ಜಲಗಾಂವ್‌ನಲ್ಲಿ ದೈನಿಕ ‘ಲೋಕಶಾಹಿ’ಯಿಂದ ಭಗವಾನ್ ಶ್ರೀರಾಮನಿಗೆ ಅವಮಾನ !

ಬಿಹಾರದ ಮುಖ್ಯಮಂತ್ರಿಯನ್ನು ‘ಪಲಟುರಾಮ್’ ಎಂದು ಕರೆದಿದ್ದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ !

ಜಲಗಾಂವ್ – ಜನವರಿ 23 ರಂದು, ಇಲ್ಲಿ ಪ್ರಸಿದ್ಧವಾಗುವ ‘ಲೋಕಶಾಹಿ’ ದಿನಪತ್ರಿಕೆಯಲ್ಲಿ ಭಗವಾನ್ ಶ್ರೀರಾಮನನ್ನು ಅವಮಾನಿಸುವ ಕಾರ್ಟೂನ್ ಪ್ರಕಟವಾಗಿತ್ತು. ಇದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವ್ಯಂಗ್ಯ ಚಿತ್ರ ಬಿಡಿಸಿ ಅವರನ್ನು ‘ಪಲಟುರಾಮ’ ಎಂದು ಕರೆಯಲಾಗಿತ್ತು. ಅವರ ಕಡೆ ನೋಡಿದ ಒಬ್ಬ ವ್ಯಕ್ತಿ, ‘ಏನೇ ಆಗಲಿ. ಈಗ ನಮ್ಮ ಪಾಲಿಗೆ ಅವನೂ ‘ರಾಮ’ ಎಂದು ತೋರಿಸಲಾಯಿತು. (ಇತರ ಧರ್ಮಗಳ ಶ್ರದ್ಧಾಸ್ಥಾನದ ಬಗ್ಗೆ ಈ ರೀತಿಯ ಕೆಲಸವನ್ನು ಮಾಡಲು ಧೈರ್ಯವಿರಬಹುದೇ ? ದೈನಿಕ ‘ಲೋಕಶಾಹಿ’ ಇದನ್ನು ಹೇಳಬೇಕು ! – ಸಂಪಾದಕರು) ‘ಪಲಟುರಾಮ್’ ಪದದ ಬದಲಿಗೆ, ‘ಪಲಟು ಭಯ್ಯಾ’ ಅಥವಾ ‘ಪಲಟು ನೇತಾ’ ಎಂದು ಬರೆಯಬಹುದಿತ್ತು. ಇದರಿಂದ ಶ್ರೀರಾಮ ಭಕ್ತರ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದು, ಈ ವಿಚಾರದಲ್ಲಿ ದೈನಿ ‘ಲೋಕಶಾಹಿ’ ಹಿಂದೂಗಳ ಕ್ಷಮೆಯಾಚಿಸಬೇಕು ಎಂದು ಹಿಂದೂಗಳು ಆಗ್ರಹಿಸಿದ್ದಾರೆ. ಇದರ ವಿರುದ್ಧ ದೈನಿಕ ‘ಲೋಕಶಾಹಿ’ಯನ್ನು ಖಂಡಿಸುವಂತೆ ಮನವಿಯೂ ಮಾಡಲಾಗುತ್ತಿದೆ.

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಯಿಂದ ಹೊರನಡೆದರು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಅವರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಲೋಕಶಾಹಿ ಮೈತ್ರಿಕೂಟವನ್ನು ಸೇರಿಕೊಂಡರು ಮತ್ತು ಮತ್ತೆ ಅಧಿಕಾರವನ್ನು ಸ್ಥಾಪಿಸಿದರು. ಅವರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋದಾಗ ಅವರ ಬಗ್ಗೆ ವ್ಯಂಗ್ಯಚಿತ್ರವನ್ನು ಬರೆಯಲಾಯಿತು.
ಹಿಂದೂಗಳು ಈ ಕೆಳಗಿನ ಸಂಖ್ಯೆಗಳಲ್ಲಿ ನಿಷೇಧಿಸುತ್ತಿದ್ದಾರೆ

ನಿಷೇಧಕ್ಕಾಗಿ ಸಂಖ್ಯೆ : 8412879911, 9422775011

ಸಂಪಾದಕೀಯ ನಿಲುವು

ಹಿಂದೂಗಳ ಭವ್ಯದಿವ್ಯ ಸಂಘಟನೆಯ ಹೊರತಾಗಿಯೂ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಇನ್ನೂ ನೋಯಿಸಲಾಗುತ್ತಿದೆ, ಇದನ್ನು ಗಮನದಲ್ಲಿಟ್ಟುಕೊಂಡು ಹಿಂದೂಗಳು ಸಂಬಂಧಪಟ್ಟವರಿಗೆ ನ್ಯಾಯಸಮ್ಮತವಾಗಿ ಪಾಠ ಕಲಿಸಬೇಕು ! ಅದು ಇಲ್ಲದೆ, ಈ ಪ್ರಕಾರಗಳು ನಿಲ್ಲುವುದಿಲ್ಲ !