ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ನಿಮಿತ್ತ ಸನಾತನ ಸಂಸ್ಥೆಯಿಂದ ದೇಶವ್ಯಾಪಿ ಅಭಿಯಾನ
ಬೆಂಗಳೂರು : ಜನವರಿ 16 ರಿಂದ 22 ರವರೆಗೆ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಪೂಜಾ ವಿಧಿಗಳ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆಯ ವತಿಯಿಂದ ‘ಶ್ರೀರಾಮನಾಮ ಸಂಕೀರ್ತನೆ ಅಭಿಯಾನ’ ವನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಯಲಹಂಕದ ಬೂದಿಗೆರೆಯ ಶ್ರೀ ರಾಮ ದೇವಸ್ಥಾನ, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಕೋಗಿಲು, ಪ್ರಕೃತಿ ಲೆಯೌಟ್ ನ ಶ್ರೀ ವಿದ್ಯಾಚೌಡೇಶ್ವರಿ ದೇವಸ್ಥಾನ, ಮಾರುತಿ ನಗರದ ಶ್ರೀ ಓಂ ಶಕ್ತಿ ದೇವಸ್ಥಾನ, ವೈಟ್ ಫೀಲ್ಡ್ ನ ಶ್ರೀ ತಿರುಮಲ ಸ್ವಾಮಿ ದೇವಸ್ಥಾನ ಹಾಗೂ ರಾಜ್ಯದ ಬಾಗಲಕೋಟೆ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ತುಮಕೂರು ಸೇರಿದಂತೆ 120 ಕ್ಕೂ ಅಧಿಕ ಕಡೆಗಳಲ್ಲಿ ನಾಮಸಂಕೀರ್ತನೆ ಸಂಪ್ನನವಾಯಿತು. ಸ್ಥಳೀಯ ರಾಮಭಕ್ತರು ದೇವಸ್ಥಾನಗಳಲ್ಲಿ 30 ನಿಮಿಷಗಳ ಕಾಲ ಸಾಮೂಹಿಕವಾಗಿ ‘ಶ್ರೀ ರಾಮ ಜಯರಾಮ ಜಯ ಜಯ ರಾಮ’ ನಾಮಜಪ ಮಾಡಿದರು.
ವೈಶಿಷ್ಟ್ಯಪೂರ್ಣ ಘಟನೆಗಳು :
ಚಂದಾಪುರ ಮತ್ತು ಬೂದಿಗೆರೆ ಈ ಭಾಗಗಳಲ್ಲಿ ಧರ್ಮಪ್ರೆಮಿಗಳೇ ನೇತೃತ್ವ ವಹಿಸಿ ನಾಮಸಂಕೀರ್ತನೆ ಆಯೋಜನೆ ಮಾಡಿದರು.
ರಾಜಾಜಿನಗರದಲ್ಲಿ ಆಯೋಜಿಸಲಾದ ನಾಮಸಂಕೀರ್ತನೆಯಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂಜ್ಯನೀಯ ರಮಾನಂದ ಗೌಡ ಇವರ ವಂದನೀಯ ಉಪಸ್ಥಿತಿ ಇತ್ತು !
ಧರ್ಮಪ್ರೇಮಿಗಳು ಹಾಗೂ ರಾಮಭಕ್ತರು ತುಂಬಾ ಉತ್ಸಾಹದಿಂದ ಈ ಅಭಿಯಾನದಲ್ಲಿ ಸಹಭಾಗ ಮಾಡಿದರು.