ನನ್ನನ್ನು ವಿರೋಧಿಸಿದವರು ಪಾಕಿಸ್ತಾನಕ್ಕೆ ತೊಲಗಲಿ ! – ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ

ಪ್ರಾಣಪ್ರತಿಷ್ಠಾಪನೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಮುಖಂಡನ ವಿರುದ್ಧ ಫತ್ವಾ ಹಾಗೂ ಜೀವ ಬೆದರಿಕೆ !

ನವದೆಹಲಿ – ‘ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್’ ಮುಖ್ಯಸ್ಥ ಡಾ. ಇಮಾಮ್ ಉಮರ್ ಅಹಮದ್ ಇಲ್ಯಾಸಿ ಇವರು ಜನವರಿ 22 ರಂದು ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದು ಮತಾಂಧ ಮುಸ್ಲಿಮರನ್ನು ಕೆರಳಿಸಿತು. ಅದಕ್ಕಾಗಿ ಅವರಿಗೆ ಜೀವ ಬೆದರಿಕೆ ಹಾಕಲಾಯಿತು ಹಾಗೂ ಅವರ ವಿರುದ್ಧ ಫತ್ವಾ ಹೊರಡಿಸಲಾಯಿತು.

ಈ ಕುರಿತು ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಇವರು,

1. ಇದು ಇಸ್ಲಾಮಿಕ್ ದೇಶವಲ್ಲ, ಇದು ಭಾರತ ಎಂದು ನಾನು ಹೇಳಲು ಬಯಸುತ್ತೇನೆ. ಇಲ್ಲಿ ವಿವಿಧತೆಯಲ್ಲಿ ಏಕತೆ ಇದೆ. ‘ನಾನು ಕೃತಿಯ ಮೂಲಕ ನೀಡುವ ಪ್ರೀತಿಯ ಸಂದೇಶದಲ್ಲಿ ಸಮಸ್ಯೆ ಇದೆ’, ‘ನಾನು ರಾಷ್ಟ್ರದ ಪರವಾಗಿ ನಿಲ್ಲುತ್ತೇನೆ’ ಅದು ನನ್ನ ತಪ್ಪು ಎಂದು ಅವರು ಭಾವಿಸಿದರೆ, ಅವರು ಪಾಕಿಸ್ತಾನಕ್ಕೆ ಹೋಗಲಿ. ನಾನು ಯಾವುದೇ ಅಪರಾಧ ಮಾಡಿಲ್ಲ. ನನಗೆ ಯಾವುದೇ ಫತ್ವಾದಲ್ಲಿ ನಂಬಿಕೆ ಇಲ್ಲ. ನಾನು ಹೇಳಿದ್ದಕ್ಕೆ ಬದ್ಧನಾಗಿದ್ದೇನೆ. ನಾನು ಬಾಗುವುದಿಲ್ಲ.

2. ನನ್ನ ವಿರುದ್ಧ ದ್ವೇಷದ ವಾತಾವರಣ ಸೃಷ್ಟಿಯಾಗುತ್ತಿದೆ. ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಲಾಗುತ್ತಿದೆ. ಹುಸೇನಿ ಕಾಸ್ಮಿ ಎಂಬಾತ ನನ್ನ ವಿರುದ್ಧ ಫತ್ವಾ ಹೊರಡಿಸಿದ್ದಾನೆ. ಅದರಿಂದ ಅವರು ನನ್ನ ಮೊಬೈಲ್ ಫೋನ್ ಸಂಖ್ಯೆಯನ್ನು ದೇಶದಾದ್ಯಂತ ಜನರಿಗೆ ನೀಡಿದ್ದಾರೆ. ಅವರು, ‘ನಾನು ಕ್ಷಮೆಯಾಚಿಸಬೇಕು ಮತ್ತು ರಾಜೀನಾಮೆ ನೀಡಬೇಕು ಅಥವಾ ಪರಿಣಾಮಗಳನ್ನು ಎದುರಿಸಬೇಕು’ ಎಂದು ಹೇಳಿದರು.

3. ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಾಗ 2 ದಿನ ಆಲೋಚಿಸಿ ಈ ಕಾರ್ಯಕ್ರಮಕ್ಕೆ ಹೋಗಲೇಬೇಕು ಎಂದು ನಿರ್ಧರಿಸಿದೆ. ಹೀಗೆ ಮಾಡುವುದರಿಂದ ದೇಶದ ಹಿತದೃಷ್ಟಿಯಿಂದ ಸಾಮರಸ್ಯದ ವಾತಾವರಣ ನಿರ್ಮಾಣವಾಗುತ್ತದೆ. ನಾನು ವಿರೋಧಿಸುತ್ತೇನೆ ಎಂದು ನನಗೆ ತಿಳಿದಿತ್ತು.

4. ಮುಖ್ಯ ಇಮಾಮ್ ಆದ ನಾನು ಸಮಾರಂಭದಲ್ಲಿ ಭಾಗವಹಿಸಿದ್ದೆ. ನಾನು ಅಯೋಧ್ಯೆಗೆ ಹೋದಾಗ ನನ್ನನ್ನು ಸ್ವಾಗತಿಸಲಾಯಿತು. ಸಂತರೂ ನನ್ನನ್ನು ಗೌರವಿಸುತ್ತಿದ್ದರು. ಅಲ್ಲಿ ಪ್ರೀತಿಯ ಸಂದೇಶ ನೀಡಿದ್ದೆ. ನಾನು ಹೇಳಿದ್ದೆ, ‘ನಮ್ಮ ಜಾತಿ, ಮತ, ಧರ್ಮ, ಪೂಜೆ ಬೇರೆ ಇರಬಹುದು; ಆದರೆ ಶ್ರೇಷ್ಠ ಧರ್ಮವೆಂದರೆ ಮಾನವೀಯತೆ. ಭಾರತದಲ್ಲಿ ವಾಸಿಸುತ್ತಿರುವವರೆಲ್ಲರೂ ಭಾರತೀಯರು’ ಎಂದು ಹೇಳಿದರು.

5. ನಾವೆಲ್ಲರೂ ನಮ್ಮ ಭಾರತವನ್ನು ಬಲಪಡಿಸಬೇಕು. ನಮಗೆ, ‘ರಾಷ್ಟ್ರ ಮೊದಲ ಆದ್ಯತೆ’ ಆಗಿದೆ. ದ್ವೇಷವನ್ನು ಕೊನೆಗೊಳಿಸುವುದು ಇಂದಿನ ಸಂದೇಶವಾಗಿದೆ ಎಂದು ಹೇಳಿದರು.

ಸಂಪಾದಕರ ನಿಲುವು

* ಹಿಂದುಗಳನ್ನು ಸದಾ ‘ಮತಾಂಧರು’ ಎಂಬ ಹಣೆಪಟ್ಟಿ ಕಟ್ಟುವ ಜಾತ್ಯತೀತವಾದಿಗಳು, ಪ್ರಗತಿ(ಅಧೋಗತಿ)ಪರರು, ಕಮ್ಯುನಿಸ್ಟರು ಹಾಗೂ ಸಮಾಜವಾದಿಗಳು ಇಲ್ಯಾಸಿಯಂತಹ ನಾಯಕರನ್ನು ತಮ್ಮದೇ ಧಾರ್ಮಿಕ ಸಹೋದರರು ಬೆದರಿಕೆ ಹಾಕಿದಾಗ ಒಂದು ಮಾತನ್ನೂ ಆಡುವುದಿಲ್ಲ ಎಂಬುದನ್ನು ಗಮನಿಸಿ !