೬೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ !
ಹರದಾ (ಮಧ್ಯಪ್ರ ದೇಶ) – ಇಲ್ಲಿ ಆಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ೮ ಜನರು ಸಾವನ್ನಪ್ಪಿದ್ದು ೬೦ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಕಾರ್ಖಾನೆಯೊಂದಿಗೆ ಅಕ್ಕಪಕ್ಕದ ಮನೆಗಳಿಗೂ ಬೆಂಕಿ ತಗುಲಿದೆ. ಬೆಂಕಿಯ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಆಡಳಿತದಿಂದ ಪರಿಹಾರ ಕಾರ್ಯ ಆರಂಭವಾಗಿದ್ದು ಇಲ್ಲಿನ ೧೦೦ಕ್ಕೂ ಹೆಚ್ಚಿನ ಮನೆಗಳನ್ನು ಖಾಲಿಮಾಡಿಸಲಾಗಿದೆ. ಈ ಕಾರ್ಖಾನೆಯಲ್ಲಿ ಸಾವಿರಾರು ಟನ್‌ಗಳಷ್ಟು ಮದ್ದುಗುಂಡನ್ನು ಶೇಖರಿಸಿದ್ದರಿಂದ ಬಹಳ ಸಮಯದ ವರೆಗೆ ಲಘು ಸ್ಫೋಟಗಳು ನಡೆಯುತ್ತಿದ್ದವು. ಆದುದರಿಂದ ಬೆಂಕಿಯನ್ನು ಹತೋಟಿಗೆ ತರಲು ಹಲವು ಗಂಟೆಗಳು ತಗುಲಿದವು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಡಾ. ಮೋಹನ ಯಾದವರವರು ತಕ್ಷಣ ಪರಿಹಾರ ಕಾರ್ಯಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಈ ಕಾರ್ಖಾನೆಯು ಇಲ್ಲಿನ ಮಗರಧಾ ಮಾರ್ಗದ ಬೈರಾಗಢ ಗ್ರಾಮದಲ್ಲಿದೆ. ಪೆಬ್ರುವರಿ ೬ ರ ಬೆಳಗ್ಗೆ ೧೧ ಗಂಟೆ ಸುಮಾರಿಗೆ ಕಾರ್ಖಾನೆಯಲ್ಲಿ ಸ್ಫೋಟವಾಗಿದೆ.ಇದರ ಶಬ್ಧ ೨೦ ಕಿ.ಮೀ.ವರೆಗೂ ಕೇಳಿಸಿತ್ತು.
ಸಂಪಾದಕೀಯ ನಿಲುವುರಾಜ್ಯದಲ್ಲಿ ಪಟಾಕಿಗಳ ಆಕ್ರಮ ಕಾರ್ಖಾನೆಗಳು ನಡೆಯುತ್ತಿರುವ ಮಾಹಿತಿ ಆಡಳಿತ ಮತ್ತು ಪೋಲೀಸರಿಗೆ ತಿಳಿದಿಲ್ಲ, ಎಂದು ಹೇಗೆ ಹೇಳುವುದು? ಅಂದರೆ ಭ್ರಷ್ಟಾಚಾರದಿಂದಾಗಿಯೇ ಇಂತಹ ಕಾರ್ಖಾನೆಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ, ಎಂಬುದು ಸ್ಪಷ್ಟವಾಗಿದೆ. ಸರಕಾರವು ಈಗಲಾದರೂ ಇದರ ಮೇಲೆ ಕ್ರಮ ಕೈಗೊಳ್ಳುವುದೇ? |