ಲಕ್ಷ್ಮಣಪುರಿ (ಉತ್ತರ ಪ್ರದೇಶ) ಇಲ್ಲಿಯ ಅಕ್ಕಸಾಲಿಗನಿಂದ ಶ್ರೀ ರಾಮಲಲ್ಲಾನ 14 ಆಭರಣಗಳ ನಿರ್ಮಾಣ !

ಲಕ್ಷ್ಮಣಪುರಿ (ಅಯೋಧ್ಯೆ) – ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಲಾಗಿರುವ ಶ್ರೀ ರಾಮಲಲ್ಲಾನ ಮೂರ್ತಿಗೆ ಹಾಕಿರುವ ಚಿನ್ನದ ಆಭರಣಗಳನ್ನು ನೋಡಿದ ನಂತರ, ಪ್ರತಿಯೊಬ್ಬ ರಾಮ ಭಕ್ತನೂ ಅವುಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಹೊಂದಿರುತ್ತಾನೆ, ಇದರಲ್ಲಿ ಯಾವುದೇ ಸಂಶಯವಿಲ್ಲ. ಮೂರ್ತಿಯ ಮೇಲಿನ ಎಲ್ಲಾ ಆಭರಣಗಳನ್ನು ಲಕ್ಷ್ಮಣಪುರಿಯ ‘ಎಚ್.ಎಸ್.ಜೆ.’ ಈ ಸಂಸ್ಥೆಯು ತಯಾರಿಸಿದೆ. ಎಲ್ಲ ಆಭರಣಗಳನ್ನು ಕೇವಲ 12 ದಿನಗಳಲ್ಲಿ ಸಿದ್ಧಪಡಿಸಲಾಗಿದೆಯೆಂದು ಈ ಸಂಸ್ಥೆಯ ಮಾಲೀಕರಾದ ಅಂಕುರ ಅಗ್ರವಾಲ ಮಾಹಿತಿಯನ್ನು ನೀಡಿದರು. ಒಟ್ಟು 14 ಆಭರಣಗಳನ್ನು ತಯಾರಿಸಲಾಗಿದೆ. ಹಾಗೆಯೇ ಶ್ರೀ ರಾಮಲಲ್ಲಾನಿಗೆ ಆಡಲು ಆನೆ, ಕುದುರೆ ಮತ್ತು ಇತರ ಆಟಿಕೆಗಳನ್ನು ತಯಾರಿಸಿದ್ದಾರೆ. ಇವೆಲ್ಲಕ್ಕೂ ಚಿನ್ನ, ವಜ್ರ, ಮಾಣಿಕ್ಯ ಮತ್ತು ಪಚ್ಚೆಯನ್ನು ಬಳಸಲಾಗಿದೆ.

ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಂಕುರ ಅಗ್ರವಾಲ ಅವರನ್ನು ಜನವರಿ 1 ರಂದು ಸಂಪರ್ಕಿಸಿ 5 ವರ್ಷದ ಶ್ರೀ ರಾಮಲಲ್ಲಾನಿಗೆ ಅಂದರೆ ಅವನ ವಯಸ್ಸಿಗೆ ಶೋಭಿಸುವಂತಹ ಆಭರಣಗಳನ್ನು ತಯಾರಿಸುವಂತೆ ಹೇಳಿತ್ತು.

1. ಹಣೆಯ ಮೇಲಿನ ತಿಲಕವನ್ನು 16 ಗ್ರಾಮ ಚಿನ್ನದಿಂದ ತಯಾರಿಸಲಾಗಿದೆ. ಈ ತಿಲಕದ ಮಧ್ಯದಲ್ಲಿ 3 ಕ್ಯಾರೆಟ್ ವಜ್ರ ಮತ್ತು ಎರಡೂ ಬದಿಗಳಲ್ಲಿ 10 ಕ್ಯಾರೆಟ್ ವಜ್ರಗಳನ್ನು ಜೋಡಿಸಲಾಗಿದೆ. ಮಧ್ಯದಲ್ಲಿ ಮಾಣಿಕ್ಯವನ್ನು ಬಳಸಲಾಗಿದೆ.

2. ಶ್ರೀ ರಾಮಲಲ್ಲಾನ ಕೊರಳಿನಲ್ಲಿ ಸುಮಾರು 500 ಗ್ರಾಂ ತೂಕದ ಚಿನ್ನದ 5 ಪದರಿನ ಹಾರವಿದೆ. ಇದರಲ್ಲಿ 150 ಕ್ಯಾರೆಟ್ ಮಾಣಿಕ್ಯ ಮತ್ತು ಸುಮಾರು 380 ಕ್ಯಾರೆಟ್ ಪಚ್ಚೆಯನ್ನು ಬಳಸಲಾಗಿದೆ. ಮಧ್ಯದಲ್ಲಿ ಸೂರ್ಯವಂಶದ ಚಿಹ್ನೆ ಇದೆ.

