ನವ ದೆಹಲಿ – ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2024 ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಲೋಕಸಭೆ ಸಾರ್ವತ್ರಿಕ ಚುನಾವಣೆಗೂ ಮುನ್ನ ಮತ್ತು ಈ ಸರಕಾರದ ಎರಡನೇ ಅವಧಿಗೂ ಮುನ್ನ ಇದು ಕೊನೆಯ ಬಜೆಟ್ ಆಗಿರುತ್ತದೆ. ಹೀಗಾಗಿ ಎಲ್ಲರ ಗಮನ ಈ ವರ್ಷದ ಬಜೆಟ್ ಮೇಲೆ ನೆಟ್ಟಿದೆ. ‘ಈ ವರ್ಷದ ಬಜೆಟ್ ‘ಮಧ್ಯಂತರ’ ಆಗಿರುವುದರಿಂದ ಸರಕಾರ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡುವುದನ್ನು ತಪ್ಪಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಮಂಡಿಸಿದ ಬಜೆಟ್ ಮಧ್ಯಂತರವಾಗಿದೆ. ಚುನಾವಣೆ ನಂತರ ಆಡಳಿತ ಪಕ್ಷ ಮಂಡಿಸುವ ಬಜೆಟ್ ಅಂತಿಮ ಬಜೆಟ್ ಆಗಲಿದೆ.
ಸೌಜನ್ಯ : ಇಂಡಿಯಾ ಟುಡೇ