ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್‌ವಾಲೆಯ ಧ್ವಜ !

ನವ ದೆಹಲಿ – ರೈತರ ಆಂದೋಲನದ ಕುರಿತು ಒಂದು ವೀಡಿಯೋ ಪ್ರಸಾರವಾಗಿದ್ದು, ಅದರಲ್ಲಿ ರೈತರು ಅಂಬಾಲಾದ ಶಂಭುಗಡಿಯ ಬಳಿಯ ಫತೆಘರ್ ಸಾಹಿಬ್‌ನಿಂದ ಟ್ಯ್ರಾಕ್ಟರ್‌ಗಳನ್ನು ತರುತ್ತಿರುವುದು ಕಂಡು ಬಂದಿದೆ. ಈ ಎಲ್ಲಾ ಟ್ಯ್ರಾಕ್ಟರ್‌ಗಳು ದೆಹಲಿ ಗಡಿಯನ್ನು ತಲುಪಲಿವೆ. ಒಂದೇ ಸಮಯದಲ್ಲಿ ಅನೇಕ ಟ್ಯ್ರಾಕ್ಟರ್‌ಗಳು ದೆಹಲಿ ಗಡಿಯತ್ತ ಚಲಿಸುತ್ತಿರುವುದು ವೀಡಿಯೋದಲ್ಲಿ ಕಾಣುತ್ತಿದೆ. ಇದರಲ್ಲಿ ಎದಡನೇ ಕ್ರಮಾಂಕದಲ್ಲಿರುವ ಟ್ಯ್ರಾಕ್ಟರ್‌ ಮೇಲೆ ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್‌ವಾಲೆ ಹೆಸರಿನ ಧ್ವಜ ಕಾಣುತ್ತಿದೆ. ಇದಕ್ಕೂ ಮೊದಲು ವರ್ಷ ೨೦೨೦-೨೦೨೧ ರಲ್ಲಿ ದೆಹಲಿಯ ಗಡಿಯಲ್ಲಿ ರೈತರು ಆಂದೋಲನವನ್ನು ಪ್ರಾರಂಭಿಸಿದಾಗ, ಪ್ರತಿಭಟನಾಕಾರರು ಭಿಂದ್ರನ್‌ವಾಲೆಯ ಫಲಕಗಳನ್ನು ಹಾಕಿದ್ದರು.

ಸಂಪಾದಕೀಯ ನಿಲುವು

ರೈತರ ಚಳುವಳಿಯನ್ನು ಖಲಿಸ್ತಾನಿ ಭಯೋತ್ಪಾದಕರು ಬೆಂಬಲಿಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿ. ‘ರೈತರಿಗೆ ಒಳ್ಳೆಯದಾಗಬೇಕು‘ ಎಂಬುದು ಅಂದೋಲನದ ಗುರಿ ಅಲ್ಲ, ಬದಲಾಗಿ ಈ ಮೂಲಕ ಚಳುವಳಿಕಾರರು ದೇಶದಲ್ಲಿ ಅಸ್ಥಿರತೆಯನ್ನು ಸೃಸ್ಟಿಸಲು ಬಯಸುತ್ತಾರೆ. ಆದ್ದರಿಂದ ಸರಕಾರವು ಚಳುವಳಿ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !