ಓಟಾವಾ (ಕೆನಡಾ) – ಭಾರತ ನಮಗೆ ಸಹಕಾರ ನೀಡುತ್ತಿದೆ, ಆದ್ದರಿಂದ ಎರಡೂ ದೇಶಗಳಲ್ಲಿನ ಸಂಬಂಧ ಸುಧಾರಿಸುತ್ತಿದೆ. ನಾವು ಹರದೀಪ ಸಿಂಹ ನಿಜ್ಜರ್ ಪ್ರಕರಣದಲ್ಲಿ ಮುಂದುವರೆದಿದ್ದೇವೆ. ಭಾರತದ ರಾಷ್ಟ್ರೀಯ ಸುರಕ್ಷಾ ಸಲಹೆಗಾರರ ಜೊತೆಗೆ ಚರ್ಚೆಯ ಪರಿಣಾಮ ಸಕಾರಾತ್ಮಕವಾಗಿ ಕಾಣುತ್ತಿದೆ. ಅಮೇರಿಕಾದ ಆರೋಪದ ನಂತರ ಭಾರತವು ನಮ್ಮ ಜೊತೆಗೆ ಸಹಕಾರ ಹೆಚ್ಚಿಸಿದೆ, ಎಂದು ಕೆನಡಾದ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಜೋಡಿ ಥಾಮಸ್ ಇವರು ಕೆನಡಾದ ‘ಸಿಟಿವಿ’ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು. ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹನ ಹತ್ಯೆಯ ಪ್ರಯತ್ನ ಮಾಡಿರುವ ಕುರಿತು ಅಮೆರಿಕ ಭಾರತದ ಮೇಲೆ ಆರೋಪ ಮಾಡಿತ್ತು.