ಕರ್ತವ್ಯ ಲೋಪ ಎಸಗಿದ 2 ಪೊಲೀಸ್ ಪೇದೆಗಳ ಅಮಾನತು !

ಕ್ರೂರಿ ಟಿಪ್ಪು ಸುಲ್ತಾನ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ ಪ್ರಕರಣ

ರಾಯಚೂರು – ಜಿಲ್ಲೆಯ ಮಾನ್ವಿ ತಾಲೂಕಿನ ಸಿರವಾರದಲ್ಲಿ ಅಪರಿಚಿತ ವ್ಯಕ್ತಿಗಳು ಟಿಪ್ಪು ಸುಲ್ತಾನ್ ಪ್ರತಿಮೆಗೆ ಚಪ್ಪಿ ಹಾರ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪವೆಸಗಿ 2 ಪೊಲೀಸ್ ಪೇದೆಗಳನ್ನು ಬಂಧಿಸಲಾಗಿದೆ. ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಸಿರವಾರ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಇಸ್ಮಾಯಿಲ್ ಮತ್ತು ರೇವಣಸಿದ್ದ ಅವರು ರಾತ್ರಿ ಕರ್ತವ್ಯದಲ್ಲಿದ್ದರು. ನಿರ್ಲಕ್ಷ ತೋರಿದಕ್ಕೆ ಅವರನ್ನು ಬಂಧಿಸಲಾಗಿದೆ.

1. ಸಿರವಾರದ ಮಟನ್ ಬಜಾರ್ ಪ್ರದೇಶದ ಟಿಪ್ಪು ವೃತ್ತದಲ್ಲಿ ಟಿಪ್ಪು ಸುಲ್ತಾನ್ ಪೋಸ್ಟರ್‍‌ ಹಾಕಲಾಗಿತ್ತು. ರಾತ್ರಿಯಲ್ಲಿ ಯಾರೋ ಅಪರಿಚಿತರು ಪ್ರತಿಮೆಗೆ ಚಪ್ಪಲಿ ಹಾರ ಹಾಕಿದರು. ಇದನ್ನು ಕಂಡ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. (ನಿಜವೆಂದರೆ ಹಿಂದೂಗಳ ಹತ್ಯೆ ಮಾಡಿದ ಟಿಪ್ಪು ಸುಲ್ತಾನನ ಚಿತ್ರವನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)

2. ‘ಸಮಾಜಕಟಕರನ್ನು ಕೂಡಲೇ ಬಂಧಿಸಬೇಕು; ಅದಕ್ಕಾಗಿ ಮುಸ್ಲಿಮರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಸಿರವಾರ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿಭಟನಾಕಾರರು ರಸ್ತೆ ಮಧ್ಯದಲ್ಲಿಯೇ ಕುಳಿತು ಸಂಚಾರ ತಡೆ ನಡೆಸಿದರು. ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

3. ತಕ್ಷಣ ಧಾವಿಸಿದ ಪೊಲೀಸರು, ‘24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಮುಸ್ಲಿಮರಿಗೆ ಭರವಸೆ ನೀಡಿದರು. (ಹಿಂದೂಗಳ ವಿಷಯದಲ್ಲಿ ಪೊಲೀಸರು ಇಷ್ಟು ಮುತುವರ್ಜಿ ವಹಿಸಿದರೆ, ಕರ್ನಾಟಕವು ಮತಾಂಧರನ್ನು ಹದ್ದುಬಸ್ತಿನಲ್ಲಿಡಬಹುದು ! – ಸಂಪಾದಕರು)

4. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ನೋಡಿ 3 ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಆಕಾಶ್ ಎಂಬ ಯುವಕ ತಪ್ಪೊಪ್ಪಿಕೊಂಡಿದ್ದಾನೆ.