‘ಕಾಂಗ್ರೆಸ್ ಮ. ಗಾಂಧಿಯ ರಾಮನ ಪೂಜೆ ಮಾಡುತ್ತದೆ ಹಾಗೂ ಭಾಜಪ ರಾಮನಿಗೆ ಸೀತಾ ಮತ್ತು ಲಕ್ಷ್ಮಣನರಿಂದ ದೂರ ಒಯ್ಯುತ್ತದೆ ! – ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ದಾವೆ !

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು – ನಾನು ನನ್ನ ಗ್ರಾಮದಲ್ಲಿ ಶ್ರೀರಾಮ ಮಂದಿರ ಕಟ್ಟಿಸಿದ್ದೇನೆ. ಇದನ್ನು ರಾಜಕೀಯ ಕಾರಣಕ್ಕಾಗಿ ಮಾಡಲಿಲ್ಲ. ಅಯೋಧ್ಯೆಯಲ್ಲಿನ ಶ್ರೀರಾಮಚಂದ್ರ ಸಂಪೂರ್ಣ ಭಾರತದಲ್ಲಿನ ಗ್ರಾಮಗಳಲ್ಲಿರುವ ಶ್ರೀರಾಮಚಂದ್ರನಗಿಂತಲೂ ಭಿನ್ನವಾಗಿ ಇದ್ದಾರೆಯೆ ? ಭಾಜಪ ಪ್ರಭು ಶ್ರೀರಾಮನ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಮ. ಗಾಂಧಿಯ ರಾಮನ ಪೂಜೆ ಮಾಡುತ್ತದೆ ಹಾಗೂ ಭಾಜಪದವರು ಶ್ರೀ ರಾಮನನ್ನು ಸೀತಾ, ಲಕ್ಷ್ಮಣ ಮತ್ತು ಹನುಮಂತನಿಂದ ದೂರ ತೆಗೆದುಕೊಂಡು ಹೋಗುತ್ತಿದ್ದಾರೆ, ಎಂದು ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಶ್ರೀರಾಮ ಮಂದಿರದ ಉದ್ಘಾಟನೆಯ ನಂತರ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರುವಾಗ ದಾವೆ ಮಾಡಿದರು.

ಸಿದ್ದರಾಮಯ್ಯ ಇವರು ಮಾತು ಮುಂದುವರೆಸುತ್ತಾ, ರಾಮನ ಕುರಿತು ರಾಜಕಾರಣ ಆಗಬಾರದು; ಕಾರಣ ಶ್ರೀರಾಮಚಂದ್ರ ಎಲ್ಲರವರಾಗಿದ್ದಾರೆ. ಅವರು ಕೇವಲ ಭಾಜಪದವರಿಗೆ ಮೀಸಲಿಲ್ಲ. ನಾವು ಕೂಡ ರಾಮಭಕ್ತರೇ ಆಗಿದ್ದೇವೆ. ‘ನಾವು ಶ್ರೀ ರಾಮನನ್ನು ವಿರೋಧಿಸುತ್ತೇವೆ’, ಹೀಗೆ ಚಿತ್ರಿಸುವ ಪ್ರಯತ್ನ ಭಾಜಪ ಮಾಡುತ್ತಿದೆ. ಆದರೆ ಅದು ಯೋಗ್ಯವಾಗಿಲ್ಲ, ಹೀಗೂ ಕೂಡ ಅವರು ಹೇಳಿದರು. ಭವಿಷ್ಯದಲ್ಲಿ ಅಯೋಧ್ಯೆಗೆ ಹೋಗಿ ರಾಮನ ದರ್ಶನ ಪಡೆಯುವೆವು ಎಂದು ಸಿದ್ದರಾಮಯ್ಯ ಇವರು ಹೇಳಿದರು.

(ಸೌಜನ್ಯ: News18 Kannada)

ಸಂಪಾದಕರ ನಿಲುವು

*’ಮ. ಗಾಂಧಿ ಇವರ ರಾಮ ಎಂದರೆ ಏನು ?’, ಇದನ್ನು ಕಾಂಗ್ರೆಸ್ ಮೊದಲು ಸ್ಪಷ್ಟಪಡಿಸಬೇಕು ! ಕಾರಣ ಹಿಂದೂಗಳ ‘ರಾಮ’ ರಾವಣನ ಸಹಿತ ಅಸಂಖ್ಯ ಅಸುರರ ನಾಶ ಮಾಡಿ ಜನರ ರಕ್ಷಣೆ ಮಾಡುವವನಾಗಿದ್ದಾನೆ !

* ಕಾಂಗ್ರೆಸ್ ನಿಜವಾಗಿ ಶ್ರೀರಾಮನ ಪೂಜೆ ಮಾಡುತ್ತಿದ್ದರೆ, ಸ್ವಾತಂತ್ರ್ಯದ ನಂತರ ತಕ್ಷಣ ಅಯ್ಯೋಧ್ಯೆಯಲ್ಲಿ ಭವ್ಯಮಂದಿರ ಕಟ್ಟಿಸುತ್ತಿತ್ತು; ಆದರೆ ಕಾಂಗ್ರೆಸ್ಸಿಗರು ಶ್ರೀರಾಮನಿಗೆ ಕಾಲ್ಪನಿಕ ಎಂದು ಹೇಳಿ ರಾಮಸೇತು ನಾಶ ಮಾಡುವ ಪ್ರಯತ್ನ ಮಾಡಿತು. ಕಾಂಗ್ರೆಸ್ ಹಿಂದಿನಿಂದಲೂ ಟಿಪ್ಪು ಸುಲ್ತಾನ್, ಔರಂಗಜೇಬ್, ಬಾಬರ್, ಅಕ್ಬರ್ ಇವರಿಗೆ ಜೈಕಾರ ಹಾಕುತ್ತದೆ ಮತ್ತು ಇಂದು ಕೂಡ ಅದನ್ನೇ ಮಾಡುತ್ತಿದೆ.