ಆದಾಯ ತೆರಿಗೆ ಇಲಾಖೆಯಿಂದ ನಮ್ಮ ಬ್ಯಾಂಕ್ ಖಾತೆ ಸ್ಥಗಿತ ! – ಕಾಂಗ್ರೆಸ್ ಆರೋಪ

ನವ ದೆಹಲಿ – ಸುಪ್ರೀಂಕೋರ್ಟ್ ಚುನಾವಣೆ ತಡೆಹಿಡಿಯುವ ಯೋಜನೆಯನ್ನು ರದ್ದುಗೊಳಿಸಿದ ನಂತರ, ಫೆಬ್ರವರಿ ೧೬ ರಂದು ಕಾಂಗ್ರೆಸ್‌ನ ಕೋಶಾಧ್ಯಕ್ಷ ಅಜಯ ಮಾಕನ ಇವರು ಪತ್ರಿಕಾಗೋಷ್ಟಿ ನಡೆಸಿ ತಮ್ಮ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿದರು. ಮಾಕನ ಅವರು, ‘ನಾವು ಕೊಟ್ಟಿರುವ ಚೆಕ್‌ಗಳನ್ನು ಬ್ಯಾಂಕ್‌ಗಳು ನಗದು ಮಾಡುವುದಿಲ್ಲ. ನಮ್ಮಲ್ಲಿ ಈಗ ವಿದ್ಯುತ್ ಬಿಲ್ ಕಟ್ಟಲು ಹಾಗೂ ನೌಕರರ ಸಂಬಳ ಕೊಡಲು ಹಣವಿಲ್ಲ. ಆದಾಯತೆರಿಗೆ ಇಲಾಖೆಯು ಯುವ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ೨೧೦ ಕೋಟಿ ರೂಪಾಯಿಯ ವಸೂಲಿ ಮಾಡಲು ಆದೇಶಿಸಿದೆ‘, ಇದಕ್ಕಾಗಿ ಅವರು ಭಾಜಪ ಮತ್ತು ಆದಾಯತೆರಿಗೆ ಇಲಾಖೆಯೇ ಹೊಣೆ ಎಂದರು. ಅಜಯ ಮಾಕನ ಇವರು ಮಾತನಾಡುತ್ತಾ, ಪಕ್ಷದ ನಿಧಿಯ ರೂಪದಲ್ಲಿ ನಾವು ಜನರಿಂದ ಹಣವನ್ನು ಪಡೆಯುತ್ತಿದ್ದೇವೆ ಮತ್ತು ಅದರಿಂದ ನಾವು ಖರ್ಚುಗಳನ್ನು ಪೂರೈಸುತ್ತಿದ್ದೇವೆ; ಆದರೆ ಈಗ ನಾವು ಕೊಡುವ ಹಣ ಪಕ್ಷಕ್ಕೆ ತಲುಪುವುದಿಲ್ಲ, ಹಾಗಾದರೆ ನಾವು ಹಣವನ್ನು ಕೊಡಬೇಕೆ ಅಥವಾ ಬೇಡವೇ ?

ಸ್ಥಗಿತಗೊಳಿಸುವುದರ ಕಾಂಗ್ರೆಸ್ ಖಾತೆಗಳ ಮೇಲಿನ ನಿಷೇದ ಹಿಂಪಡೆ

ಆದಾಯ ತೆರಿಗೆ ನ್ಯಾಯಮಂಡಳಿ ಫೆಬ್ರವರಿ ೧೬ರ ಮಧ್ಯಾಹ್ನ ೧೨.೩೦ ಕ್ಕೆ ಕಾಂಗ್ರೆಸ್‌ನ ಖಾತೆಯ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಈ ಆದೇಶಕ್ಕೆ ೧ ಗಂಟೆ ಮೊದಲು ಕಾಂಗ್ರೆಸ್ ಪಕ್ಷದ ಕೋಶಾಧ್ಯಕ್ಷ ಅಜಯ ಮಾಕನ ಅವರು ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿದ್ದರು.