‘ಧಾರ್ಮಿಕ ಪೂಜಾ ಸ್ಥಳಗಳ ಕಾಯಿದೆ 1991’ ರದ್ದುಗೊಳಿಸಿ ! – ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಆಗ್ರಹ

ನವ ದೆಹಲಿ – ಬಿಜೆಪಿ ಸಂಸದ ಹರನಾಥ್ ಸಿಂಗ್ ಯಾದವ್ ಇವರು ಫೆಬ್ರವರಿ 5 ರಂದು ರಾಜ್ಯಸಭೆಯಲ್ಲಿ ಪೂಜಾ ಸ್ಥಳಗಳ ಕಾಯ್ದೆ 1991 ಅನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.

(ಸೌಜನ್ಯ – NEWS9 Live)

ಸಂಸದ ಹರನಾಥ್ ಸಿಂಗ್ ಯಾದವ್ ಇವರು,

1. ಈ ಕಾಯಿದೆಯು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಮಾನತೆ ಮತ್ತು ಜಾತ್ಯತೀತತೆಯ ತತ್ವಗಳನ್ನು ಉಲ್ಲಂಘಿಸುತ್ತದೆ, ಇದು ಸಂವಿಧಾನದ ಪೀಠಿಕೆ ಮತ್ತು ಅದರ ಮೂಲ ರಚನೆಯ ಅವಿಭಾಜ್ಯ ಅಂಗವಾಗಿದೆ.

2. ಈ ಕಾಯಿದೆಯು ಸಂವಿಧಾನದ ಮೂಲಭೂತ ಲಕ್ಷಣವಾದ ನ್ಯಾಯಾಂಗ ಪರಿಶೀಲನೆಯನ್ನು ನಿಷೇಧಿಸುತ್ತದೆ. ಈ ಕಾಯಿದೆಯು ಬೌದ್ಧರು, ಜೈನರು, ಸಿಖ್ಖರು ಮತ್ತು ಹಿಂದೂಗಳ ಧಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ ಮತ್ತು ಭಗವಾನ್ ರಾಮ ಮತ್ತು ಭಗವಾನ್ ಕೃಷ್ಣನ ನಡುವೆ ತಾರತಮ್ಯವನ್ನು ಉಂಟುಮಾಡುತ್ತದೆ.

3. ಸ್ವಾತಂತ್ರ್ಯಾನಂತರ ಬಹುಕಾಲ ಅಧಿಕಾರದಲ್ಲಿದ್ದವರಿಗೆ ಪೂಜಾಸ್ಥಳಗಳ ಮಹತ್ವ ಅರಿವಾಗಿರಲಿಲ್ಲ. ಈ ಜನರು ತಮ್ಮ ರಾಜಕೀಯ ಲಾಭಕ್ಕಾಗಿ ತಮ್ಮದೇ ಸಂಸ್ಕೃತಿಯ ಬಗ್ಗೆ ನಾಚಿಕೆಪಡುವ ಪ್ರವೃತ್ತಿಯನ್ನು ಬೆಳೆಸಿಕೊಂಡರು.

4. ವಿದೇಶಿ ಆಕ್ರಮಣಕಾರರು ಕತ್ತಿಯ ಬಲದಿಂದ ಜ್ಞಾನವಾಪಿ ಮತ್ತು ಶ್ರೀಕೃಷ್ಣ ಜನ್ಮಭೂಮಿ ಸೇರಿದಂತೆ ಇತರ ಧಾರ್ಮಿಕ ಸ್ಥಳಗಳನ್ನು ವಶಪಡಿಸಿದ್ದನ್ನು ಸರಕಾರವು ಕಾನೂನುಬದ್ಧವಾಗಿ ಬೆಂಬಲಿಸಿತು. ಒಂದೇ ಕಾಯಿದೆ ಮತ್ತು ಒಂದೇ ಪರಿಸ್ಥಿತಿಗೆ 2 ಕಾನೂನುಗಳು ಇರುವಂತಿಲ್ಲ. ಈ ಕಾನೂನು ಸಂಪೂರ್ಣವಾಗಿ ಅಸಾಂವಿಧಾನಿಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಹಿತದೃಷ್ಟಿಯಿಂದ ಈ ಕಾನೂನು ಜಾರಿಯಾಗಬೇಕು.

‘ಧಾರ್ಮಿಕ ಪೂಜಾ ಸ್ಥಳ ಕಾಯಿದೆ 1991’ ಎಂದರೇನು?

‘ಧಾರ್ಮಿಕ ಸ್ಥಳಗಳು ಸ್ವಾತಂತ್ರ್ಯದ ಮೊದಲು ಅಂದರೆ ಅಗಸ್ಟ್ 15, 1947 ರಂದು ಇದ್ದಂತೆಯೇ ಇತ್ತು, ಅಂದರೆ ಯಾವುದೇ ರೀತಿಯಲ್ಲಿ ಹಾಳು ಮಾಡಬಾರದು’; ಎಂದು ‘ಧಾರ್ಮಿಕ ಪೂಜಾ ಸ್ಥಳ ಕಾಯಿದೆ 1991’ ಸ್ಪಷ್ಟವಾಗಿ ಹೇಳಿದೆ; ಆದರೆ ಶ್ರೀರಾಮ ಜನ್ಮಭೂಮಿ ಪ್ರಕರಣವನ್ನು ಅಪವಾದವೆಂದು ಪರಿಗಣಿಸಲಾಗಿದೆ.

ಸಂಪಾದಕೀಯ ನಿಲುವು

ಈ ಕಾನೂನನ್ನು ರದ್ದುಪಡಿಸಲು ಕೇಂದ್ರ ಸರಕಾರ ಮುಂದಾಗಬೇಕು ಮತ್ತು ಮತಾಂಧರ ಹಿಡಿತದಲ್ಲಿರುವ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಮುಕ್ತಗೊಳಿಸಲು ಮುಂದಾಗಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !