ಲೋಕಸಭಾ ಚುನಾವಣೆಯ ನಂತರ ರಾಹುಲ ಗಾಂಧಿ ಇವರನ್ನು ಬಂಧಿಸುವೆವು ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಗುಹಾಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬ್ಯಾರಿಕೇಟ್ಸ್ ಧ್ವಂಸ ಮಾಡಿರುವ ಪ್ರಕರಣ

ಗುಹಾಟಿ (ಅಸ್ಸಾಂ) – ೨೦೨೪ ರ ಲೋಕಸಭೆಯ ಚುನಾವಣೆಯ ನಂತರ ನಾವು ರಾಹುಲ ಗಾಂಧಿ ಇವರನ್ನು ಬಂಧಿಸುವೆವು. ಈಗ ಅವರನ್ನು ಬಂಧಿಸಿದರೆ ಇದು ರಾಜಕೀಯ ಪ್ರೇರಿತ ಎಂದು ನಮ್ಮ ಮೇಲೆ ಆರೋಪ ಹೋರಿಸುವರು, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬೀಸ್ವ ಸರಮಾ ಇವರು ಹೇಳಿಕೆ ನೀಡಿದರು. ಜನವರಿ ೨೩ ರಂದು ‘ಭಾರತ ಜೋಡೋ ನ್ಯಾಯ ಯಾತ್ರೆ’ಗೆ ಗುಹಾಟಿಯಲ್ಲಿ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಪೊಲೀಸರು ಬ್ಯಾರಿಕೆಟ್ ಹಾಕಿದ್ದರು; ಆದರೆ ಕಾಂಗ್ರೆಸ್ ಕಾರ್ಯಕರ್ತರು ಅವನ್ನು ದ್ವಂಸಗೊಳಿಸಿದರು. ಅದರ ನಂತರ ಸರಮಾ ಇವರು ಮೇಲಿನ ಹೇಳಿಕೆ ನೀಡಿದ್ದರು.

(ಸೌಜನ್ಯ – Aaj Tak)

ಈ ಸಮಯದಲ್ಲಿ ಸರಮಾ ಇವರು ಪೊಲೀಸ ಅಧಿಕಾರಿಗಳಿಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನ ನಾಯಕರ ವಿರುದ್ಧ ದೂರು ದಾಖಲಿಸಲು ಆದೇಶ ನೀಡಿದರು. ಅದರ ಪ್ರಕಾರ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ, ಕನ್ನಯ್ಯ ಕುಮಾರ ಮತ್ತು ಪಕ್ಷದ ಇತರ ನಾಯಕರ ವಿರುದ್ಧ ದೂರು ದಾಖಲಾಗಿವೆ.

ಸಂಪಾದಕೀಯ ನಿಲುವು

ಶ್ರೀರಾಮನನ್ನು ನಿರ್ಲಕ್ಷಿಸಿ ಹೊರಟಿರುವ ರಾಹುಲ ಗಾಂಧಿ ಮತ್ತು ಅವರ ಪಕ್ಷ ಇವರನ್ನು ಇನ್ನೂ ಜನರು ಶಾಶ್ವತವಾಗಿ ನಿರ್ಲಕ್ಷಿಸುವರು ಇದು ಅವರು ಗಮನದಲ್ಲಿಡಬೇಕು !