ಜನವರಿ 23 ರಂದು ಮಧ್ಯಾಹ್ನದವರೆಗೆ 3 ಲಕ್ಷ ಹಿಂದೂಗಳು ರಾಮಲಲ್ಲಾನ ದರ್ಶನವನ್ನು ಪಡೆದರು !

6 ಡಿಗ್ರಿ ತಾಪಮಾನದಲ್ಲಿಯೂ ಮಂದಿರದ ಹೊರಗೆ ಜಮಾಯಿಸಿದ ಭಕ್ತರು !

ಅಯೋಧ್ಯೆ (ಉತ್ತರ ಪ್ರದೇಶ) – ಪ್ರಭು ಶ್ರೀರಾಮನ ಮಂದಿರವನ್ನು ನಿರ್ಮಿಸುವ ಹಿಂದೂಗಳ ಕನಸು ಜನವರಿ 22 ರಂದು ಅಂದರೆ ಸುಮಾರು ಐದೂವರೆ ನೂರು ವರ್ಷಗಳ ನಂತರ ಪೂರ್ಣಗೊಂಡಿತು. ಅದರ ನಂತರ, ಜನವರಿ 23 ರಿಂದ ದೇವಸ್ಥಾನವು ಎಲ್ಲಾ ಭಕ್ತರಿಗಾಗಿ ತೆರೆಯಲಾಯಿತು. ಇಂತಹದರಲ್ಲಿಯೇ ಜನವರಿ 23 ರ ಮಧ್ಯಾಹ್ನದವರೆಗೆ, ಒಟ್ಟು 3 ಲಕ್ಷ ಹಿಂದೂಗಳು ತಮ್ಮ ಆರಾಧ್ಯ ದೇವರ ದರ್ಶನ ಪಡೆದರು. ಸಧ್ಯ 6 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದರೂ, ದರ್ಶನವನ್ನು ಪಡೆಯಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ರಾಮನ ನಗರವನ್ನು ತಲುಪಿದ್ದಾರೆ.