ವ್ಯಾಪಾರ ಜಗತ್ತಿನ ಬಂಡವಾಳ ಹೂಡಿಕೆಯಲ್ಲಿ ‘ಭಾರತ’ ಮೊದಲ ಸ್ಥಾನ !

ನವ ದೆಹಲಿ – ಕಳೆದ ಎರಡು ದಶಕಗಳಲ್ಲಿ ಚೀನಾದ ಆರ್ಥಿಕತೆಯು ರಾಕೆಟ್ ವೇಗದಲ್ಲಿ ಬೆಳೆದಿದೆ. ಈ ಅವಧಿಯಲ್ಲಿ, ಪ್ರಪಂಚದಾದ್ಯಂತ ಹೂಡಿಕೆದಾರರು ಅಲ್ಲಿ ಸಾಕಷ್ಟು ಹಣವನ್ನು ಹೂಡಿಕೆ ಮಾಡಿದ್ದರೂ ಈಗ ಪರಿಸ್ಥಿತಿ ಬದಲಾಗಿದ್ದು, ಚೀನಾದ ಅರ್ಥವ್ಯವಸ್ಥೆ ಹೆಣಗಾಡುತ್ತಿದೆ ಹಾಗೂ ಭಾರತದ ಆರ್ಥಿಕತೆಗೆ ಒಳ್ಳೆಯ ದಿನಗಳು ಬಂದಿದೆ. ಅನೇಕ ಜಾಗತಿಕ ಕಂಪನಿಗಳನುಸಾರ ಇಂದು ಭಾರತವು ವ್ಯಾಪಾರ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ.

1. ‘ಗೋಲ್ಡ್‌ಮನ್ ಸ್ಯಾಕ್ಸ’ ಮತ್ತು ‘ಮಾರ್ಗಾನ್ ಸ್ಟಾನ್ಲಿ’ ಈ ವಿಶ್ವ ಬ್ಯಾಂಕ್‌ಗಳು ಭಾರತವನ್ನು ‘ಮುಂದಿನ ದಶಕದಲ್ಲಿ ಹೂಡಿಕೆದಾರರಿಗೆ ಭಾರತವೇ ಅಗ್ರಸ್ಥಾನ!’ ಎಂದು ವರ್ಣಿಸಿವೆ.

2. ಇಂಗ್ಲೆಂಡಿನ ಕಂಪನಿ ‘ಮಾರ್ಷಲ್ ವೇಸ್’ ಪ್ರಕಾರ, ಅಮೇರಿಕದ ನಂತರ ಭಾರತವು ಅತಿದೊಡ್ಡ `ಹೇಜ ಫಂಡ್‘ ಆಗಿದೆ. ‘ಹೆಜ ಫಂಡ್’ ಎಂದರೆ ಅತ್ಯಾಧುನಿಕ ತಂತ್ರಜ್ಞಾನದ ಆಧಾರದ ಮೇಲೆ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಹಣ. ಭಾರತದ ಬಲಿಷ್ಠ ಬೆಳವಣಿಗೆ ಮತ್ತು ರಾಜಕೀಯ ಸ್ಥಿರತೆಯೇ ಹೂಡಿಕೆದಾರರು ಭಾರತದತ್ತ ಮುಖ ಮಾಡಲು ಕಾರಣ. ಇದಕ್ಕೆ ಉದಾಹರಣೆಯೆಂದರೆ, ‘ಐಫೋನ್’ನ ಒಟ್ಟು ಜಾಗತಿಕ ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡಾ 7 ರಷ್ಟಿದೆ.

ಪಾಶ್ಚಿಮಾತ್ಯ ದೇಶಗಳು ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಅಂತರ !

