ದೆಹಲಿಯಲ್ಲಿ ಶೇ. 81 ರಷ್ಟು ಜನರು ಮದ್ಯಪಾನ ಮಾಡಿ ವಾಹನ ಚಲಾವಣೆ !

ಸಮೀಕ್ಷೆಯ ಅಂಕಿ-ಅಂಶ

ದೆಹಲಿ – ‘ಕಮ್ಯುನಿಟಿ ಅಗೇನ್ಸ್ಟ್ ಡ್ರಂಕನ್ ಡ್ರೈವಿಂಗ್’ (ಕ್ಯಾಡ) ಹೆಸರಿನ ಸಂಸ್ಥೆಯು ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಒಂದು ಸಮೀಕ್ಷೆಯನ್ನು ನಡೆಸಿತು. ಇದರಲ್ಲಿ ಭಾಗವಹಿಸಿದ್ದ 30 ಸಾವಿರ ದೆಹಲಿಯವರಲ್ಲಿ ಶೇಕಡಾ 81.2 ರಷ್ಟು ಜನರು ಮದ್ಯ ಸೇವಿಸಿ ವಾಹನ ಚಲಾಯಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ನಗರದ ಶೇ. 67.8 ರಷ್ಟು ಜನರು ರಸ್ತೆಗಳಲ್ಲಿ ನಡೆಯುವಾಗ ಅಸುರಕ್ಷಿತ ಎನಿಸುತ್ತಿದೆಯೆಂದು ಹೇಳಿದ್ದಾರೆ. ‘ಕ್ಯಾಡ’ ಕಳೆದ ವರ್ಷ ಆಗಸ್ಟ್ 1ರಿಂದ ಡಿಸೆಂಬರ್ 31ರವರೆಗೆ ಈ 5 ತಿಂಗಳ ಕಾಲಾವಧಿಯಲ್ಲಿ ಸಮೀಕ್ಷೆ ನಡೆಸಿತ್ತು. ಇದರಲ್ಲಿ 20 ಸಾವಿರದ 776 ಪುರುಷರು ಮತ್ತು 9 ಸಾವಿರದ 224 ಮಹಿಳೆಯರು ಭಾಗವಹಿಸಿದ್ದರು.

ಸಮೀಕ್ಷೆಯ ಇತರ ಪ್ರಮುಖ ಅಂಕಿಅಂಶಗಳು !

1. ಶೇ. 90 ರಷ್ಟು ಜನರಿಗೆ, ನಗರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅನಿಸುತ್ತದೆ.

2. ಶೇ.71.1 ರಷ್ಟು ಜನರು ತಾವು ರಸ್ತೆಯಲ್ಲಿ ದೊಡ್ಡ ಅಥವಾ ಸಣ್ಣ ಅಪಘಾತವನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ.

3. ಹೆಚ್ಚಿನ ಜನರು ವಾಹನಗಳ ಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ಹೆಚ್ಚು ಅಸುರಕ್ಷಿತವೆಂದು ಭಾವಿಸುತ್ತಾರೆ.

4. ನಗರದ ಶೇ. 85.3 ರಷ್ಟು ಜನರು ದೊಡ್ಡ ಅಥವಾ ಸಣ್ಣ ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.

5. ಅಪಘಾತಗಳ ಬಗ್ಗೆ ದೂರು ದಾಖಲಿಸುವ ಅಥವಾ ಸಂತ್ರಸ್ಥರಿಗೆ ಸಹಾಯ ಮಾಡುವವರ ಸಂಖ್ಯೆ ಶೇ.15 ಕ್ಕಿಂತ ಕಡಿಮೆಯಿತ್ತು. (ಇದು ದೆಹಲಿಯವರ ಸಂಕುಚಿತ ಮನೋಭಾವನೆಯಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

ದೇಶದ ರಾಜಧಾನಿಯಲ್ಲಿ ಈ ಸ್ಥಿತಿ ! ಹೀಗಿರುವಾಗ ಸುರಾಜ್ಯ ಯಾವಾಗಲಾದರೂ ಬರುವುದೇ ?