ಜೈನ ಸಂತ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ದೇಹತ್ಯಾಗ !

ಜನರಲ್ಲಿ ಶ್ರದ್ಧಾಭಾವವನ್ನು ಜಾಗೃತಗೊಳಿಸುವಲ್ಲಿ ಅವರು ಗುರುತಿಸಿಕೊಂಡಿದ್ಧರು ! – ಪ್ರಧಾನ ಮಂತ್ರಿ

ರಾಯಪುರ (ಛತ್ತೀಸಗಢ) – ಜೈನ ಧರ್ಮದ ದಿಗಂಬರ ಪಂಥದ ಪ್ರಸಿದ್ಧ ಸಂತ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರು ದೇಹವನ್ನು ತ್ಯಜಿಸಿದ್ದಾರೆ. ವೃದ್ಧಾಪ್ಯದಿಂದ ಫೆಬ್ರವರಿ 17, ಉತ್ತರರಾತ್ರಿ 2 ಗಂಟೆ 35 ನಿಮಿಷಗಳ ನಂತರ ಅವರು ರಾಜ್ಯದ ಡೊಂಗರಗಡದಲ್ಲಿ ದೇಹವನ್ನು ತ್ಯಜಿಸಿದರು. ಅವರಿಗೆ 77 ವರ್ಷಗಳಾಗಿತ್ತು.

ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರು ಓರ್ವ ದಾರ್ಶನಿಕ ಸಾಧು ಆಗಿದ್ದರು. ಶಿಷ್ಯವೃತ್ತಿ ಮತ್ತು ತಪಶ್ಚರ್ಯಕ್ಕಾಗಿ ಅವರು ಗುರುತಿಸಲ್ಪಡುತ್ತಿದ್ದರು. ಅವರು ರಾಜಸ್ಥಾನದಲ್ಲಿ ದೀಕ್ಷೆ ತೆಗೆದುಕೊಂಡರು; ಆದರೆ ಹೆಚ್ಚಿನ ಸಮಯ ಅವರು ಬುಂದೇಲ್‌ಖಂಡ ಪ್ರದೇಶದಲ್ಲಿ ವಾಸ್ತವ್ಯ ಮಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಚಾರ್ಯ ವಿದ್ಯಾಸಾಗರ ಅವರ ನಿರ್ವಾಣದ ಸುದ್ದಿ ತಿಳಿದ ನಂತರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡಿ, ಮುಂದಿನ ಪೀಳಿಗೆಗಳು ಆಚಾರ್ಯ ವಿದ್ಯಾಸಾಗರ ಮತ್ತು ಅವರು ಮಾಡಿದ ಕಾರ್ಯವನ್ನು ನಿರಂತರವಾಗಿ ಸ್ಮರಿಸುತ್ತಾರೆ ಎಂದು ಹೇಳಿದ್ದಾರೆ. ಅವರು ಜನರಲ್ಲಿ ಶ್ರದ್ಧಾಭಾವವನ್ನು ಜಾಗೃತಗೊಳಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ನಾನು ಅವರನ್ನು ಇದೇ ವರ್ಷ ಡೊಂಗರಗಢದಲ್ಲಿ ಭೇಟಿಯಾಗಿದ್ದೆನು. ನಾನು ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ. ದೆಹಲಿಯಲ್ಲಿ ಆಯೋಜಿಸಲಾಗಿದ್ದ ಒಂದು ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿಯನ್ನು ಅರ್ಪಿಸುವಾಗ ಪ್ರಧಾನಮಂತ್ರಿಗಳು ಭಾವುಕರಾದರು.