ವಡೋದರದಲ್ಲಿ ನಡೆದ ಮೆರವಣಿಗೆ ಮೇಲೆ ಮತಾಂಧ ಮುಸಲ್ಮಾನರಿಂದ ಮಸೀದಿಯ ಹತ್ತಿರ ಬೆದರಿಸುತ್ತಾ ದಾಳಿ
ವಡೋದರಾ (ಗುಜರಾತ) – ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ಗುಜರಾತ್‌ನ ಮೆಹಸಾಣಾ ಮತ್ತು ವಡೋದರಾದಲ್ಲಿ ಮೆರವಣಿಗೆಯನ್ನು ನಡೆಸಲಾಗಿತ್ತು. ಅದರ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿದರು. ಇದರಲ್ಲಿ ಕೆಲವು ಹಿಂದೂಗಳು ಗಾಯಗೊಂಡರು. ವಡೋದರಾದ ಭೋಜ ಗ್ರಾಮದಲ್ಲಿ ನಗಿನಾ ಮಸೀದಿಯ ಹತ್ತಿರ ನಡೆದ ದಾಳಿಯಲ್ಲಿ ಕೆಲವು ಮಹಿಳೆಯರು ಗಾಯಗೊಂಡರು. ಪೊಲೀಸರು ಈ ಪ್ರಕರಣದಲ್ಲಿ 26 ಜನರ ಮೇಲೆ ಅಪರಾಧವನ್ನು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಮತಾಂಧ ಮುಸಲ್ಮಾನರು `ಇಂದು ನಮ್ಮೆದುರು ಬರುವ ಹಿಂದೂಗಳನ್ನು ಕೊಲ್ಲುತ್ತೇವೆ. ನಾವು 2 ರಿಂದ 4 ಹಿಂದೂಗಳನ್ನು ಕತ್ತರಿಸುತ್ತೇವೆ’, ಎಂದು ಬೆದರಿಕೆ ಹಾಕುತ್ತಿದ್ದರು. ಈ ಬೆದರಿಕೆಗಳನ್ನು ಎಫ್.ಐ.ಆರ್.ನ ವರದಿಯಲ್ಲಿ ದಾಖಲಿಸಲಾಗಿದೆ.
1. ಪೊಲೀಸರ ಎಫ್.ಐ.ಆರ್. ವರದಿಯಲ್ಲಿ, ಮೆರವಣಿಗೆ ಮಧ್ಯಾಹ್ನ 2 ಗಂಟೆಗೆ ಭೋಜ ಗ್ರಾಮದ ಶ್ರೀರಾಮಮಂದಿರದಿಂದ ಪ್ರಾರಂಭವಾಯಿತು. ಇದರಲ್ಲಿ 500 ರಿಂದ 700 ಹಿಂದೂಗಳು ಭಾಗವಹಿಸಿದ್ದರು.
2. ಈ ಮೆರವಣಿಗೆ ನಗಿನಾ ಮಸೀದಿ ಹತ್ತಿರ ತಲುಪಿದಾಗ ಡಿಜೆ (ದೊಡ್ಡ ಧ್ವನಿವರ್ಧಕ ಯಂತ್ರ) ಸ್ಥಗಿತಗೊಳಿಸಲಾಯಿತು. ಈ ಸಮಯದಲ್ಲಿ ಕೆಲವು ಮುಸಲ್ಮಾನರು ಹಿಂದೂಗಳಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಅವರು `ಮತ್ತೆ ಮೆರವಣಿಗೆಯನ್ನು ಇಲ್ಲಿಗೆ ತರುವ ಪ್ರಯತ್ನ ಮಾಡಬೇಡಿರಿ; ಏಕೆಂದರೆ ಇಂದು ನಾವು 2 ರಿಂದ 4 ಹಿಂದೂಗಳನ್ನು ಕತ್ತರಿಸುವವರಿದ್ದೇವೆ. ಎಷ್ಟು ಹಿಂದೂಗಳು ಸಿಗುತ್ತಾರೆಯೋ, ಅವರನ್ನು ಕೊಲ್ಲುತ್ತೇವೆ.’ ತದನಂತರ ಅವರು ಹಿಂದೂಗಳ ಮೇಲೆ ದಾಳಿ ಮಾಡಲು ಆರಂಭಿಸಿದರು. ದಾಳಿ ನಡೆಸುತ್ತಿರುವಾಗ `ಯಾರನ್ನೂ ಬಿಡಬೇಡಿರಿ’ ಎಂದು ಹೇಳುತ್ತಿದ್ದರು.
