನ್ನು ಇಲ್ಲಿಂದ ಓಡಿಸಿದರೆ, ನಾವು ರಾಜ್ಯದಿಂದ ಮೈತೆಯಿ ಜನರನ್ನು ಓಡಿಸುವೆವು !

ಮಿಝೋರಾಮ ವಿದ್ಯಾರ್ಥಿ ಸಂಘಟನೆಯಿಂದ ಮಣಿಪುರದ ಮುಖ್ಯಮಂತ್ರಿಗಳಿಗೆ ಬೆದರಿಕೆ !

ಇಂಫಾಲ (ಮಣಿಪುರ) – ನೀವು(ಮಣಿಪುರ ಸರಕಾರವು) ಮಣಿಪುರದಿಂದ ಯಾವುದೇ ಮೀಝೋ ಅಥವಾ ಆದಿವಾಸಿ ವ್ಯಕ್ತಿಯನ್ನು ಹೊರಗೆ ಹಾಕಿದರೆ ನಾವು ಮಿಝೋರಾಮದಲ್ಲಿ ವಾಸಿಸುವ ಎಲ್ಲಾ ಮೈತೆಯಿಗಳನ್ನು ಓಡಿಸುವೆವು, ಎಂದು ಮಿಝೋ ಸ್ಟೂಡೆಂಟ್ಸ್ ಯೂನಿಯನ್ (ಎಂ. ಎಸ್. ಯು.) ಎಂಬ ಮಿಝೋರಾಮ ವಿದ್ಯಾರ್ಥಿ ಸಂಘಟನೆಯ ಬೆದರಿಕೆ ಹಾಕಿದೆ. ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ ಸಿಂಹರವರು ಫೆಬ್ರುವರಿ ೧೨ ರಂದು `೧೯೬೧ ರ ನಂತರ ಮಣಿಪುರದಲ್ಲಿ ಬಂದಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಗುರುತಿಸಿ ರಾಜ್ಯದ ಹೊರಗೆ ಓಡಿಸಲಾಗುವುದು. ಅವರು ಯಾವುದೇ ಜಾತಿ ಅಥವಾ ಸಮಾಜದವರಾಗಿದ್ದರೂ ಅವರನ್ನು ಓಡಿಸಲಾಗುವುದು’ ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತ್ಯುತ್ತರವೆಂದು ಎಂ. ಎಸ್. ಯು. ಈ ಬೆದರಿಕೆಯನ್ನು ಹಾಕಿದೆ ಎಂದು ತಿಳಿಯಲಾಗಿದೆ. ವಿದ್ಯಾರ್ಥಿ ನಾಯಕರು ಮಿಝೋರಾಮಿನಲ್ಲಿ ವಾಸಿಸುವ ಎಲ್ಲಾ ಮೈತೆಯಿಗಳ ವಿಸ್ತೃತ ಮಾಹಿತಿ ಕಲೆಹಾಕಲಾಗಿದೆ, ಎಂದು ಹೇಳಿದ್ದಾರೆ.

ಮಿಝೋರಾಮ ಸರಕಾರವು ಮ್ಯಾನ್ಮಾರದ ಗಡಿಯಲ್ಲಿ ಬೇಲಿ ಹಾಕುವುದನ್ನು ನಿಷೇಧಿಸಿ ಹಾಗೂ ಸ್ವತಂತ್ರ ಓಡಾಟ ನಿಲ್ಲಿಸುವುದನ್ನು ಖಂಡಿಸಿ ೧೯೫೦ರ ನಂತರ ರಾಜ್ಯದಲ್ಲಿ ಬರುವ ಜನರಿಗೆ ಭೂಮಿ ಖರೀದಿಸಲು ಅಥವಾ ಅದರ ಹಕ್ಕು ಪಡೆಯುವುದಕ್ಕೆ ನಿಷೇಧ ಹೇರಿರುವ ನೋಟಿಸ್ ಜಾರಿಗೊಳಿಸಿತ್ತು.

ಸಂಪಾದಕೀಯ ನಿಲುವು

ಸರಕಾರವು ಮೈತೆಯಿ ಹಿಂದೂಗಳನ್ನು ಓಡಿಸುವುದಾಗಿ ಬೆದರಿಕೆ ನೀಡುವ ಸಂಘಟನೆಯ ಮೇಲೆ ನಿರ್ಬಂಧ ಹೇರಿ ಎಲ್ಲ ಪದಾಧಿಕಾರಿಗಳನ್ನು ಜೈಲಿಗೆ ಕಳಿಸುವ ಧೈರ್ಯ ತೋರಬೇಕು !