ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯು ಕಪ್ಪು ಬಾವುಟ ತೋರಿಸಿದ್ದರಿಂದ ಕೇರಳ ರಾಜ್ಯಪಾಲ ಆರಿಫ ಮಹಮ್ಮದ ಖಾನ ಅವರಿಂದ ರಸ್ತೆಯಲ್ಲೇ ಧರಣಿ

ತಿರುವನಂತಪುರಂ (ಕೇರಳ) – ಕೇರಳದ ರಾಜ್ಯಪಾಲ ಆರಿಫ ಮಹಮ್ಮದ ಖಾನ ಅವರು ರಾಜ್ಯದ ಕೊಲ್ಲಮ ಜಿಲ್ಲೆಯಲ್ಲಿ ‘ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ’ ಈ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯ ವಿರುದ್ಧ ರಸ್ತೆಯ ಮೇಲೆಯೇ ಧರಣಿಗಿಳಿದರು. ಜನವರಿ 27 ರಂದು ಬೆಳಿಗ್ಗೆ ಸಂಘಟನೆಯ ಕಾರ್ಯಕರ್ತರು ರಾಜ್ಯಪಾಲ ಖಾನ ಅವರ ಬೆಂಗಾವಲು ಪಡೆಗೆ ಕಪ್ಪು ಬಾವುಟ ತೋರಿಸಿದ್ದರು. ಅದನ್ನು ವಿರೋಧಿಸಲು ರಾಜ್ಯಪಾಲ ಖಾನ ಅವರು ಒಂದು ಅಂಗಡಿಯಿಂದ ಖುರ್ಚಿಯನ್ನು ತರಿಸಿಕೊಂಡರು ಮತ್ತು ಅದರ ಮೇಲೆ ಕುಳಿತುಕೊಂಡು ಧರಣಿ ಆಂದೋಲನವನ್ನು ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು, ನಾನು ಇಲ್ಲಿಂದ ಹೋಗುವುದಿಲ್ಲ. ಪೊಲೀಸರು ಈ ಕಾರ್ಯಕರ್ತರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಹಿಂದೆ ರಾಜ್ಯಪಾಲರ ಮೇಲೆ ಹಲ್ಲೆಗೆ ಪ್ರಯತ್ನ !

ಕಳೆದ ಕೆಲ ದಿನಗಳಿಂದ ರಾಜ್ಯಪಾಲ ಖಾನ ಮತ್ತು ರಾಜ್ಯದ ಕಮ್ಯುನಿಸ್ಟ ಮೈತ್ರಿ ಸರಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇವರಲ್ಲಿ ಕೇರಳ ವಿಶ್ವವಿದ್ಯಾಲಯದ ಕೆಲವು ನೇಮಕಾತಿಗಳಿಗೆ ಸಂಬಂಧಿಸಿದಂತೆ ವಿವಾದ ನಡೆಯುತ್ತಿದೆ. ಈ ಸಂದರ್ಭದಲ್ಲಿ ‘ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ’ ಈ ಸಂಘಟನೆ ರಾಜ್ಯಪಾಲ ಖಾನ ಅವರನ್ನು ವಿರೋಧಿಸುತ್ತಿದೆ. ಕಳೆದ ತಿಂಗಳು ಸಂಘಟನೆಯ ಕೆಲವು ಜನರು ರಾಜ್ಯಪಾಲ ಖಾನ ಇವರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಇದರ ಹಿಂದೆ ಸ್ವತಃ ಮುಖ್ಯಮಂತ್ರಿಗಳಿದ್ದರು ಎನ್ನುವ ಆರೋಪ ರಾಜ್ಯಪಾಲರು ಮಾಡಿದ್ದರು. (ಕೇರಳ ಸರಕಾರವು ರಾಜ್ಯಪಾಲರ ಮೇಲೆ ಆಕ್ರಮಣ ಮಾಡುವ ಪ್ರಯತ್ನ ಮಾಡುವ ಅಪರಾಧಿಗಳನ್ನು ಬೆಂಬಲಿಸುತ್ತಿದ್ದರೆ, ಸಾಮಾನ್ಯ ಜನರಿಗೆ ಯಾರು ನ್ಯಾಯ ಕೊಡುತ್ತಾರೆ ಮತ್ತು ಅವರನ್ನು ಯಾರು ರಕ್ಷಿಸುತ್ತಾರೆ ? – ಸಂಪಾದಕರು)

ಗಣರಾಜ್ಯೋತ್ಸವ ದಿನದಂದು ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಪರಸ್ಪರ ಶುಭ ಕೋರಲಿಲ್ಲ !

ಪ್ರಜಾಪ್ರಭುತ್ವದ ದಿನದಂದು ಕೂಡ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಬ್ಬರೂ ಪರಸ್ಪರ ಶುಭ ಹಾರೈಕೆಗಳನ್ನು ಸ್ವೀಕರಿಸದೇ ಇರುವುದು ಕಂಡುಬಂದಿತು. ಅಲ್ಲದೆ, ಜನವರಿ 25 ರಂದು ಕೇರಳದ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರು ತಮ್ಮ ಭಾಷಣವನ್ನು ಪೂರ್ಣ ಓದಲಿಲ್ಲ. ಇದರಿಂದ ವಿಜಯನ ಸರಕಾರದ ಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

(ಸೌಜನ್ಯ – News Nine)

ಸಂಪಾದಕೀಯ ನಿಲುವು

ಕಮ್ಯುನಿಸ್ಟ್ ಸರಕಾರದ ರಾಜ್ಯದಲ್ಲಿ ರಾಜ್ಯಪಾಲರು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿರುವುದೆಂದರೆ, ಪ್ರಜಾಪ್ರಭುತ್ವಕ್ಕೆ ಅಪಾಯವೇ ಆಗಿದೆ. ಕೇಂದ್ರ ಸರಕಾರ ಈ ಘಟನೆಯನ್ನು ಗಣನೆಗೆ ತೆಗೆದುಕೊಂಡು ಕೇರಳ ಸರಕಾರವನ್ನು ಪ್ರಶ್ನಿಸಬೇಕು.