ಅಖಿಲ ಭಾರತ ಹಿಂದೂ ಮಹಾಸಭಾದಿಂದ ಪ್ರಶ್ನೆ !
(ಉರುಸ್ ಎಂದರೆ ಮುಸ್ಲಿಮರ ಹಬ್ಬ)
ಆಗ್ರಾ (ಉತ್ತರ ಪ್ರದೇಶ) – ಇಲ್ಲಿನ ತಾಜ್ ಮಹಲ್‌ನಲ್ಲಿ ಪ್ರತಿ ವರ್ಷ ಫೆಬ್ರವರಿ 6 ರಿಂದ 8 ರವರೆಗೆ ನಡೆಯುವ ಉರುಸಗೆ ಯಾವುದೇ ಐತಿಹಾಸಿಕ ಮಹತ್ವವಿಲ್ಲ. ಅಖಿಲ ಭಾರತೀಯ ಹಿಂದೂ ಮಹಾಸಭಾವು ಮೊಘಲರು ಮತ್ತು ಬ್ರಿಟಿಷರ ಕಾಲದಲ್ಲಿ ಈ ರೀತಿಯ ಕಾರ್ಯಕ್ರಮಕ್ಕೆ ಅವಕಾಶ ನೀಡಲಿಲ್ಲ, ಮಾಹಿತಿ ಹಕ್ಕಿನ ಮೂಲಕ ಬೆಳಕಿಗೆ ಬಂದಿರುವಾಗ ಏಕೆ ಆಯೋಜಿಸಲಾಗುತ್ತಿದೆ ? ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾವು ಮಹತ್ವಪೂಣ್ ಪ್ರಶ್ನೆ ಕೇಳಿದ್ದು ಅದರ ಮೇಲೆ ಶಾಶ್ವತವಾಗಿ ನಿಷೇಧಿಸುವಂತೆ ಆಗ್ರಾದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಮಾರ್ಚ್ 4 ರಂದು ನ್ಯಾಯಾಲಯವು ವಿಚಾರಣೆ ನಡೆಸಲಿದೆ.
ಊರೂಸ್ ಸಂದರ್ಭದಲ್ಲಿ ತಾಜ್ ಮಹಲ್‌ಗೆ ಮುಕ್ತ ಪ್ರವೇಶ ನೀಡಿದ ಬಗ್ಗೆ ಮಹಾಸಭಾವು ಅರ್ಜಿಯ ಮೂಲಕ ಆಕ್ಷೇಪ ವ್ಯಕ್ತಪಡಿಸಿದೆ. ಮೊಘಲ್ ದಾಳಿಕೋರ ಷಹಜಹಾನ್ ಸ್ಮರಣಾರ್ಥ ಫೆಬ್ರವರಿ 6 ರಿಂದ 8 ರವರೆಗೆ ಇದನ್ನು ಆಯೋಜಿಸಲಾಗುತ್ತದೆ. ಮಹಾಸಭಾದ ಮೀನಾ ದಿವಾಕರ್ ಮತ್ತು ಸೌರಭ್ ಶರ್ಮಾ ಅವರು ವಕೀಲ ಅನಿಲ್ ಕುಮಾರ್ ಮೂಲಕ ಸಿವಿಲ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಈ ಅರ್ಜಿ ಸಲ್ಲಿಸಿದ್ದಾರೆ.
‘Mughals, British didn’t…’: Agra court to hear petition against Shah Jahan’s ‘urs’ at Taj Mahalhttps://t.co/ijTPefOMFZ
— MSN India (@msnindia) February 3, 2024