3. ಪ್ರಭು ರಾಮಲಲ್ಲಾನ ಕೊರಳಲ್ಲಿರುವ ಅತಿ ದೊಡ್ಡ ಹಾರ ವಿಜಯಮಾಲೆಯಾಗಿದೆ. ಇದರ ತೂಕ ಸುಮಾರು 2 ಕೆ.ಜಿ. ಇದೆ. ಇದನ್ನು 22 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ. ಇದರ ಮೇಲೆ ವಿವಿಧ ಧಾರ್ಮಿಕ ಚಿಹ್ನೆಗಳಿವೆ. ಇವುಗಳಲ್ಲಿ ಕಮಲ, ಶಂಖ, ಚಕ್ರ, ಕುಂಡ, ಪಾರಿಜಾತ, ಚಂಪಾ ಮತ್ತು ತುಳಸಿ ಸೇರಿವೆ. ಈ ಹಾರ ಮೂರ್ತಿಯ ಕಾಲಿನ ವರೆಗೆ ಮುಟ್ಟುತ್ತದೆ.

4. ಶ್ರೀ ರಾಮಲಲ್ಲಾನಿಗಾಗಿ ನಿರ್ಮಿಸಿದ ಉಂಗುರದಲ್ಲಿ ಪಚ್ಚೆಯನ್ನು ಜೋಡಿಸಲಾಗಿದೆ. ಈ ಉಂಗುರದ ತೂಕ 65 ಗ್ರಾಮ ಇದೆ. ಇದರಲ್ಲಿ 4 ಕ್ಯಾರೆಟ್ ವಜ್ರ ಮತ್ತು 33 ಕ್ಯಾರೆಟ್ ಪಚ್ಚೆಯನ್ನು ಜೋಡಿಸಲಾಗಿದೆ. ಉಂಗುರದ ಮಧ್ಯದಲ್ಲಿ ಗಾಢ ಹಸಿರು ಬಣ್ಣದ ಜಾಂಬಿಯನ ಪಚ್ಚೆಯನ್ನು ಜೋಡಿಸಲಾಗಿದೆ.

5. ಶ್ರೀರಾಮನ ಬಲಗೈಯಲ್ಲಿ 26 ಗ್ರಾಮ ಚಿನ್ನದ ಉಂಗುರವಿದೆ. ಇದರಲ್ಲಿಯೂ ವಜ್ರಗಳು ಮತ್ತು ಮಾಣಿಕ್ಯಗಳನ್ನು ಜೋಡಿಸಲಾಗಿದೆ.

6. ಶ್ರೀ ರಾಮಲಲ್ಲಾನ ಸೊಂಟಕ್ಕೆ ಅಲಂಕರಿಸಲು 750 ಗ್ರಾಮ ಚಿನ್ನದ ಡಾಬು ತಯಾರಿಸಲಾಗಿದೆ. ಅದು 70 ಕ್ಯಾರೆಟ ವಜ್ರಗಳನ್ನು ಮತ್ತು ಸುಮಾರು 850 ಕ್ಯಾರೆಟ ಮಾಣಿಕ್ಯಗಳನ್ನು ಒಳಗೊಂಡಿದೆ.

7. ಶ್ರೀ ರಾಮಲಲ್ಲಾನಿಗಾಗಿ 22 ಕ್ಯಾರೆಟ್ ಚಿನ್ನದ 400 ಗ್ರಾಮ ತೂಕದ ಬ್ರೆಸ್ ಲೆಟ ತಯಾರಿಸಲಾಗಿದೆ.

8. ಶ್ರೀ ರಾಮಲಲ್ಲಾನ ಎರಡೂ ಕೈಗಳಲ್ಲಿ 850 ಗ್ರಾಮ ಚಿನ್ನದ ಎರಡು ಕಡಗಗಳಿವೆ. ಅದರಲ್ಲಿ 100 ವಜ್ರಗಳು ಮತ್ತು 320 ಪಚ್ಚೆ ಮತ್ತು ಮಾಣಿಕ್ಯಗಳನ್ನು ಜೋಡಿಸಲಾಗಿದೆ.

9. ಶ್ರೀ ರಾಮಲಲ್ಲಾನ ಕೈಯಲ್ಲಿರುವ ಬಿಲ್ಲು ಮತ್ತು ಬಾಣ 22 ಕ್ಯಾರೆಟ್ ನ 1 ಕೆಜಿ ಚಿನ್ನದಿಂದ ತಯಾರಿಸಲಾಗಿದೆ.