ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಭಾರತೀಯ ವಂಶದ ಮೊಟ್ಟಮೊದಲ ಸಂಸದ ವರುಣ ಘೋಷ !

ಭಗವದ್ಗೀತೆಯ ಮೇಲೆ ಕೈ ಇಟ್ಟು ಪ್ರಮಾಣವಚನ ಸ್ವೀಕಾರ !

ಕೇನಬೆರಾ (ಆಸ್ಟ್ರೇಲಿಯಾ) – ಭಾರತೀಯ ವಂಶದ ವರುಣ ಘೋಷ ರವರು ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಒಂದು ಹೊಸ ವಿಕ್ರಮವನ್ನು ಸ್ಥಾಪಿಸಿದ್ದಾರೆ. ಘೋಷ ರವರು ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಭಾರತೀಯ ವಂಶದ ಮೊಟ್ಟಮೊದಲ ಸಂಸದರಾಗಿದ್ದಾರೆ. ಆಯ್ಕೆಯಾದ ನಂತರ ಅವರು ಭಗವದ್ಗೀತೆಯ ಮೇಲೆ ಕೈ ಇಟ್ಟು ಪ್ರಮಾಣವಚನ ಸ್ವೀಕರಿಸಿದರು.

(ಸೌಜನ್ಯ – The Economic Times)

ಆಸ್ಟ್ರೇಲಿಯಾದ ಪ್ರಧಾನಮಂತ್ರಿಗಳು ಏನು ಹೇಳಿದರು ?

ಆಸ್ಟ್ರೇಲಿಯಾದ ಪ್ರಧಾನಮಂತ್ರಿಗಳಾದ ಅಂಥನಿ ಅಲಬಾನೀಜ ರವರು ಮಾತನಾಡುತ್ತ, ಹೊಸ ಸಿನೆಟರ (ಸಂಸದರು) ವರುಣ ಘೋಷ ರವರಿಗೆ ಸ್ವಾಗತ. ನೀವು ನಮ್ಮ ಸಮೂಹದ ಭಾಗವಾಗಿರುವುದರಿಂದ ನನಗೆ ಬಹಳ ಆನಂದವಾಗಿದೆ ಎಂದು ಹೇಳಿದರು.

ಘೋಷರವರ ಸಂದರ್ಭದಲ್ಲಿ ಆಸ್ಟ್ರೇಲಿಯಾದ ವಿದೇಶಮಂತ್ರಿಗಳಾದ ಪೆನೀ ವಾಗ ರವರು ಮಾತನಾಡುತ್ತ, ನೀವು ಈಗ ಲೆಬರ ಪಕ್ಷದ ಸಂಸದ ಸಮೂಹದ ಭಾಗವಾಗಿರುವಿರಿ, ಇದು ಅತ್ಯಂತ ವಿಶೇಷವಾಗಿದೆ. ನನಗೆ ಸಿನೆಟರ ವರುಣ ಘೋಷ ರವರು ತಮ್ಮ ಸಮುದಾಯದ ಹಾಗೂ ಪಶ್ಚಿಮ ಆಸ್ಟ್ರೇಲಿಯಾದಲ್ಲಿನ ಜನರ ಧ್ವನಿಯಾಗುವರು ಎಂಬ ವಿಶ್ವಾಸವಿದೆ, ಎಂದು ಹೇಳಿದರು.

ಸಾಂಸದರಾಗಿ ಆಯ್ಕೆಯಾದ ನಂತರ ವರುಣ ಘೋಷರವರ ಮೊದಲ ಪ್ರತಿಕ್ರಿಯೆ !

ನನಗೆ ಉತ್ತಮ ಶಿಕ್ಷಣ ಪಡೆಯುವ ಭಾಗ್ಯ ಲಭಿಸಿತು. ಉಚ್ಚ ಮಟ್ಟದ ಶಿಕ್ಷಣ ಹಾಗೂ ತರಬೇತಿ ಪ್ರತಿಯೊಬ್ಬರಿಗೂ ದೊರೆಯಬೇಕು ಎಂಬುದು ನನ್ನ ದೃಢ ವಿಶ್ವಾಸವಾಗಿದೆ.

ಯಾರು ಈ ವರುಣ ಘೋಷ ?

38 ವರ್ಷದ ವರುಣ ಘೋಷ ರವರು ಪರ್ಥನಲ್ಲಿ ಕಾರ್ಯನಿರತರಾಗಿದ್ದು ವೃತ್ತಿಯಲ್ಲಿ ನ್ಯಾಯವಾದಿಯಾಗಿದ್ದಾರೆ. ಅವರು `ಯುನಿವರ್ಸಿಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯಾ’ದಲ್ಲಿ ಕಲೆ ಹಾಗೂ ಕಾನೂನಿನ ಪದವಿ ಪಡೆದರು. ಅವರು ಅಮೇರಿಕಾದಲ್ಲಿ ನ್ಯೂಯಾರ್ಕ್ ಹಾಗೂ ವಾಷಿಂಗ್ಟನನಲ್ಲಿ ಅನುಕ್ರಮವಾಗಿ ವಕೀಲ ವೃತ್ತಿ ಹಾಗೂ ಜಾಗತಿಕ ಬ್ಯಾಂಕುಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಅವರು 17 ನೇ ವಯಸ್ಸಿನಲ್ಲಿ ತಮ್ಮ ಕುಟುಂಬದವರೊಂದಿಗೆ ಆಸ್ಟ್ರೇಲಿಯಾಗೆ ಬಂದರು.