3. ದಾಳಿಯ ಮೊದಲು ಹಿಂದೂಗಳು ರಸ್ತೆಯ ಮೇಲಿನ ಕಂಬಗಳ ಮೇಲೆ ಹಚ್ಚಲಾಗಿದ್ದ ಕೇಸರಿ ಧ್ವಜವನ್ನು ಮತಾಂಧರು ತೆಗೆದು ಹಾಕಿದರು. (ಮತಾಂಧರ ಮಾನಸಿಕತೆ ಏನು ಎಂಬುದು ಮೊದಲೇ ಸ್ಪಷ್ಟವಾಗಿದ್ದರೂ, ಜಾಗೃತಗೊಳ್ಳದ ಹಿಂದೂಗಳು ಮತ್ತು ಪೊಲೀಸರು ! – ಸಂಪಾದಕರು)
ಮತಾಂಧ ಮುಸಲ್ಮಾನರು ನಡೆಸಿದ ದಾಳಿಯಿಂದಾಗಿ, ಮೆರವಣಿಗೆಯಲ್ಲಿದ್ದ ಹಿಂದೂಗಳು ಓಡಲು ಪ್ರಾರಂಭಿಸಿದರು. (500 ರಿಂದ 700 ಹಿಂದೂಗಳು ಇರುವಾಗ ಆ ಹಿಡಿಯಷ್ಟಿರುವ ಮತಾಂಧರ ದಾಳಿಯಿಂದ ಓಡುತ್ತಿದ್ದರೆ, ಇಂತಹ ಹಿಂದೂಗಳನ್ನು ಯಾರು ರಕ್ಷಿಸುತ್ತಾರೆ ? – ಸಂಪಾದಕರು) ಅವರ ಮೇಲೆ ಕಲ್ಲು ತೂರಾಟ ಪ್ರಾರಂಭವಾಯಿತು ಆಗ ಪೊಲೀಸರು ಮತಾಂಧ ಮುಸಲ್ಮಾನರನ್ನು ತಡೆಯಲು ಪ್ರಯತ್ನಿಸಿದಾಗ; ಅವರ ಮೇಲೆಯೂ ಕಲ್ಲುಗಳನ್ನು ಎಸೆಯಲಾಯಿತು. (ಪೊಲೀಸರ ಮೇಲೆಯೂ ಕಲ್ಲು ತೂರಾಟ ನಡೆಸುವಷ್ಟು ಉದ್ಧಟರಾಗಿರುವ ಮತಾಂಧರಿಗೆ ಪಾಠ ಕಲಿಸಲು ಪೊಲೀಸರು ಏನು ಮಾಡುತ್ತಾರೆ ?) ಇದರಿಂದ ಪೊಲೀಸರು ಲಾಠಿಚಾರ್ಜ್ ಮಾಡಬೇಕಾಯಿತು. ಇದರಲ್ಲಿ 8 ಜನರು ಗಾಯಗೊಂಡಿದ್ದಾರೆ. ಕಲ್ಲು ತೂರಾಟದಿಂದ ಪೊಲೀಸರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಈ ಗಲಭೆ ಪ್ರಕರಣಗಳಲ್ಲಿ ಇದುವರೆಗೆ 13 ಜನರನ್ನು ಬಂಧಿಸಿದ್ದಾರೆ.
ಮೆಹಸಾಣಾದಲ್ಲಿಯೂ ದಾಳಿ
ಮೆಹಸಾಣಾದ ಖೆಡಾಲೂ ಗ್ರಾಮದಲ್ಲಿ ಮತಾಂಧ ಮುಸಲ್ಮಾನರು ಅವರ ಮನೆಗಳ ಮೇಲ್ಛಾವಣಿಯಿಂದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಆ ಸಮಯದಲ್ಲಿ ಪೊಲೀಸರು ಮತಾಂಧರನ್ನು ತಡೆಯಲು ಅಶ್ರುವಾಯು ಸೆಲ್ ಬಳಸಿದರು.
ಸಂಪಾದಕೀಯ ನಿಲುವುಗುಜರಾತ್ ನಲ್ಲಿ ಹಿಂದುತ್ವವಾದಿ ಭಾಜಪ ಸರಕಾರ ಇರುವಾಗ ಮತಾಂಧ ಮುಸಲ್ಮಾನರು ಯಾವುದೇ ಭಯವಿಲ್ಲದೇ ಇಂತಹ ಬೆದರಿಕೆಗಳನ್ನು ಹಾಕುತ್ತಾ ದಾಳಿ ನಡೆಸುತ್ತಿದ್ದರೆ, ಇದರಿಂದ ಈಗ ಹಿಂದೂಗಳು ಕೇವಲ ಸಂಘಟಿತರಾಗುವುದಷ್ಟೇ ಅಲ್ಲ, ಬದಲಾಗಿ ಸ್ವಸಂರಕ್ಷಣೆಯ ತರಬೇತಿಯನ್ನು ಪಡೆದುಕೊಳ್ಳುವ ಆವಶ್ಯಕತೆಯಿದೆ ಎಂದು ಕಂಡು ಬರುತ್ತದೆ. ಹೀಗೆ ಮಾಡಿದರೆ ಮಾತ್ರ ಅವರು ತಮ್ಮನ್ನು ಮತ್ತು ಇತರೆ ಹಿಂದೂಗಳನ್ನು ರಕ್ಷಿಸಬಹುದು ! ಹಿಂದೂಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಮತ್ತು ಹಿಂದೂಗಳ ಮೇಲೆ ದಾಳಿ ಮಾಡುವ ಮುಸ್ಲಿಮರು ‘ದೇಶದಲ್ಲಿ ಅಸುರಕ್ಷಿತರಾಗಿದ್ದಾರೆ ‘ ಎಂದು ಯಾರಾದರೂ ಹೇಳಲು ಸಾಧ್ಯವಿದೆಯೇ? ಆದರೂ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಇತ್ಯಾದಿ ಕಪಟಿ, ಜಾತ್ಯತೀತ ಮತ್ತು ಹಿಂದೂ ದ್ವೇಷಿ ರಾಜಕೀಯ ಪಕ್ಷಗಳು ಹೀಗೆ ಹೇಳುತ್ತಲೇ ಇರುತ್ತವೆ, ಎನ್ನುವುದನ್ನು ಗಮನಿಸಬೇಕು ! |