ಕೇರಳದ ಯುವ ಸಮಾವೇಶದಲ್ಲಿ ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಗೆ ಅಲ್ಪ ಪ್ರತಿಕ್ರಿಯೆ !

ಆಕ್ರೋಶಗೊಂಡ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿಯವರು ಮಹಿಳೆಯೊಬ್ಬಳನ್ನು ಹೊರ ದಬ್ಬಿದರು !

ಕೋಳಿಕೋಡ್ (ಕೇರಳ) – ಇಲ್ಲಿ ನಡೆದ ಯುವ ಸಮಾವೇಶದಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ’ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆ ನೀಡಿದಾಗ ಅದಕ್ಕೆ ಕಡಿಮೆ ಪ್ರಮಾಣದಲ್ಲಿ ಪ್ರತಿಕ್ರಿಯೆ ನೀಡಿರುವುದು ವರದಿಯಾಗಿದೆ. ಆಕ್ರೋಶಗೊಂಡ ಮೀನಾಕ್ಷಿ ಲೇಖಿಯವರು ಮಹಿಳೆಯೊಬ್ಬರನ್ನು ಘೋಷಣೆ ನೀಡುವಂತೆ ಹೇಳಿದರು; ಆದರೆ ಆಕೆ ನಿರಾಕರಿಸಿದಾಗ ಮಹಿಳೆಯನ್ನು ಸಭಾಂಗಣದಿಂದ ಹೊರಹೋಗುವಂತೆ ಹೇಳಿದರು.

೧. ಮೀನಾಕ್ಷಿ ಲೇಖಿ ಯುವ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ಅಂತಿಮವಾಗಿ ’ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ನೀಡಿದರು; ಆದರೆ ಅದರಲ್ಲಿ ಭಾಗವಹಿಸಿದವರು ಕಡಿಮೆ ಪ್ರತಿಕ್ರಿಯೆಯನ್ನು ನೀಡಿದರು. ಹಾಗಾಗಿ ಅವರು ನೇರವಾಗಿ ’ಭಾರತ ನಿಮ್ಮ ಮನೆ ಅಲ್ಲವೇ? ಭಾರತವು ನನ್ನ ತಾಯಿ ಮಾತ್ರವೇ ? ಅಥವಾ ನಿಮ್ಮದು ಕೂಡ ? ಏನಾದರೂ ತೊಂದರೆ ಇದೆಯೇ ? ಎಂದು ಕೇಳಿದರು.

೨. ಇದರ ನಂತರ ಮೀನಾಕ್ಷಿ ಲೇಖಿ ಮತ್ತೊಮ್ಮೆ ’ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ನೀಡಿದರು; ಆದರೆ ಆಗಲೂ ಕಡಿಮೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆ ವೇಳೆ ಮಹಿಳೆಯೊಬ್ಬರನ್ನು ಉದ್ದೇಶಿಸಿ, ’ಹಳದಿ ಸೀರೆ ಉಟ್ಟ ಮಹಿಳೆ ನಿಲ್ಲಬೇಕು. ನಾನು ನೇರವಾಗಿ ಕೇಳುತ್ತೇನೆ, ‘ಭಾರತ ನಿಮ್ಮ ತಾಯಿಯಲ್ಲವೇ?’ ನೀವು ಯಾಕೆ ಹೀಗೆ ವರ್ತಿಸುತ್ತಿದ್ದೀರಿ ?

೩. ಈ ಪ್ರಶ್ನೆಯ ನಂತರವೂ ’ಭಾರತ್ ಮಾತಾ ಕಿ ಜೈ’ ಎಂದು ಘೋಷಿಸಲು ನಿರಾಕರಿಸಿದರು. ಆದ್ದರಿಂದ ಆಕ್ರೋಶಗೊಂಡ ಮೀನಾಕ್ಷಿ ಲೇಖಿಯವರು, ನೀವು ಇಲ್ಲಿಂದ ಹೋಗಬೇಕು, ಯಾರಿಗೆ ದೇಶದ ಬಗ್ಗೆ ಅಭಿಮಾನವಿಲ್ಲವೋ, ಭಾರತದ ಬಗ್ಗೆ ಮಾತನಾಡಲು ನಾಚಿಕೆಪಡುವರೋ ಅವರು ಯುವ ಸಮಾವೇಶದಲ್ಲಿ ಭಾಗವಹಿಸುವ ಅಗತ್ಯವಿಲ್ಲ. ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇರಳದ ಈ ಘಟನೆಯಿಂದ ಅಲ್ಲಿನ ಜನರ ಮನಸ್ಥಿತಿಯ ಗಮನಕ್ಕೆ ಬರುತ್ತದೆ ! ಈ ಮನಸ್ಥಿತಿಯನ್ನು ಬದಲಾಯಿಸಲು ಸಮರೋಪಾದಿಯಲ್ಲಿ ಪ್ರಯತ್ನಗಳು ನಡೆಯಬೇಕು, ಇಲ್ಲದಿದ್ದರೆ ನಾಳೆ ಕೇರಳ ಕಾಶ್ಮೀರವಾದರೂ ಆಶ್ಚರ್ಯಪಡಬೇಕೆಂದಿಲ್ಲ !