ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ ಇವರ ದಕ್ಷಿಣ ಭಾರತವನ್ನು ಸ್ವತಂತ್ರ ದೇಶ ಎಂದು ಘೋಷಿಸುವ ಹೇಳಿಕೆ ಪ್ರಕರಣ
ಬೆಂಗಳೂರು – ನಮ್ಮ ಭಾರತ ಭವ್ಯ ಭಾರತವಾಗಿದೆ. ಯಾರೂ ಅದನ್ನು ವಿಭಜಿಸುವ ವಿಷಯವನ್ನು ಹೇಳಬಾರದು. ಈ ದೇಶವನ್ನು ಒಟ್ಟಿಗೆ ಇಡಲು ಸಾವಿರಾರು ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ನೂರಾರು ವರ್ಷಗಳಿಂದ ಹೋರಾಟ ಮಾಡಿದ್ದಾರೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರು ದೇಶವನ್ನು ಸ್ವತಂತ್ರವಾಗಿ ಮತ್ತು ಅಖಂಡವಾಗಿ ಉಳಿಯಬೇಕೆಂದು ಹೋರಾಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ದೇಶದ ಏಕತೆಗಾಗಿ ಮಾತನಾಡಬೇಕು. ಅದನ್ನು ಬಿಟ್ಟು ವಿಭಜನೆಯ ಭಾಷೆ ಮಾತನಾಡುವುದು ಯೋಗ್ಯವಲ್ಲ. ಸಂಸದ ಡಿ.ಕೆ. ಸುರೇಶ ಅವರು ಯಾವ ಅರ್ಥದಲ್ಲಿ ಹೀಗೆ ಹೇಳಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಗೃಹ ಸಚಿವರು ಮತ್ತು ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ಸಿನ ಸಂಸದ ಡಿ.ಕೆ. ಸುರೇಶ ಇವರು ದಕ್ಷಿಣ ಭಾರತವನ್ನು ಭಾರತದಿಂದ ಪ್ರತ್ಯೇಕಗೊಳಿಸುವ ದೇಶದ್ರೋಹಿ ಹೇಳಿಕೆಯನ್ನು ನೀಡಿದ್ದರು. ಅದಕ್ಕೆ ಪರಮೇಶ್ವರ ಮೇಲಿನಂತೆ ಹೇಳಿಕೆ ನೀಡಿದರು.
ಪರಮೇಶ್ವರ ತಮ್ಮ ಮಾನತನು ಮುಂದುವರಿಸಿ, ಪಾಕಿಸ್ತಾನ ವಿಭಜನೆಯಾದಾಗ ನಾವು ಯಾರೂ ಹುಟ್ಟಿರಲಿಲ್ಲ; ಆದರೆ ಅದರ ಇತಿಹಾಸ ನಮಗೆ ತಿಳಿದಿದೆ. ನಮ್ಮ ದೇಶ ‘ಒಂದು ರಾಷ್ಟ್ರ, ಒಂದು ದೇಶ’ ಆಗಿಯೇ ಉಳಿಯಬೇಕು ಎಂದು ಹೇಳಿದರು.