ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ‘ಯುಪಿಐ‘ ಸೇವೆಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ !

‘ಯುಪಿಐ‘ (‘ಯುವೈಟೆಡ್ ಪೇಮೆಂಟ್ ಇಂಟರಫೇಸ್‘) ಅಂದರೆ ಆನ್‌ಲೈನ್ ವ್ಯವಹಾರ ಮಾಡುವ ಸೇವೆ

ನವ ದೆಹಲಿ – ಫ್ರಾನ್ಸ್‌ನಂತರ ಈಗ ಶ್ರೀಲಂಕಾ ಮತ್ತು ಮಾರಿಷಸ್ ಈ ದೇಶಗಳಲ್ಲಿ ಭಾರತದ ‘ಯುಪಿಐ‘ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಪರೆನ್ಸ್ ಮೂಲಕ ಈ ಸೇವೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀಲಂಕಾದ ಅಧ್ಯಕ್ಷ ರಾನಿಲ ವಿಕ್ರಮ್ ಸಿಂಘೆ ಮತ್ತು ಮಾರಿಷಸ್‌ನ ಪ್ರಧಾನಿ ಪ್ರವೀಂದ್ರ ಜುಗನಾಥ ಮತ್ತು ಮೂರೂ ದೇಶಗಳ ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳು ಉಪಸ್ಥಿತರಿದ್ದರು. ಎರಡೂ ದೇಶಗಳ ಜನರು ಈಗ ಈ ಸೇವೆಯನ್ನು ಬಳಸಬಹುದು. ಹಾಗೆಯೇ ಭಾರತದಲ್ಲಿಯ ನಾಗರಿಕರು ಈ ಎರಡೂ ದೇಶಗಳ ನಾಗರಿಕರೊಂದಿಗೆ ಆನ್‌ಲೈನ್‌ನಲ್ಲಿ ವ್ಯವಹಾರ ಮಾಡಬಹುದು.

ಮಾರಿಷಸ್‌ನಲ್ಲಿ ‘ರೂಪೇ ಕಾರ್ಡ್‘ ಸೇವೆ ಪ್ರಾರಂಭ

‘ಯುಪಿಐ‘ ಜೊತೆಗೆ ‘ರೂಪೇ ಕಾರ್ಡ್‘ ಸೇವೆಯ ಉದ್ಘಾಟನೆ ಮಾಡಲಾಯಿತು. ಈ ಸೇವೆ ಮಾರಿಷಸ್‌ನಲ್ಲಿ ಪ್ರಾರಂಭಿಸಲಾಗಿದೆ. ಈಗ ಮಾರಿಷಸ್ ಬ್ಯಾಂಕ್‌ಗಳು ‘ರೂಪೇ‘ ವ್ಯವಸ್ಥೆಯನ್ನು ಆಧರಿಸಿದ ಕಾರ್ಡ್ ಜಾರಿಮಾಡಬಹುದು. ಈ ಮೂಲಕ ಎರಡೂ ದೇಶಗಳ ಜನರು ತಮ್ಮ ದೇಶಗಳಲ್ಲಿ ಮತ್ತು ತಮ್ಮ ಸ್ವಂತದ ಸ್ಥಳಗಳಲ್ಲಿ ಈ ಕಾರ್ಡ್ ಮೂಲಕ ಲಭ್ಯವಿರುವ ಸೇವೆಗಳನ್ನು ಪಡೆಯಬಹುದು.