ಅಯೋಧ್ಯೆ (ಉತ್ತರಪ್ರದೇಶ) – ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ನಂತರ ಗರ್ಭಗುಡಿಯು ದೈವಿ ರೂಪದಲ್ಲಿ ಕಂಗೊಳಿಸುತ್ತಿದೆ. ತ್ರೇತಾಯುಗದಲ್ಲಿ ಯಾವಾಗ ಪ್ರಭು ಶ್ರೀರಾಮ ಸಿಂಹಾಸನದ ಮೇಲೆ ಆರೂಢರಾದರೋ, ಆ ಸಮಯದಲ್ಲಿ ಯಾವ ವಾತಾವರಣವಿತ್ತು, ಅದೇ ಇಂದು ಇದೆ. ಈ ಸಮಯದಲ್ಲಿ ಕೂಡ ತ್ರೆತಾಯುಗದ ನೋಟ ನೋಡಲು ಸಿಗುತ್ತಿದೆ, ಎಂದು ಶ್ರೀರಾಮಲಲ್ಲಾನ ಮುಖ್ಯ ಅರ್ಚಕರು ಸತ್ಯೇಂದ್ರ ದಾಸ ಇವರು ಅಭಿಪ್ರಾಯ ಪಟ್ಟರು. ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಶ್ರೀರಾಮ ಮಂದಿರದಲ್ಲಿ ಮೊಬೈಲ್ ನಿಷೇಧ
ಶ್ರೀರಾಮ ಮಂದಿರದಲ್ಲಿ ಪ್ರವೇಶಿಸಲು ಭಕ್ತರು ಬಿಗಿ ಭದ್ರತೆಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ದೇವಸ್ಥಾನದಲ್ಲಿ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ನಿಷೇಧ ಇದೆ. ಅಲ್ಲಿ ಮೊಬೈಲ್, ಕ್ಯಾಮೆರಾ ಮುಂತಾದ ವಸ್ತುಗಳು ತೆಗೆದುಕೊಂಡು ಹೋಗಲು ನಿಷೇಧಿಸಿದೆ. ಭಕ್ತರು ದೇವಸ್ಥಾನದಲ್ಲಿ ಹೋಗುವಾಗ ಪೇಡಾ, ಹಣ್ಣುಗಳು ಅಥವಾ ಇತರ ವಸ್ತುಗಳು ಕೂಡ ತೆಗೆದುಕೊಂಡು ಹೋಗಬಾರದು.
ಆರತಿಗಾಗಿ ಪಾಸ್ ಕಡ್ಡಾಯ !
ಆರತಿಗೆ ಉಪಸ್ಥಿತ ಇರುವುದಕ್ಕಾಗಿ ಭಕ್ತರು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನಿಂದ ಪಾಸ್ ತೆಗೆದುಕೊಳ್ಳಬೇಕಾಗುತ್ತದೆ. ಈ ಪಾಸ್ ಉಚಿತವಾಗಿ ನೀಡುವರು. ಇದಕ್ಕಾಗಿ ಆಧಾರ ಕಾರ್ಡ್ ಸಹಿತ ಯಾವುದೇ ಕಾನೂನಿನ ಮಾನ್ಯತೆ ಪಡೆದಿರುವ ಗುರುತಿನ ಚೀಟಿ ಆವಶ್ಯಕವಾಗಿದೆ. ಈಗ ಕೇವಲ ೩೦ ಜನರಿಗೆ ಮಾತ್ರ ಆರತಿಯ ಸಮಯದಲ್ಲಿ ಉಪಸ್ಥಿತರಿರಲು ಅನುಮತಿ ಇದೆ. ಭಕ್ತರು ಬೆಳಿಗ್ಗೆ ೬.೩೦, ೧೧.೩೦ ಮತ್ತು ಸಂಜೆ ೬.೩೦ ಗಂಟೆಗೆ ಆರತಿಯಲ್ಲಿ ಸಹಭಾಗಿ ಆಗಬಹುದು . ಆನ್ಲೈನ್ ಪಾಸ್ srjbtkshetra.org ಈ ಜಾಲತಾಣದ ಮೂಲಕ ಪಡೆಯಬಹುದು.
ಆರತಿಯ ಸಮಯ
ಮೊದಲನೆಯ ಆರತಿ ಬೆಳಿಗ್ಗೆ ೪.೩೦ ಗಂಟೆಗೆ : ಮಂಗಳಾರತಿ ಇದು ದೇವರನ್ನು ಎಬ್ಬಿಸುವುದಕ್ಕಾಗಿ ಮಾಡುತ್ತಾರೆ.
ಎರಡನೆಯ ಆರತಿ ೬.೩೦ ಗಂಟೆಗೆ : ಶೃಂಗಾರ ಆರತಿ ಸಮಯದಲ್ಲಿ ಯಂತ್ರ ಪೂಜೆ, ಸೇವೆ ಮತ್ತು ನೈವೇದ್ಯ ಆಗುವುದು.
ಮೂರನೆಯ ಆರತಿ ೧೧.೩೦ ಗಂಟೆಗೆ : ರಾಜಭೋಗ ಆರತಿ (ಮಧ್ಯಾಹ್ನದ ನೈವೇದ್ಯದ ಸಮಯ) ಆಗುವುದು. ಅದರ ನಂತರ ರಾಮಲಲ್ಲಾ ಎರಡುವರೆ ಗಂಟೆ ವಿಶ್ರಾಂತಿ ಪಡೆಯುವರು. ಗರ್ಭಗುಡಿ ಮುಚ್ಚಲಾಗುವುದು. ಈ ಸಮಯದಲ್ಲಿ ಭಕ್ತರು ಮಂದಿರ ಪರಿಸರ ವೀಕ್ಷಿಸಬಹುದು.
ನಾಲ್ಕನೆಯ ಆರತಿ ಮಧ್ಯಾಹ್ನ ೨.೩೦ ಗಂಟೆಗೆ : ಇದರಲ್ಲಿ ಅರ್ಚಕರು ಶ್ರೀ ರಾಮಲಲ್ಲಾ ನನ್ನು ನಿದ್ರೆಯಿಂದ ಎಬ್ಬಿಸುವರು.
ಐದನೆಯ ಆರತಿ ಸಂಜೆ ೬.೩೦ ಗಂಟೆಗೆ ಇರುವುದು.
ಆರನೆಯ ಆರತಿ ರಾತ್ರಿ ೮.೩೦ ಗಂಟೆಗೆ : ಇದಕ್ಕೆ ಶಯನ ಆರತಿ ಅನ್ನುತ್ತಾರೆ. ಇದರ ನಂತರ ಶ್ರೀರಾಮಲಲ್ಲಾ ನಿದ್ರಿಸುವರು.
(ಸೌಜನ್ಯ: OTV News English)