ಕಡಲ್ಗಳ್ಳರನ್ನು ಸಹಿಸಿಕೊಳ್ಳಲಾಗುವುದಿಲ್ಲ ! – ರಕ್ಷಣಾ ಸಚಿವ ರಾಜನಾಥ ಸಿಂಗ

‘ಐ.ಎನ್.ಎಸ್. ‘ಸಂಧ್ಯಾಕ’ ಕಾರ್ಯನಿರ್ವಹಿಸುತ್ತಿದೆ

ವಿಶಾಖಪಟ್ಟಣಂ (ಆಂಧ್ರಪ್ರದೇಶ) – ಭಾರತೀಯ ನೌಕಾಪಡೆಯು ಎಷ್ಟು ಬಲಿಷ್ಠವಾಗಿದೆ ಎಂದರೆ, ನಾವು ಹಿಂದೂ ಮಹಾಸಾಗರ ಮತ್ತು ಹಿಂದೂ – ಪ್ರಶಾಂತ ಸಾಗರ ವಲಯದಲ್ಲಿ ಭದ್ರತೆಯ ವಿಷಯದಲ್ಲಿ ಮೊದಲ ಸ್ಥಾನವನ್ನು ತಲುಪಿದ್ದೇವೆ. ಹಿಂದೂ ಮಹಾಸಾಗರದಲ್ಲಿ ಎಡನ ಕೊಲ್ಲಿ ಮತ್ತು ಗಿನಿ ಕೊಲ್ಲಿ ಇದೆ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ನಡೆಯುತ್ತದೆ. ಈ ಸ್ಥಳದಲ್ಲಿನ ಅತಿ ದೊಡ್ಡ ಅಪಾಯವೆಂದರೆ ಕಡಲ್ಗಳ್ಳರು. ಇಲ್ಲಿಯವರೆಗೆ 80 ಜನರನ್ನು ಕಡಲ್ಗಳ್ಳರಿಂದ ಬಿಡುಗಡೆಗೊಳಿಸಿದ್ದಾರೆ. `ಈ ಕಡಲ್ಗಳ್ಳರನ್ನು ಸಹಿಸಿಕೊಳ್ಳಲಾಗುವುದಿಲ್ಲ’, ಇದು ಭಾರತದ ಸಂಕಲ್ಪವಾಗಿದೆಯೆಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಹೇಳಿದರು. ಇಲ್ಲಿ ಭಾರತೀಯ ನೌಕಾದಳದ ಹೊಸ ಯುದ್ಧನೌಕೆ `ಐ.ಎನ್.ಎಸ್. ಸಂಧ್ಯಾಕ’ ಕಾರ್ಯಾಚರಣೆ ನಡೆಸಲು ಪ್ರಾರಂಭಿಸಿರುವ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು, ಈ ಸಮಯದಲ್ಲಿ ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ ಉಪಸ್ಥಿತರಿದ್ದರು.

‘ಐ.ಎನ್.ಎಸ್. ಸಂಧ್ಯಾಕ’ ಹೇಗಿದೆ ?

`ಐ.ಎನ್.ಎಸ್. ಸಂಧ್ಯಾಕ’ ಈ ಯುದ್ಧನೌಕೆಯನ್ನು ವಿಶೇಷವಾಗಿ ಕಾವಲು ಕಾಯಲು ಬಳಸಲಾಗುವ ಯುದ್ಧ ನೌಕೆಯಾಗಿದೆ. ‘ಸಂಧ್ಯಾಕ್’. 11 ಸಾವಿರ ಕಿಲೋಮೀಟರ್ ಅಂತರದ ವರೆಗೆ ಕಾವಲು ಕಾಯುತ್ತದೆ. ಇದರ ಮೇಲೆ ಬೋಫೋರ್ಸ್ ತೋಪುಗಳನ್ನು ಜೋಡಿಸಲಾಗಿದೆ. ಹಾಗೆಯೇ ಆವಶ್ಯಕತೆಯೆನಿಸಿದರೆ, ಚೇತಕ ಹೆಲಿಕಾಪ್ಟರ ಕೂಡ ನಿಲ್ಲಿಸಬಹುದು. ಈ ಯುದ್ಧನೌಕೆಯು`ಮೆಸರ್ಸ ಗಾರ್ಡನ ರೀಚ ಶಿಪಬಿಲ್ಡರ್ಸ ಅಂಡ ಇಂಜಿನಿಯರ್ಸ’ ಕೋಲಕಾತಾ ಈ ಕಂಪನಿಯು ನಿರ್ಮಿಸಿದೆ. ಭಾರತೀಯ ನೌಕಾದಳಕ್ಕೆ ಇಂತಹ 4 ಯುದ್ಧನೌಕೆಗಳು ನಿರ್ಮಿಸಲಿದ್ದಾರೆ. ಅದರಲ್ಲಿಯ ಮೊದಲ ಯುದ್ಧನೌಕೆ ಇದಾಗಿದೆ.