ಕಟ್ಟರ ಹಿಂದೂದ್ವೇಷಿ ಮಹಮ್ಮದ ಜುಬೇರನಿಗೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ ಇವರಿಂದ ಕೋಮು ಸೌಹರ್ದತೆ ಪ್ರಶಸ್ತಿ ಘೋಷಣೆ !

ಭಾಜಪದಿಂದ ವಿರೋಧ!

ಚೆನ್ನೈ (ತಮಿಳುನಾಡು) – ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ ಅವರು ಗಣರಾಜ್ಯೋತ್ಸವದ ದಿನದಂದು ‘ಆಲ್ಟ್‌ನ್ಯೂಸ್’ ಈ ಹಿಂದೂದ್ವೇಷಿ ಸುದ್ದಿ ಸಂಕೇತಸ್ಥಳದ ಸಹ ಸಂಸ್ಥಾಪಕ ಮಹಮ್ಮದ್ ಜುಬೇರ್ ಇವನಿಗೆ ರಾಜ್ಯ ಸರಕಾರದ ‘ಕೋಮು ಸೌಹಾರ್ದ’ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ಪ್ರಚೋದನಾತ್ಮಕ ಮತ್ತು ದ್ವೇಷದ ಪೋಸ್ಟ್‌ಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸುವುದರ ವಿರುದ್ಧ ಜುಬೇರ ಕಾರ್ಯ ಮಾಡಿದ್ದಾನೆಂದು ಹೇಳುತ್ತಾ, ಮುಖ್ಯಮಂತ್ರಿ ಸ್ಟಾಲಿನ್ ಅವನನ್ನು ಶ್ಲಾಘಿಸಿದರು. ಜುಬೇರನು ತಮಿಳುನಾಡಿನ ವಲಸೆ ಕಾರ್ಮಿಕರ ಮೇಲೆ ಮಾಡಿರುವ ಹಲ್ಲೆಯ ಪೋಸ್ಟ್ ಸತ್ಯವಿಲ್ಲ ಎಂದು ಸಾಬೀತಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಭಾಜಪ ಈ ಪ್ರಶಸ್ತಿಯನ್ನು ವಿರೋಧಿಸಿದೆ.

1. ಜುಬೇರನಿಗೆ ‘ಕೊಟ್ಟಯಿ ಅಮೀರ ಕೋಮು ಸೌಹಾರ್ದ ಪ್ರಶಸ್ತಿ’ ನೀಡಲಾಗುವುದು. ಕೋಮು ಸೌಹಾರ್ದತೆ ಪ್ರಶಸ್ತಿಯನ್ನು 2000ನೇ ಇಸವಿಯಿಂದ ರಾಜ್ಯದ ವ್ಯಕ್ತಿಗೆ ನೀಡಲಾಗುತ್ತಿದೆ. ಜುಬೇರ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನಿವಾಸಿ ಆಗಿದ್ದಾನೆ ಎಂದು ಸರಕಾರ ಹೇಳುತ್ತಿದೆ.

2. ಭಾಜಪ ತಮಿಳುನಾಡು ಅಧ್ಯಕ್ಷ ಕೆ. ಅಣ್ಣಾಮಲೈ ಇವರು ‘ಎಕ್ಸ್’ ಮೂಲಕ ಒಂದು ಪೋಸ್ಟ್ ಮಾಡಿ, ಒಂದು ಪಕ್ಷಪಾತಿ ಮತ್ತು ನಾಶಪಡಿಸುವ ಸೂತ್ರಗಳನ್ನು ಮಂಡಿಸುವವನಿಗೆ ಸಾಮಾಜಿಕ ಸೌಹಾರ್ದ ಪ್ರಶಸ್ತಿಯನ್ನು ನೀಡುತ್ತಿರುವುದೆಂದರೆ, ಇಲ್ಲಿಯವರೆಗೆ ಯಾರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆಯೋ, ಅವರೆಲ್ಲರಿಗೂ ಅಪಮಾನವೇ ಆಗಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

‘ಹಿಂದೂಗಳನ್ನು ಅತ್ಯಧಿಕ ದ್ವೇಷ ಮಾಡುವುದೆಂದರೆ `ಕೋಮು ಸೌಹಾರ್ದತೆ’ ಎಂದು ತಮಿಳುನಾಡು ಸರಕಾರದ ವ್ಯಾಖ್ಯಾನವಾಗಿರುವುದರಿಂದ ಮತ್ತು ಜುಬೇರನ ಜಯ ಜಯಕಾರ ಮಾಡುತ್ತಿರುವ ಘಟನೆಗಳು ನಡೆಯುತ್ತಿರುವುದರಲ್ಲಿ ಆಶ್ಚರ್ಯವೇನಿದೆ ?