‘ಬ್ಲೂಮ್‌ಬರ್ಗ್’ ವರದಿಯ ಪ್ರಕಾರ, ಭಾರತವು ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ಮತ್ತೊಂದೆಡೆ, ಚೀನಾದ ಆರ್ಥಿಕತೆಯು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರೊಂದಿಗೆ ಪಾಶ್ಚಿಮಾತ್ಯ ದೇಶಗಳೊಂದಿಗೆ ಚೀನಾದ ನಡುವಿನ ಅಂತರ ಹೆಚ್ಚುತ್ತಿದೆ.

ಸಿಂಗಾಪುರದ ‘ಎಂ & ಜಿ ಇನ್ವೆಸ್ಟ್‌ಮೆಂಟ್‌’ನ ಹಿರಿಯ ಅಧಿಕಾರಿ ವಿಕಾಸ ಪ್ರಸಾದ ಮಾತನಾಡಿ, ಅನೇಕ ಕಾರಣಗಳಿಂದ ಜನರು ಭಾರತದತ್ತ ಆಸಕ್ತಿ ಹೊಂದಿದ್ದಾರೆ. ಇದರ ಒಂದು ಕಾರಣವೆಂದರೆ ಅದು ಭಾರತ-ಚೀನಾ ಅಲ್ಲ. ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ. ಕಳೆದ ಎರಡು ದಶಕಗಳಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) 500 ಅಬ್ಜ ಡಾಲರ್‌ಗಳಿಂದ ಮೂರೂವರೆ ಸಾವಿರ ಅಬ್ಜ ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ.
ಭಾರತದೆಡೆಗೆ ಬಂಡವಾಳ ಹೂಡಿಕೆದಾರರ ಆಕರ್ಷಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ‘ಮೋರ್ಗನ್ ಸ್ಟಾನ್ಲಿ’ ಪ್ರಕಾರ, 2030 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಲಿದೆ.

ಹೂಡಿಕೆದಾರರ ಅಧ್ಯಯನಕಾರರ ಅಭಿಪ್ರಾಯ!

ಭಾರತದಲ್ಲಿ ಹೂಡಿಕೆ ಮಾಡುವುದನ್ನು ಬೆಂಬಲಿಸುವ ಹೇಳಿಕೆಯಂತೆ, ಇಲ್ಲಿ ಬೆಳವಣಿಗೆಗೆ ಅಪಾರ ಸಾಮರ್ಥ್ಯವಿದೆ ದೇಶದ ತಲಾ ಆದಾಯ ಇನ್ನೂ ಕಡಿಮೆಯಿದ್ದರೂ, ಭಾರತವು ಅನೇಕ ವರ್ಷಗಳ ವಿಸ್ತಾರದ ಅಡಿಪಾಯವನ್ನು ಹಾಕಿದೆ. ರೂಪಾಯಿಯ ಜಾಗತೀಕರಣ ಮಾಡುವ ಪ್ರಯತ್ನ ಪ್ರಾರಂಭವಾಗಿದೆ. ಕೋಟಿಗಟ್ಟಲೆ ಜನರು `ಜನ ಧನ ಖಾತೆ’ ತೆರೆದಿದ್ದಾರೆ. ಇದರಿಂದ ಭಾರತದಲ್ಲಿ ಜಗತ್ತಿನಾದ್ಯಂತ ಹೂಡಿಕೆದಾರರ ಆಸಕ್ತಿಯನ್ನು ಹೆಚ್ಚಿಸಿದೆ. ದೇಶದಲ್ಲಿ ಮೂಲಭೂತಸೌಕರ್ಯ ಅಭಿವೃದ್ಧಿಗೆ ಸರಕಾರ ಸಾಕಷ್ಟು ಹಣ ವ್ಯಯಿಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಭಾಜಪ ಪುನಃ ಗೆಲ್ಲುವ ನಿರೀಕ್ಷೆ ಇದೆ. ಇದು ಭವಿಷ್ಯದಲ್ಲಿ ದೇಶದಲ್ಲಿ ಸುಧಾರಣೆಗೆ ಹೆಚ್ಚಿನ ಉತ್ತೇಜನ ನೀಡಲಿದೆ ಎಂದು ಹೇಳಿದರು.