ರಾಹುಲ್ ಗಾಂಧಿಯವರ ನ್ಯಾಯ ಯಾತ್ರೆ ಗೌಹಾಟಿ (ಅಸ್ಸಾಂ) ನಗರವನ್ನು ಪ್ರವೇಶಿಸಲು ಪೊಲೀಸರಿಂದ ತಡೆ !

ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ !

ಗೌಹಾಟಿ (ಅಸ್ಸಾಂ) – ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರು ಸಧ್ಯ ನ್ಯಾಯ ಯಾತ್ರೆಯಲ್ಲಿದ್ದಾರೆ. ಅವರ ನ್ಯಾಯ ಯಾತ್ರೆ ಜನವರಿ 23 ರಂದು ಅಸ್ಸಾಂನ ರಾಜಧಾನಿ ಗೌಹಾಟಿಗೆ ತಲುಪಿತು; ಆದರೆ ಪೊಲೀಸರು ಅವರನ್ನು ನಗರವನ್ನು ಪ್ರವೇಶಿಸಲು ಅನುಮತಿ ನೀಡಲಿಲ್ಲ. ಪೊಲೀಸರು ನಗರದ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಕಾಂಗ್ರೆಸ ಕಾರ್ಯಕರ್ತರು ಈ ಬ್ಯಾರಿಕೇಡ್ ಗಳನ್ನು ಮುರಿದಿದ್ದಾರೆ. ಇದರಿಂದಾಗಿ ಪೊಲೀಸರೊಂದಿಗೆ ಘರ್ಷಣೆ ನಡೆಯಿತು. ಈ ಘಟನೆಯಿಂದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ರಾಹುಲ ಗಾಂಧಿಯ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದ್ದಾರೆ.

ರಾಹುಲ್ ಗಾಂಧಿಯವರು ಈ ಘಟನೆಯ ವಿಷಯದಲ್ಲಿ ಮಾತನಾಡಿ, ಯಾವ ಮಾರ್ಗದಲ್ಲಿ ನಮ್ಮ ಯಾತ್ರೆಯನ್ನು ತಡೆಯಲಾಗಿದೆಯೋ, ಅದೇ ಮಾರ್ಗದಿಂದ ಬಜರಂಗದಳ ಮತ್ತು ಭಾಜಪ ಅಧ್ಯಕ್ಷರಾದ ಜಗತ ಪ್ರಸಾದ ನಡ್ಡಾ ಅವರ ಮೆರವಣಿಗೆ ಹೊರಟಿದೆ. ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯ ಮೇಲೆ ನಿಲ್ಲಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆಗೆದಿದ್ದಾರೆ. ನಾವು ಕಾನೂನನ್ನು ಪಾಲನೆ ಮಾಡುತ್ತೇವೆ. ಆದ್ದರಿಂದ, ನಮಗೆ ಯಾವ ಮಾರ್ಗದಿಂದ ಅನುಮತಿ ಸಿಕ್ಕಿದೆಯೋ, ಆ ಮಾರ್ಗದಿಂದ ಈ ಪ್ರವಾಸವನ್ನು ಮಾಡಲಾಗಿದೆಯೆಂದು ಹೇಳಿದರು.