ಹಿಂದೂ ಪಕ್ಷದಿಂದ ೧೯೦೨ ರಲ್ಲಿ ನಡೆದಿರುವ ಸಮೀಕ್ಷೆಯನ್ನು ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಲು ಆಗ್ರಹಿಸಿದೆ !
ಇಂದೂರು (ಮಧ್ಯಪ್ರದೇಶ) – ರಾಜ್ಯದಲ್ಲಿನ ಧಾರ ಜಿಲ್ಲೆಯಲ್ಲಿರುವ ಐತಿಹಾಸಿಕ ಭೋಜ ಶಾಲೆಯ ಸಮೀಕ್ಷೆ ನಡೆಸಲು ಹಿಂದುಗಳ ಬೇಡಿಕೆ ಮತ್ತೊಮ್ಮೆ ತೀವ್ರಗೊಂಡಿದೆ. ಈ ಕುರಿತು ೭ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳ ಮೇಲೆ ಫೆಬ್ರುವರಿ ೧೯ ರಂದು ಇಂದೂರು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಈ ಸಮಯದಲ್ಲಿ ೧೯೦೨ ರಲ್ಲಿ ನಡೆದಿರುವ ಭಾರತೀಯ ಪುರಾತತ್ವ ಇಲಾಖೆಯಿಂದ ಭೋಜ ಶಾಲೆಯ ಸಮೀಕ್ಷೆಯ ಆಧಾರ ನೀಡುತ್ತಾ, ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ಹಿಂದೂ ಪಕ್ಷದಿಂದ ಆಗ್ರಹಿಸಲಾಗಿದೆ. ನ್ಯಾಯಾಲಯವು ಅದರ ತೀರ್ಪು ಕಾದಿರಿಸಿದೆ.
೧. ಹಿಂದೂ ಪಕ್ಷದ ಪೂ. (ನ್ಯಾಯವಾದಿ) ಹರಿ ಶಂಕರ ಜೈನ ಇವರು ಮಾತನಾಡಿ, ೧೯೦೨ ರಲ್ಲಿ ನಡೆದಿರುವ ಭೋಜಶಾಲೆಯ ಸಮೀಕ್ಷೆಯಲ್ಲಿ ಭಾರತೀಯ ವಾಸ್ತುಕಲೆ, ವಿಷ್ಣುವಿನ ಪ್ರತಿಮೆ, ಹಿಂದೂ ಚಿಹ್ನೆಗಳು, ಸಂಸ್ಕೃತದ ಶಬ್ದ ಮುಂತಾದ ಸಾಕ್ಷಿಗಳು ದೊರೆತಿವೆ. ಅದನ್ನು ವೈಜ್ಞಾನಿಕ ಪದ್ಧತಿಯಿಂದ ಸಮೀಕ್ಷೆ ನಡೆಸಬೇಕು, ಇದರಿಂದ ವಿಷಯ ಸ್ಪಷ್ಟವಾಗಬಹುದು. ನಮ್ಮ ಅರ್ಜಿಯಲ್ಲಿ, ಭೋಜ ಶಾಲೆಯಲ್ಲಿ ಹಿಂದುಗಳಿಗೆ ನಿಯಮಿತ ಪೂಜೆ ಸಲ್ಲಿಸುವ ಅಧಿಕಾರವಿದೆ. ಅಲ್ಲಿ ಮುಸಲ್ಮಾನರು ಕೂಡ ನಮಜ ಪಠಿಸುತ್ತಾರೆ, ಅವರ ಪಠಣದ ಮೇಲೆ ನಿಷೇಧ ಹೇರಬೇಕು ನಮ್ಮದು ಬೇಡಿಕೆಯಾಗಿದೆ ಎಂದು ಹೇಳಿದರು.
೨. ಮುಸಲ್ಮಾನ ಪಕ್ಷದವರು, ಜಬಲಪುರ್ ಇಲ್ಲಿಯ ನ್ಯಾಯಾಲಯದಲ್ಲಿ ಈ ಪ್ರಕರಣದ ಕುರಿತು ವಿಚಾರಣೆ ಆರಂಭಿಸಿದ್ದಾರೆ. ಆದ್ದರಿಂದ ಇಂದೂರ ಉಚ್ಚ ನ್ಯಾಯಾಲಯವು ಆ ಅರ್ಜಿಯ ಮಾಹಿತಿ ಕೂಡ ಕೇಳಿದೆ ಎಂದು ಹೇಳಿದರು.
ಭೋಜಶಾಲೆಯಲ್ಲಿನ ಘಟನಾಕ್ರಮ !
೧೯೦೨ : ಲಾರ್ಡ್ ಕರ್ಝನ್ ಇವರು ಧಾರ ಮತ್ತು ಮಾಂಡು ಪ್ರವಾಸದಲ್ಲಿ ಇದ್ದರು. ಆ ಸಮಯದಲ್ಲಿ ಅವರು ಭೋಜ ಶಾಲೆಯ ಆರೈಕೆ ಮತ್ತು ದುರಸ್ತಿಗಾಗಿ ೫೦ ಸಾವಿರ ರೂಪಾಯಿ ಖರ್ಚು ಮಾಡಲು ಅನುಮತಿ ನೀಡಿತ್ತು. ಆ ಸಮಯದಲ್ಲಿ ಭೋಜ ಶಾಲೆಯ ಸಮೀಕ್ಷೆ ಕೂಡ ನಡೆಸಿದ್ದರು.
೧೯೫೧ : ಭೋಜ ಶಾಲೆಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದ್ದರು. ಆ ಸಮಯದಲ್ಲಿ ಜಾರಿಗೊಳಿಸಿರುವ ಸರಕಾರಿ ಪತ್ರದಲ್ಲಿ ಭೋಜಶಾಲೆ ಮತ್ತು ಕಮಾಲ ಮೌಲ ಮಸೀದಿಯ ಉಲ್ಲೇಖ ಕಂಡುಬರುತ್ತದೆ.
೧೯೯೫ : ಈ ಸಮಯದಲ್ಲಿ ನಡೆದಿರುವ ವಿವಾದದ ನಂತರ ಸರಕಾರವು ಮುಸಲ್ಮಾನರಿಗೆ ಪ್ರತಿ ಶುಕ್ರವಾರ ನಮಾಜ ಪಠಣೆಗೆ ಅನುಮತಿ ನೀಡಿತು. ಹಾಗೂ ಹಿಂದೂಗಳಿಗೆ ವಸಂತ ಪಂಚಮಿಯ ದಿನದಂದು ಪೂಜೆ ನಡೆಸಲು ಅನುಮತಿ ನೀಡಿತು. ಯಾವಾಗ ಯಾವಾಗ ವಸಂತ ಪಂಚಮಿ ಶುಕ್ರವಾರ ಬಂದಿತು ಅಂದಂದು ಮತಾಂಧ ಮುಸಲ್ಮಾನರು ಹಿಂದುಗಳ ಮೇಲೆ ದಾಳಿ ಮಾಡಿದರು. ಪೊಲೀಸರು ೨೦೧೩ ರಲ್ಲಿ ಹಿಂದೂಗಳ ಮೇಲೆ ಲಾಠಿಚಾರ್ಜ್ ಕೂಡ ಮಾಡಿದರು. ನಂತರ ಹಿಂದೂಗಳು ಪ್ರತಿ ಮಂಗಳವಾರ ಪೂಜೆ ಮಾಡುಲು ಹಾಗೂ ಮುಸಲ್ಮಾನರಿಗೆ ಶುಕ್ರವಾರ ನಮಾಜ ಪಠಿಸಲು ಅನುಮತಿ ನೀಡಿದರು.